ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆ; ಹಂಪಿಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಬೀಳಲಿ ಕಡಿವಾಣ

By Kannadaprabha NewsFirst Published Sep 4, 2023, 12:00 PM IST
Highlights

ವಿಶ್ವವಿಖ್ಯಾತ ಹಂಪಿಯಲ್ಲಿ ಭಾರಿ ವಾಹನಗಳ ಓಡಾಟದಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಾಗಿ ನಿಯಮ ಪಾಲನೆಯಾಗದ್ದರಿಂದ ಈ ಅವಾಂತರಗಳು ಸೃಷ್ಟಿಯಾಗುತ್ತಿದೆ. ಹಂಪಿಯಲ್ಲಿ ಪ್ರವಾಸಿಗರ ಬಸ್‌ಗಳ ಓಡಾಟ ಹಾಗೂ ಇತರೆ ವಾಹನಗಳಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ ಕೂಡಲೇ ಕ್ರಮ ಕೈಗೊಳ್ಳುಬೇಕೆಂಬ ಕೂಗು ಯುವಕರ ವಲಯದಿಂದ ಕೇಳಿಬಂದಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಸೆ.4) :  ವಿಶ್ವವಿಖ್ಯಾತ ಹಂಪಿಯಲ್ಲಿ ಭಾರಿ ವಾಹನಗಳ ಓಡಾಟದಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಾಗಿ ನಿಯಮ ಪಾಲನೆಯಾಗದ್ದರಿಂದ ಈ ಅವಾಂತರಗಳು ಸೃಷ್ಟಿಯಾಗುತ್ತಿದೆ. ಹಂಪಿಯಲ್ಲಿ ಪ್ರವಾಸಿಗರ ಬಸ್‌ಗಳ ಓಡಾಟ ಹಾಗೂ ಇತರೆ ವಾಹನಗಳಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ಹಂಪಿಯಲ್ಲಿ ಪರಿಸರಸ್ನೇಹಿ ಆಟೋಗಳ ಓಡಾಟಕ್ಕೆ ಅವಕಾಶ ನೀಡಿದರೆ ಉದ್ಯೋಗವೂ ಸೃಷ್ಟಿಯಾಗಲಿದೆ ಎಂಬ ಕೂಗು ಈಗ ಯುವಕರ ವಲಯದಿಂದ ಕೇಳಿ ಬರುತ್ತಿದೆ.

ಹಂಪಿಯ ತಳವಾರ ಘಟ್ಟದ ಹರೇ ಶಂಕರ ದ್ವಾರ ಬಾಗಿಲು ಹಾಗೂ ಶ್ರೀಕೃಷ್ಣ ದೇವಾಲಯದ ಪ್ರವೇಶದ್ವಾರಕ್ಕೆ ಹಲವು ಬಾರಿ ಧಕ್ಕೆ ಕೂಡ ಉಂಟಾಗುತ್ತಿದೆ. ಪ್ರವಾಸಿಗರು ಖಾಸಗಿ ಬಸ್‌ಗಳಲ್ಲಿ ಆಗಮಿಸುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ಇತರೆ ಭಾರಿ ವಾಹನಗಳು ಓಡಾಡುತ್ತಿವೆ. ಹಂಪಿಯಲ್ಲಿ ಸಾರಿಗೆ ಇಲಾಖೆ ಮಿನಿ ಬಸ್‌ ವ್ಯವಸ್ಥೆ ಮಾಡಿದೆ. ಹೊಸಪೇಟೆ- ಕಮಲಾಪುರ- ಹಂಪಿ ಮಾರ್ಗವಾಗಿ ಮಿನಿ ಬಸ್‌ಗಳು ಓಡಾಡುತ್ತಿವೆ. ಆದರೆ, ಪ್ರವಾಸಿಗರು ಖಾಸಗಿ ಬಸ್‌ಗಳನ್ನು ಬಾಡಿಗೆಗೆ ಪಡೆದು ಆಗಮಿಸುತ್ತಿರುವುದರಿಂದ; ಈ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಈ ಐತಿಹಾಸಿಕ ಸ್ಮಾರಕಗಳಿಗೂ ಧಕ್ಕೆ ಉಂಟಾಗುತ್ತಿದೆ.

