ಕರ್ನಾಟಕದಲ್ಲಿ ಶನಿವಾರ ಕೊರೋನಾ ದಾಖಲೆ: ಇಲ್ಲಿದೆ ನಿಮ್ಮ ಜಿಲ್ಲೆಯ ಸೋಂಕಿತರ ಸಂಖ್ಯೆ

By Suvarna NewsFirst Published Sep 5, 2020, 7:07 PM IST
Highlights

ಕರ್ನಾಟಕದಲ್ಲಿ ಶನಿವಾರ ಕೊರೋನಾ ಬ್ಲಾಸ್ಟ್ ಆಗಿದೆ. ಇದು ಈವರೆಗೆ ದಾಖಲೆಯಾಗಿದೆ. ಹಾಗಾದ್ರೆ, ಎಷ್ಟು ಪ್ರಕರಣಳು? ಎಷ್ಟು ಸಾವು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಸೆ.05) : ರಾಜ್ಯದಲ್ಲಿ ಇಂದು (ಶನಿವಾರ) ದಾಖಲೆಯ 9,746 ಕೊರೋನಾ ಕೇಸ್ ಪತ್ತೆಯಾಗಿವೆ. ಈ ಮೂಲಕ  ಸೋಂಕಿತರ ಸಂಖ್ಯೆ 3,89,232ಕ್ಕೆ ಏರಿಕೆಯಾಗಿದೆ.

ಳೆದ 24 ಗಂಟೆಗಳಲ್ಲಿ ಕಿಲ್ಲರ್ ಕೊರೋನಾಗೆ 128 ಸೋಂಕಿತರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೇರಿದೆ. ಗುಣಮುಖರಾದವರ ಪ್ರಮಾಣದಲ್ಲೂ ಏರಿಕೆ ಕಂಡಿದ್ದು,  ಶನಿವಾರ 9102 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

40 ಲಕ್ಷ ದಾಟಿದ ಕೊರೋನಾ,  ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಕತೆ ಏನಾಗಬಹುದು? 

ಈವರೆಗೆ ಒಟ್ಟು 28 3298 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ 99617 ಸಕ್ರೀಯಾ ಪ್ರಕರಣಗಳಿವೆ. ಇದರಲ್ಲಿ 769 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಜಿಲ್ಲಾವಾರು ಕೊರೋನಾ ಪ್ರಕರಣಗಳು 
ಬಾಗಲಕೋಟೆ - 144, ಬಳ್ಳಾರಿ - 366, ಬೆಳಗಾವಿ - 473, ಬೆಂಗಳೂರು ಗ್ರಾಮಾಂತರ - 124, ಬೆಂಗಳೂರು ನಗರ - 3093, ಬೀದರ್ - 119, ಚಾಮರಾಜನಗರ - 31, ಚಿಕ್ಕಬಳ್ಳಾಪುರ - 133, ಚಿಕ್ಕಮಗಳೂರು - 238, ಚಿತ್ರದುರ್ಗ - 240, ದಕ್ಷಿಣ ಕನ್ನಡ - 377, ದಾವಣಗೆರೆ - 395, ಧಾರವಾಡ - 227, ಗದಗ - 195, ಹಾಸನ - 347, ಹಾವೇರಿ - 188, ಕಲಬುರಗಿ - 198, ಕೊಡಗು - 28, ಕೋಲಾರ - 112, ಕೊಪ್ಪಳ - 243, ಮಂಡ್ಯ - 246, ಮೈಸೂರು - 790, ರಾಯಚೂರು - 186, ರಾಮನಗರ - 92, ಶಿವಮೊಗ್ಗ - 346, ತುಮಕೂರು - 192, ಉಡುಪಿ - 175, ಉತ್ತರ ಕನ್ನಡ - 207, ವಿಜಯಪುರ - 103 ಮತ್ತು ಯಾದಗಿರಿ - 138 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

click me!