ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನುಹತ್ತಿರುವ ಪೊಲೀಸರು ದಿನಕ್ಕೊಂದು ರಹಸ್ಯ ಬಯಲಿಗೆಳೆಯುತ್ತಿದ್ದಾರೆ. ಇಂದು ಹಾಸ್ಯನಟ ಚಿಕ್ಕಣ್ಣ ವಿಚಾರಣೆ ಬಳಿಕ ಮತ್ತೊಬ್ಬ ನಟ ಪಾರ್ಟಿಯಲ್ಲಿ ಭಾಗಿಯಾಗಿದ್ದರ ಬಗ್ಗೆ ಮಾಹಿತಿ ಸಿಕ್ಕಿದ್ದು ಆ ನಟನಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ
ಬೆಂಗಳೂರು (ಜೂ.17): ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು ದಿನಕ್ಕೊಂದು ರಹಸ್ಯ ಬಯಲಿಗೆಳೆಯುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಸಹಚರರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದ ಪೊಲೀಸರು. ಅಂದು ಕೊಲೆ ಘಟನೆ ನಡೆಯುವ ಮುನ್ನ ದರ್ಶನ್ ಗ್ಯಾಂಗ್ ಆರ್‌ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಭರ್ಜರಿ ಪಾರ್ಟಿ ಮಾಡಿದ್ದ ವಿಚಾರ ತಿಳಿಯುತ್ತಿದ್ದಂತೆ ಅದೇ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಭಾಗಿಯಾಗಿರುವುದು ತಿಳಿದುಬಂದಿತ್ತು. ಬಳಿಕ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ಕಳಿಸಿದ್ದರು.
ಇಂದು ಠಾಣೆಗೆ ಕರೆಸಿಕೊಂಡ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬರೋಬ್ಬರಿ ಎರಡೂವರೆ ಗಂಟೆ ಕಾಲ ಚಿಕ್ಕಣ್ಣನ್ನ ವಿಚಾರಣೆ ನಡೆಸಿದ್ದ ಪೊಲೀಸರು. ಸ್ಟೋನಿ ಬ್ರೂಕ್‌ನಲ್ಲಿದ್ದ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದು ಇಂಚಿಂಚು ಮಾಹಿತಿ ಪಡೆದುಕೊಂಡಿದ್ದಾರೆ. 1.30 ರಿಂದ ಬೆಳಗಿನ ಜಾವ 4.30ರವರೆಗೆ ಏನೇನೆಲ್ಲ ಆಗಿದೆ? ಅಂದಿನ ಪಾರ್ಟಿಯಲ್ಲಿ ನಡೆದಿದ್ದು ಬರೀ ಸಿನಿಮಾ ವಿಚಾರದ ಚರ್ಚೆಯಾ? ಅಥವಾ ರೇಣುಕಾಸ್ವಾಮಿ ಬಗ್ಗೆ ಏನಾದರೂ ಚರ್ಚಿಸಿದರಾ? ಅವತ್ತಿನ ಪಾರ್ಟಿಯಲ್ಲಿ ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವ? ದರ್ಶನ್ ಜೊತೆ ಮತ್ತೋರ್ವ ನಿರ್ಮಾಪಕ, ನಟ ಇದ್ರ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನ ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿರುವ ಪೊಲೀಸರು.
'ನಾನು ದರ್ಶನ್ ಗೆಳೆಯರು ಆದರೆ..,' ಪೊಲೀಸರ ಮುಂದೆ ಹಾಸ್ಯ ನಟ ಚಿಕ್ಕಣ್ಣ ಹೇಳಿದ್ದೇನು?
ಮತ್ತೊಬ್ಬ ನಟನಿಗೆ ಕಾದಿದ್ಯಾ ಸಂಕಷ್ಟ?
ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಜೊತೆ ಮತ್ತೊಬ್ಬ ನಟ ದರ್ಶನ್ ಜೊತೆ ಪಾರ್ಟಿಯಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಎರಡು ಸಿನಿಮಾಗಳಲ್ಲಿ ನಟಿಸಿರುವ ಆ ನಟ ಅಂದು ದರ್ಶನ್ ಜೊತೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು. ಪಾರ್ಟಿ ಮುಗಿದ ಬಳಿಕ ಚಿಕ್ಕಣ್ಣ ಮತ್ತು ಆ ನಟ ಇಬ್ಬರೂ ಒಟ್ಟಿಗೆ ತೆರಳಿದ್ದಾರೆ. ಇದೀಗ ಆ ನಟನಿಗೂ ಪೊಲೀಸರು ನೋಟಿಸ್ ಕಳುಹಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ರಹಸ್ಯ ಬಯಲಿಗೆಳೆಯಲು ಮುಂದಾಗಿರುವ ಪೊಲೀಸರಿಗೆ ದಿನಕ್ಕೊಂದು ತಿರುವು, ದಿನಕ್ಕೊಂದು ಹೊಸ ಪ್ರಕರಣ ಬಯಲಿಗೆ ಬರುತ್ತಿರುವುದು ಕೊಲೆ ಪ್ರಕರಣದ ಜೊತೆ ನಟ ದರ್ಶನ್ ವಿರುದ್ಧ ಮತ್ತೊಂದು ಪ್ರಕರಣದ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.