ಮಣ್ಣಿನೊಳಗೆ ಹೂತು ಹೋಗಿದ್ದ, ಚೌಡಿ ಕಲ್ಲೆಂದು ಗ್ರಾಮಸ್ಥರ ಭಯಭಕ್ತಿಗೆ ಕಾರಣವಾಗಿದ್ದ ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಅರಸರ ಕಾಲದ ದಾನ ಶಾಸನವೊಂದು ತೀರ್ಥಹಳ್ಳಿಯ ಗುಡ್ಡೇಕೊಪ್ಪ ಬಳಿ ದೊರೆತಿದೆ. ಸಂಶೋಧಕ ಎಲ್.ಎಸ್.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್.ಸತ್ಯನಾರಾಯಣ ಈ ಕಲ್ಲನ್ನು ಸಂಶೋಧನೆ ಮಾಡಿದ್ದಾರೆ.
ತೀರ್ಥಹಳ್ಳಿ (ಜು.29).: ಮಣ್ಣಿನೊಳಗೆ ಹೂತು ಹೋಗಿದ್ದ, ಚೌಡಿ ಕಲ್ಲೆಂದು ಗ್ರಾಮಸ್ಥರ ಭಯಭಕ್ತಿಗೆ ಕಾರಣವಾಗಿದ್ದ ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಅರಸರ ಕಾಲದ ದಾನ ಶಾಸನವೊಂದು ತೀರ್ಥಹಳ್ಳಿಯ ಗುಡ್ಡೇಕೊಪ್ಪ ಬಳಿ ದೊರೆತಿದೆ. ಸಂಶೋಧಕ ಎಲ್.ಎಸ್.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್.ಸತ್ಯನಾರಾಯಣ ಈ ಕಲ್ಲನ್ನು ಸಂಶೋಧನೆ ಮಾಡಿದ್ದಾರೆ.
ಗುಡ್ಡೇಕೊಪ್ಪದ ಕೃಷಿಕ ಹೊಸತೋಟ ವಿಶ್ವನಾಥ ಅವರ ತೋಟದ ಸಮೀಪದಲ್ಲಿ ಅರ್ಧ ಮಣ್ಣಿನೊಳಗೆ ಹೂತು ಹೋಗಿದ್ದ ದಾನ ಶಾಸನದ ಈ ಕಲ್ಲು ಮತ್ತೆ ಬೆಳಕಿಗೆ ಬರಲು ವಿಶ್ವನಾಥ ಎಂಬವರ ಆಸಕ್ತಿ ಕಾರಣವಾಗಿದ್ದು, ಆಸಕ್ತರ ಗಮನ ಸೆಳೆದಿದೆ. ಈ ಕಲ್ಲಿನಲ್ಲಿ ಅಲ್ಲಲ್ಲಿ ಅಕ್ಷರ ಅಳಿಸಿಹೋಗಿರುವ ಸಾಲುಗಳು, ಯಾವ ರಾಜರ ಕಾಲದಲ್ಲಿ ಎನ್ನುವುದು ತಿಳಿಯುವುದಿಲ್ಲ.
undefined
ಎಪಿಗ್ರಾಫಿಯಾ ಕರ್ನಾಟಕ ಗ್ರಂಥದ ಸಂಪುಟ 13ರ ಪುಟ 416ರಲ್ಲಿ ದಾಖಲಾಗಿರುವಂತೆ ಒಂದಿಷ್ಟುವಿವರಗಳಿವೆ. ಸುಮಾರು 14-15ನೇ ಶತಮಾನ ಎಂದು ಅಂದಾಜಿಸಿದೆ. ಸುಮಾರು 47 ಸಾಲುಗಳಿರುವ ದಾನ ಶಾಸನದ ವಿವರಗಳನ್ನು ಪತ್ತೆಹಚ್ಚಲಾಗಿದೆ. ಭೂಮಿ ದಾನ ಕೊಟ್ಟಿರುವ ಬಗ್ಗೆ ಅಪೂರ್ವ ದಾನ ಶಿಲಾ ಶಾಸನ ಇದಾಗಿದೆ ಎಂದು ತಿಳಿಸಲಾಗಿದೆ.
ತೆಲಂಗಾಣದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ: ಜೈನ ತೀರ್ಥಂಕರರ ಶಿಲ್ಪ, ಶಾಸನ ಹೊಂದಿರುವ ಕಂಬ!