* ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಏರಿಳಿತ
* ಕರ್ನಾಟಕದಲ್ಲಿ ಇಂದು (ಸೆ.06) ಕೊರೋನಾ ಭಾರಿ ಇಳಿಕೆ
* ಮತ್ತೆ ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ
ಬೆಂಗಳೂರು, (ಸೆ.06): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಏರಿಳಿತ ಮುಂದುವರೆದಿದೆ. ಒಂದು ದಿನ ಪಾಸಿಟಿವ್ ಕೇಸ್‌ಗಳಲ್ಲಿ ಕೊಂಚ ಏರಿಕೆಯಾದ್ರೆ, ಮತ್ತೊಂದು ದಿನ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ.
ಇಂದು (ಸೆ.06) ಮತ್ತೆ ಸಾವಿರಕ್ಕಿಂತ ಕಡಿಮೆ ಅಂದ್ರೆ 973 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 17 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,56,137ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 37,426ಕ್ಕೆ ಏರಿಕೆಯಾಗಿದೆ.
undefined
ಕೊರೋನಾ ಡೆತ್ ಆಡಿಟ್‌ನಲ್ಲಿ ಶಾಕಿಂಗ್ ಸಂಗತಿಗಳು ಬಯಲು!
ರಾಜ್ಯದಲ್ಲಿ ಇಂದು 1,071 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,01,299ಕ್ಕೆ ಏರಿಕೆಯಾಗಿದೆ. ಇನ್ನು17,386 ಸಕ್ರಿಯ ಪ್ರಕರಣಗಳಿವೆ.
ರಾಜ್ಯಾದ್ಯಂತ ಇಂದು 1,39,090 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 973 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.69ಕ್ಕೆ ಇಳಿದಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು(ಸೋಮವಾರ) 243 ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,38,834ಕ್ಕೆ ಏರಿಕೆಯಾಗಿದೆ. 7180 ಸಕ್ರಿಯ ಪ್ರಕರಣಗಳಿವೆ.