ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳ ಭರ್ತಿಗೆ ಜಿಲ್ಲೆಯಲ್ಲಿ ಇಂದು ನಡೆದ ಗ್ರೂಪ್ 'ಸಿ' ಪರೀಕ್ಷೆಗೆ ದಾಖಲೆ ಪ್ರಮಾಣದಲ್ಲಿ ಅಭ್ಯರ್ಥಿಗಳ ಗೈರಾಗಿದ್ದಾರೆ.
ಯಾದಗಿರಿ (ನ.5): ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳ ಭರ್ತಿಗೆ ಜಿಲ್ಲೆಯಲ್ಲಿ ಇಂದು ನಡೆದ ಗ್ರೂಪ್ 'ಸಿ' ಪರೀಕ್ಷೆಗೆ ದಾಖಲೆ ಪ್ರಮಾಣದಲ್ಲಿ ಅಭ್ಯರ್ಥಿಗಳ ಗೈರಾಗಿದ್ದಾರೆ.
ಇಂದು ಯಾದಗಿರಿ ನಗರದ ಐದು ಪರೀಕ್ಷೆ ಕೇಂದ್ರಗಳಲ್ಲಿ ನಡೆದಿರುವ ಗ್ರುಪ್ ಸಿ ಸ್ಪರ್ಧಾತ್ಮಕ ಪರೀಕ್ಷೆ. ಎರಡು ಪತ್ರಿಕೆಗಳ ಪರೀಕ್ಷೆಗೆ 864 ಅಭ್ಯರ್ಥಿಗಳು ಗೈರಾಗಿದ್ದಾರೆ. ಮುಂಜಾನೆ ಸಾಮಾನ್ಯಜ್ಞಾನ ಹಾಗೂ ಮಧ್ಯಾಹ್ನ ಸಾಮಾನ್ಯ ಇಂಗ್ಲಿಷ್, ಕನ್ನಡ, ಕಂಪ್ಯೂಟರ್ ವಿಷಯದ ಕುರಿತು ಪರೀಕ್ಷೆ ನಡೆದಿತ್ತು. ಎರಡು ಪತ್ರಿಕೆಗಳಿಗೆ ಪರೀಕ್ಷೆ ಬರೆಯಲು 1638 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ರು. ಆ ಪೈಕಿ ಪರೀಕ್ಷೆಗೆ ಹಾಜರಾದವರು ಕೇವಲ 774 ಅಭ್ಯರ್ಥಿಗಳು, ಉಳಿದ 864 ಅಭ್ಯರ್ಥಿಗಳ ಗೈರಾಗಿದ್ದಾರೆ. ಮುಂಜಾನೆ ಪತ್ರಿಕೆಗೆ 864 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ ಪತ್ರಿಕೆಗೆ 864 ಅಭ್ಯರ್ಥಿಗಳು ಗೈರಾಗಿದ್ದಾರೆ.
ಕಲಬುರಗಿ: ಕೆಪಿಎಸ್‌ಸಿ ಕನ್ನಡ ಭಾಷೆ ಲಿಖಿತ ಪರೀಕ್ಷೆ ತುಂಬ ಕಟ್ಟುನಿಟ್ಟು
ನಿನ್ನೆ ನಡೆದ ಗ್ರೂಪ್ 'ಸಿ' ಮೊದಲ ಪೇಪರ್ ಗೂ 896 ಅಭ್ಯರ್ಥಿಗಳು ಗೈರಾಗಿದ್ರು. FDA ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದ ಬಳಿಕ ಪರೀಕ್ಷೆಗೆ ಗೈರಾದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. FDA ಅಕ್ರಮದ ಬಳಿಕ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ್ದ ಯಾದಗಿರಿ ಜಿಲ್ಲಾಡಳಿತ. ಪರೀಕ್ಷೆಗೆ ಹಾಜರಾದ ಪ್ರತಿ ಅಭ್ಯರ್ಥಿಗಳನ್ನು ತೀವ್ರ ತಪಾಸಣೆಗೊಳಪಡಿಸಿದ್ದ ಭದ್ರತಾ ಸಿಬ್ಬಂದಿ. ಈ ಹಿಂದೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಹಿನ್ನೆಲೆ ಕಿವಿಯೊಳಗೆ ಪ್ರಖರ ಬ್ಯಾಟರಿ ಹಾಕಿ ಪರೀಕ್ಷೆ ನಡೆಸಿದ್ದ ಸಿಬ್ಬಂದಿ. ಅಲ್ಲದೆ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಈ ಹಿನ್ನೆಲೆ ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿರುವ ಸಾಧ್ಯತೆಯಿದೆ.
ಬ್ಲೂಟೂತ್ ಎಫೆಕ್ಟ್: ಖಾಕಿ ಕಾವಲಿನಲ್ಲಿ ಕೆಪಿಎಸ್ಸಿ ಪರೀಕ್ಷೆ..!