
ತುಮಕೂರು (ಸೆ.12) : ಪತಿ-ಪತ್ನಿ ಇಬ್ಬರು ಸರ್ಕಾರಿ ಅಧಿಕಾರಿಗಳಾಗಿದ್ದಲ್ಲಿ ಪರಸ್ಪರ ಭೇಟಿಯಾಗುವುದೇ ಅಪರೂಪ ಎಂಬ ಮಾತಿದೆ. ಪತಿ ಯಾವುದೋ ಜಿಲ್ಲೆಗೆ ವರ್ಗಾವಣೆಯಾದರೆ ಪತ್ನಿ ಇನ್ನೆಲ್ಲ ನೌಕರಿ ಮಾಡ್ತಿರ್ತಾಳೆ. ಹೀಗಾಗಿ ಒಟ್ಟಿಗೆ ಬದುಕುವುದೇ ದುಸ್ತರ. ಇನ್ನೂ ಪತಿ-ಪತ್ನಿ ಐಎಎಸ್, ಐಪಿಎಸ್ ಆಫೀಸ್ ಆಗಿದ್ರಂತೂ ಒಂದೇ ರಾಜ್ಯ, ಒಂದೇ ಜಿಲ್ಲೆ ಸಿಗುವುದು ಕಷ್ಟಸಾಧ್ಯ, ಒಮ್ಮೊಮ್ಮೆ ಅದೃಷ್ಟ ಖುಲಾಯಿಸಿ ಒಂದೇ ಜಿಲ್ಲೆಗೆ ವರ್ಗಾವಣೆಯಾಗುವುದುಂಟು. ಅಂತದ್ದೇ ಅದೃಷ್ಟದ ಕತೆ ಇಲ್ಲಿದೆ ನೋಡಿ.
ಐಎಎಸ್ ಅಧಿಕಾರಿಯಾದ ಅಶ್ವಿಜಾ ತುಮಕೂರು ಪಾಲಿಕೆ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಇವರ ಪತಿ ಐಪಿಎಸ್ ಅಧಿಕಾರಿ ಅಶೋಕ್ ಕೆ.ವಿ ತುಮಕೂರು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಪತಿ- ಪತ್ನಿ ಇಬ್ಬರೂ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಪರೂಪದ ಸನ್ನಿವೇಶವೊಂದು ಸೃಷ್ಟಿಯಾಗಿದೆ.
ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ತಲುಪಬೇಕು: ಟಿ.ಬಿ.ಜಯಚಂದ್ರ
2017ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾದ ಅಶೋಕ್ ಅವರನ್ನು ತುಮಕೂರು ಜಿಲ್ಲೆಯ ಎಸ್ಪಿಯಾಗಿ ಮೊನ್ನೆಯಷ್ಟೇ ವರ್ಗಾವಣೆಯಾಗಿ ಬಂದಿದ್ದಾರೆ. ಇನ್ನು ಕಳೆದ ಕೆಲ ತಿಂಗಳ ಹಿಂದಷ್ಟೇ ಅಶೋಕ್ ಅವರ ಪತ್ನಿ ಐಎಎಸ್ ಅಧಿಕಾರಿಯಾಗಿರುವ ಅಶ್ವಿಜಾ ತುಮಕೂರು ಪಾಲಿಕೆಯ ಅಧಿಕಾರಿಯಾಗಿ ನೇಮಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಶ್ವಿಜಾ 2019ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಎರಡೂ ಸೇವೆಗಳು ನಾಗರೀಕ ಸೇವೆಯದ್ದಾಗಿದ್ದು, ಇಬ್ಬರ ಬಗ್ಗೆಯೂ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಂಡೇ ಸುಮ್ನೆ ಮನೇಲಿ ಕೂರೋದ್ಯಾಕೆ, ಬೆಂಗಳೂರಿಂದ ಜಸ್ಟ್ 70 ಕಿಮೀ ದೂರದ ಈ ಸುಂದರ ಜಾಗಕ್ಕೆ ಹೋಗ್ಬನ್ನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