ರಾಜ್ಯದಲ್ಲಿ 8 ದಿನಗಳ ಬಳಿಕ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 1 ಸಾವಿರಕ್ಕಿಂತ ಕಡಿಮೆ ವರದಿಯಾಗಿದ್ದು, ಸೋಮವಾರ 939 ಹೊಸ ಪ್ರಕರಣಗಳು ಪತ್ತೆಯಾಗಿದೆ 1,204 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 76 ವರ್ಷದ ವೃದ್ದರೊಬ್ಬರು ಸಾವಿಗೀಡಾಗಿದ್ದಾರೆ.
ಬೆಂಗಳೂರು (ಜು.26): ರಾಜ್ಯದಲ್ಲಿ 8 ದಿನಗಳ ಬಳಿಕ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 1 ಸಾವಿರಕ್ಕಿಂತ ಕಡಿಮೆ ವರದಿಯಾಗಿದ್ದು, ಸೋಮವಾರ 939 ಹೊಸ ಪ್ರಕರಣಗಳು ಪತ್ತೆಯಾಗಿದೆ 1,204 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 76 ವರ್ಷದ ವೃದ್ದರೊಬ್ಬರು ಸಾವಿಗೀಡಾಗಿದ್ದಾರೆ. ಆದರೆ ಪರೀಕ್ಷೆ ಸಂಖ್ಯೆ ಕುಸಿದಿದ್ದು, ಕೇವಲ 11 ಸಾವಿರ ಸೋಂಕು ಪರೀಕ್ಷೆಗಳು ನಡೆದಿವೆ.
ಹೀಗಾಗಿ ಪಾಸಿಟಿವಿಟಿ ದರ ಶೇ.8 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 14 ಸಾವಿರ ಇಳಿಕೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 222 ಇಳಿಕೆಯಾಗಿವೆ (ಭಾನುವಾರ 1,151 ಕೇಸ್, ಸಾವು ಶೂನ್ಯ). ಸದ್ಯ 8,896 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಕಳೆದ ವಾರ 30 ಸಾವಿರ ಆಸುಪಾಸಿನಲ್ಲಿ ನಡೆಯುತ್ತಿದ್ದ ಸೋಂಕು ಪರೀಕ್ಷೆಗಳು ಈಗ ಶೇ.70 ರಷ್ಟುತಗ್ಗಿವೆ. ಹೀಗಾಗಿ, ಹೊಸ ಪ್ರಕರಣ ಇಳಿಕೆಯಾಗಿವೆ. ಭಾನುವಾರದ ಒಂದಿಷ್ಟು ಪ್ರಕರಣಗಳು ಸೋಮವಾರಕ್ಕೆ ಸೇರ್ಪಡೆಯಾಗಿವೆ.
undefined
Corona Crisis: ಬೆಂಗಳೂರಿನಲ್ಲಿ 1154 ಮಂದಿಗೆ ಕೊರೋನಾ ಸೋಂಕು ಪತ್ತೆ
ಹೀಗಾಗಿಯೇ, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಕೂಡಾ ಶೇ.8ಕ್ಕೆ ಹೆಚ್ಚಿದೆ ಎನ್ನಲಾಗಿದೆ. 8,896 ಸಕ್ರಿಯ ಸೋಂಕಿತರ ಪೈಕಿ 84 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್, 65 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 8812 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ರಾಜ್ಯದ ಸಕ್ರಿಯ ಸೋಂಕಿತರಲ್ಲಿ 7,547 ಮಂದಿ ಬೆಂಗಳೂರಿನಲ್ಲಿದ್ದಾರೆ.
ದ.ಕ.ದಲ್ಲಿ 9 ಮಂದಿಗೆ ಕೊರೋನಾ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 13 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 86 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ. 2.50 ಆಗಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,36,145ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 1,34,207 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಕೋವಿಡ್‌ನಿಂದ 1,852 ಮಂದಿ ಮೃತಪಟ್ಟಿದ್ದಾರೆ.
ಎಲ್ಲಿ, ಎಷ್ಟು ಪ್ರಕರಣಗಳು?: ಬೆಂಗಳೂರಿನಲ್ಲಿ 813 ಪತ್ತೆಯಾಗಿವೆ. ಉಳಿದಂತೆ ಕಲಬುರಗಿ ಮತ್ತು ಬೆಳಗಾವಿಯಲ್ಲಿ ತಲಾ 18, ಮಂಡ್ಯ 13, ಬಳ್ಳಾರಿ 10 ಮಂದಿಗೆ ಸೋಂಕು ತಗುಲಿದೆ. 11 ಜಿಲ್ಲೆಗಳಲ್ಲಿ ಬೆರಳಣಿಕೆಯಷ್ಟು ಹಾಗೂ ಏಳು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
Corona Vaccine: 4 ಕೋಟಿ ಜನರು ಒಂದು ಡೋಸು ಪಡೆದಿಲ್ಲ: ಕೇಂದ್ರ
ಲಸಿಕೆ ಅಭಿಯಾನ: ರಾಜ್ಯದಲ್ಲಿ 3.01 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಮೂರನೇ ಡೋಸ್ ಅನ್ನು ಉಚಿತ ಮಾಡಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು 2.47 ಲಕ್ಷ ಮೂರನೇ ಡೋಸ್ ಪ್ರದಾನ ಮಾಡಲಾಗಿದೆ. ಉಳಿದಂತೆ 11,680 ಮಂದಿ ಮೊದಲ ಡೋಸ್ ಮತ್ತು 41,689 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 11.44 ಕೋಟಿ ಡೋಸ್ ಲಸಿಕೆ ಪ್ರದಾನ ಮಾಡಲಾಗಿದೆ.