ಮತ್ತೆ ಸರ್ಕಾರದ ವಿರುದ್ಧ ಸಿಡಿದ್ದೆದ್ದ ಅಂಗನವಾಡಿ ‌ಕಾರ್ಯಕರ್ತೆಯರು: ನಾಳೆಯಿಂದ ಪ್ರತಿಭಟನೆ

By Govindaraj S  |  First Published Jul 9, 2023, 9:43 AM IST

ಹೆಚ್ಚಳ ಮಾಡಿರುವ ಗೌರವಧನ ಪಾವತಿಸಬೇಕು, ಹೊಸ ಮೊಬೈಲ್‌ ನೀಡಬೇಕು ಎಂದು ಆಗ್ರಹಿಸಿ ಜು.10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ನಿರ್ಧರಿಸಿದೆ.


ಬೆಂಗಳೂರು (ಜು.09): ಹೆಚ್ಚಳ ಮಾಡಿರುವ ಗೌರವಧನ ಪಾವತಿಸಬೇಕು, ಹೊಸ ಮೊಬೈಲ್‌ ನೀಡಬೇಕು ಎಂದು ಆಗ್ರಹಿಸಿ ಜು.10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷಿ ್ಮ, ಹಿಂದಿನ ಬಿಜೆಪಿ ಸರ್ಕಾರ ಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ ಮಾಸಿಕವಾಗಿ ಸಾವಿರ ರು. ಗೌರವ ಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಅನುದಾನವನ್ನು ಮೀಸಲಿಡಲಿಲ್ಲ, ಆದೇಶವನ್ನೂ ಹೊರಡಿಸಲಿಲ್ಲ. ಆದ್ದರಿಂದ ನೂತನ ಸರ್ಕಾರ ಈ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Tap to resize

Latest Videos

ರಾಹುಲ್‌ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್‌ ವಿರುದ್ಧವೇ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಪೋಷಣ್‌ ಅಭಿಯಾನದಡಿ ಅಂಗನವಾಡಿ ಕೇಂದ್ರಗಳಿಗೆ 6331 ಮೊಬೈಲ್‌ ನೀಡಿ 4 ವರ್ಷವಾಗಿದ್ದು ಇವುಗಳು ಹಳತಾಗಿದ್ದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೊಸ ಮೊಬೈಲ್‌ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರ ಎಲ್ಲಾ ಸಂಘಟನೆಗಳು ಸಂಯುಕ್ತವಾಗಿ ಜು.10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳ ಮುಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಹುಸಿಯಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸರ್ಕಾರದ ಪ್ರಥಮ ಬಜೆಟ್‌ನಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಪ್ರಥಮ ಭರವಸೆಯನ್ನು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಕುರಿತಂತೆ ಈಡೇರಿಸುವರೆಂಬ ನಿರೀಕ್ಷೆಯಲ್ಲಿ ಇದ್ದರು, ಆದರೆ ಅದು ಹುಸಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಉಸ್ತುವಾರಿ ಪಿ.ಎಸ್‌. ಸಂಧ್ಯಾ ತಿಳಿಸಿದ್ದಾರೆ.

ಪತ್ರಕರ್ತರಿಗೂ ‘ಆರೋಗ್ಯ ಭಾಗ್ಯ’ ನೀಡಲು ಸಿಎಂ ಜತೆ ಚರ್ಚೆ: ಸ್ಪೀಕರ್‌ ಯು.ಟಿ.ಖಾದರ್‌

ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಆಶಾ ಕಾರ್ಯಕರ್ತೆಯರಿಗೆ ದುಡಿತಕ್ಕೆ ನೀಡುವ 5000 ದಿಂದ 8000 ಗೌರವಧನ ಹೆಚ್ಚಿಗೆ ಮಾಡುವ ಕುರಿತು ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆಯೇ, ಆಶಾ, ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿಯನ್ನು ನೀಡುವುದಾಗಿ ತಿಳಿಸಿರುತ್ತಾರೆ. ಆದರೆ, ಮನೆ ಯಜಮಾನಿ ಮನೆಯಲ್ಲಿ ಬೇರೆಯವರು ಇದ್ದಾಗ ಆಶಾ ಕಾರ್ಯಕರ್ತೆಯರು ಗೃಹಲಕ್ಷ್ಮಿಯ ಗ್ಯಾರಂಟಿಯನ್ನು ಪಡೆಯಬಹುದೇ ಎನ್ನುವ ಗೊಂದಲವನ್ನು ಸ್ಪಷ್ಟಪಡಿಸಿ. ಯಜಮಾನಿ ಮತ್ತೊಬ್ಬರಿದ್ದಾಗ್ಯೂ ಗೃಹಲಕ್ಷ್ಮಿ ಗ್ಯಾರಂಟಿಯನ್ನು ರಾಜ್ಯದ ಎಲ್ಲಾ ಕಾರ್ಯಕರ್ತೆಯರಿಗೆ ಖಾತ್ರಿಪಡಿಸಲು ಅವರು ಆಗ್ರಹಿಸಿದ್ದಾರೆ.

click me!