ವಿಜಯನಗರ: ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣುಮುಕ್ಕ ಹಾವು ಪತ್ತೆ..!

ಯುನೆಸ್ಕೊ ಸಲಹೆ:

ಹಂಪಿಯ ತಳವಾರ ಘಟ್ಟದ ಹರೇ ಶಂಕರ ಪ್ರವೇಶ ದ್ವಾರಕ್ಕೆ ಧಕ್ಕೆಯಾದಾಗ 2002ರಲ್ಲಿ ಮತ್ತು ಇತ್ತೀಚೆಗೆ ಕೂಡ ಯುನೆಸ್ಕೊ ತಂಡ ಈ ಸ್ಮಾರಕದ ಸಂರಕ್ಷಣೆಗೆ ಕೇಂದ್ರ ಪುರಾತತ್ವ ಇಲಾಖೆಗೆ ಸೂಚಿಸಿದೆ. ಈ ಸ್ಮಾರಕಗಳ ಬಳಿ ಕಬ್ಬಿಣದ ರಾಡ್‌ಗಳನ್ನು ಕೂಡ ಅಳವಡಿಕೆ ಮಾಡಲಾಗಿದೆ. ಜತೆಗೆ ಕಾವಲುಗಾರರನ್ನು ಸರದಿ ಮೇಲೆ ನಿಯೋಜನೆ ಮಾಡಲಾಗಿದೆ. ಆದರೂ ಸ್ಮಾರಕಗಳ ಬಳಿ ವಾಹನಗಳು ಆಗಮಿಸಿ ಸಮಸ್ಯೆ ಧಕ್ಕೆಯಾಗುತ್ತಿದೆ.

ಬ್ಯಾಟರಿ ಚಾಲಿತ ವಾಹನ:

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯದವರೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಿದೆ. ಪರಿಸರ ಸಂರಕ್ಷಣೆಗೆ ಈ ಒಂದು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಈ ಭಾಗದಲ್ಲಿ ಸ್ಮಾರಕಗಳಿಗೆ ಧಕ್ಕೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಈ ಬ್ಯಾಟರಿ ಚಾಲಿತ ವಾಹನಗಳಲ್ಲೇ ವಿಜಯ ವಿಠ್ಠಲ ದೇವಾಲದ ಪ್ರದೇಶದಲ್ಲಿ ಪ್ರವಾಸಿಗರು ಸ್ಮಾರಕಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.

ಆಟೋಗಳಿಗೆ ಬೇಡ ನಿರ್ಬಂಧ:

ಹಂಪಿಯಲ್ಲಿ ಎಲ್‌ಪಿಜಿ ಮತ್ತು ಎಲೆಕ್ಟ್ರಿಕಲ್‌ ಆಟೋಗಳ ಓಡಾಟಕ್ಕೆ ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯದವರೆಗೂ ಅವಕಾಶ ನೀಡಬೇಕು. ಆರ್‌ಟಿಒ ಕಚೇರಿಯೇ ದೃಢಪಡಿಸಿರುವ ಎಲ್‌ಪಿಜಿ ಮತ್ತು ಎಲೆಕ್ಟ್ರಿಕಲ್‌ ಆಟೋಗಳ ಓಡಾಟಕ್ಕೆ ವಿಜಯ ವಿಠ್ಠಲ ದೇವಾಲಯದ ಬಳಿ ಅವಕಾಶ ನೀಡಬೇಕು. ಇದರಿಂದ ಪ್ರವಾಸಿಗರಿಗೂ ಅನುಕೂಲವಾಗಲಿದೆ, ಕಾರು, ಟ್ಯಾಕ್ಸಿ, ಬಸ್‌ಗಳಲ್ಲಿ ಆಗಮಿಸುವ ಪ್ರವಾಸಿಗರು ಹಂಪಿಯ ಸ್ಮಾರಕಗಳನ್ನು ಆಟೋಗಳಲ್ಲಿ ತೆರಳಿ ವೀಕ್ಷಣೆ ಮಾಡಲು ಅವಕಾಶ ನೀಡಬೇಕು ಎಂದು ಹೇಳುತ್ತಾರೆ ಸಿಐಟಿಯು ಸಂಯೋಜಿತ ಆಟೋ ಚಾಲಕರ ಸಂಘದ ಮುಖಂಡ ಕೆ.ಎಂ. ಸಂತೋಷ್‌.

ಉದ್ಯೋಗ ಸೃಷ್ಟಿಗೆ ಅವಕಾಶ:

ಹಂಪಿಯ ವಿಜಯ ವಿಠ್ಠಲ ದೇವಾಲಯದ ಪ್ರದೇಶಕ್ಕೂ ಆಟೋಗಳ ಓಡಾಟಕ್ಕೆ ಅವಕಾಶ ನೀಡಿದರೆ ಈ ಭಾಗದ ಯುವಕರಿಗೆ ಉದ್ಯೋಗವೂ ದೊರೆಯಲಿದೆ. ಎಲ್‌ಪಿಜಿ ಮತ್ತು ಎಲೆಕ್ಟ್ರಿಕಲ್‌ ಆಟೋಗಳ ಓಡಾಟಕ್ಕೆ ಅವಕಾಶ ನೀಡಿದರೆ, ಪರಿಸರ ಸಂರಕ್ಷಣೆ ಕೂಡ ಆಗಲಿದೆ. ಪ್ರಾಧಿಕಾರದ ನಿಯಮ ಕೂಡ ಪಾಲಿಸಿದಂತಾಗಲಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಗಲಿದೆ. ಇದರೊಂದಿಗೆ ಸ್ಮಾರಕಗಳಿಗೆ ಭಾರಿ ವಾಹನಗಳಿಗೆ ಉಂಟಾಗುತ್ತಿರುವ ಧಕ್ಕೆಯನ್ನು ತಪ್ಪಿಸಬಹುದಾಗಿದೆ.

ಹಂಪಿಯಲ್ಲಿ ಎಲ್‌ಪಿಜಿ ಮತ್ತು ಎಲೆಕ್ಟ್ರಿಕಲ್‌ ಆಟೋಗಳ ಓಡಾಟಕ್ಕೆ ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯದವರೆಗೂ ಓಡಾಟಕ್ಕೆ ಅವಕಾಶ ನೀಡಬೇಕು. ಇದರಿಂದ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಜತೆಗೆ ಪ್ರವಾಸೋದ್ಯಮದಿಂದ ಆಟೋ ಚಾಲಕರಿಗೂ ಉದ್ಯೋಗ ಸಿಗಲಿದೆ.

ಕೆ.ಎಂ. ಸಂತೋಷ್‌, ಮುಖಂಡರು, ಸಿಐಟಿಯು ಸಂಯೋಜಿತ ಆಟೋ ಚಾಲಕರ ಸಂಘ, ಹೊಸಪೇಟೆ

ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ 

ಹಂಪಿಯಲ್ಲಿ ಭಾರಿ ವಾಹನಗಳ ಓಡಾಟದಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪರಿಸರಸ್ನೇಹಿ ಆಟೋಗಳ ಓಡಾಟಕ್ಕೆ ಅವಕಾಶ ನೀಡಿದರೆ ಕೆಲಸ ಇಲ್ಲದೇ ನಿರುದ್ಯೋಗಿಯಾಗಿರುವ ನಮ್ಮಂಥ ಯುವಕರಿಗೆ ಅನುಕೂಲವಾಗಲಿದೆ. ವಿಜಯ ವಿಠ್ಠಲ ದೇವಾಲಯದ ಸ್ಮಾರಕದ ಬಳಿ ಆಟೋಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರ ಬದಲಿಗೆ ಪರಿಸರಸ್ನೇಹಿ ಆಟೋಗಳ ಓಡಾಟಕ್ಕೆ ಅವಕಾಶ ನೀಡಿದರೆ, ಪ್ರವಾಸೋದ್ಯಮದಿಂದ ಉದ್ಯೋಗ ಕೂಡ ಸಿಗಲಿದೆ.

ಚಂದ್ರು, ನವೀನ್‌ ಕಮಲಾಪುರ ನಿವಾಸಿಗಳು

click me!