ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಕೊನೆಗೂ ಶಿಕ್ಷೆಯಾಗುತ್ತಿದೆ. ಪ್ರಮುಖ ಆರೋಪಿ ಫಯಾಜ್ ಅಹಮದ್‌ಗೆ 7 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ NIA ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಬೆಂಗಳೂರು(ಜ.10): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಫಯಾಜ್ ಅಹಮದ್‌ಗೆ ಶಿಕ್ಷೆಯಾಗಿದೆ. ಪ್ರಕರಣದ 14 ನೇ ಆರೋಪಿ ಫಯಾಜ್ ಅಹಮದ್ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಕೊನೆಗೂ ಶಿಕ್ಷೆಯಾಗುತ್ತಿದೆ. ಪ್ರಮುಖ ಆರೋಪಿ ಫಯಾಜ್ ಅಹಮದ್‌ಗೆ 7 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ NIA ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
undefined
PSI ನಿಂದಿಸಿದ ಮಾಜಿ ಶಾಸಕನ ಸಹೋದರರ ವಿರುದ್ಧ FIR
ಪ್ರಕರಣದ ಆರೋಪಿ ಫಯಾಜ್ ಅಹಮದ್ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದು, ಈತ ಪ್ರಕರಣದ 14ನೇ ಆರೋಪಿಯಾಗಿದ್ದಾನೆ. ಕಳೆದ ವಿಚಾರಣೆ ಸಂದರ್ಭ ಫಯಾಜ್ ಅಹಮದ್ ತಪ್ಪೊಪ್ಪಿಕೊಂಡಿದ್ದ. ಇಂದು ಶಿಕ್ಷೆ ಹಾಗೂ ದಂಡ ವಿಧಿಸಿ NIA ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಎಸ್. ಪಿ. ಪಿ. ಸಿಎ ರವೀಂದ್ರ ವಾದ ಮಂಡಿಸಿದ್ದರು. NIA ಸ್ಪೆಷಲ್ ಕೋರ್ಟ್ ಜಡ್ಜ್ ವೆಂಕಟೇಶ್ ಹುಲಗಿಯವರು ಒಟ್ಟು 5 ಪ್ರಕರಣಗಳಲ್ಲಿ ಸೇರಿ 7 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಪ್ರಕರಣದಲ್ಲಿ ಇತರೆ ಆರೋಪಿಗಳಿಗೆ ಭಟ್ಕಳ್ ಸೋದರರನ್ನು ಪರಿಚಯ ಮಾಡಿಕೊಟ್ಟಿದ್ದು ಇದೇ ಫಯಾಜ್ ಅಹಮದ್.
ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್, 91 ರೇಪ್!
2008ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ಸ್ಫೋಟ ನಡೆದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಮೂರು ಗೇಟ್‌ಗಳಲ್ಲಿ ಬಾಂಬ್ ಇಡಲಾಗಿತ್ತು. ಗೇಟ್ ನಂಬರ್ 12, ಗೇಟ್ ನಂಬರ್ 1, ಗೇಟ್ ನಂಬರ್ 9, ಸೇರಿ ಬಸ್ ಸ್ಟಾಪ್‌ನಲ್ಲಿಯೂ ಆರೋಪಿ ಬಾಂಬ್ ಇಟ್ಟಿದ್ದ. ಇದ್ರಲ್ಲಿ ಗೇಟ್ ನಂಬರ್ 12 ಮತ್ತು ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬಾಂಬ್ ಸ್ಪೋಟಗೊಂಡಿತ್ತು.
ಎಂಜಿನಿಯರಿಂಗ್ ಓದಿದ್ದ ಆರೋಪಿ:
ಆರೋಪಿ ಅಹಮದ್ 2002-06 ರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ. ಓದುವ ವೇಳೆಯಲ್ಲಿ ಆರೋಪಿಯು ಯಾಸೀನ್ ಭಟ್ಕಳನನ್ನು ಪರಿಚಯಿಸಿಕೊಂಡಿದ್ದ. ಬಳಿಕ ತುಮಕೂರಿನಲ್ಲಿ ಬಾಂಬ್ ತಯಾರಿಸಿ ರೈಲಿನಲ್ಲಿ ಮೆಜೆಸ್ಟಿಕ್‌ಗೆ ಬಂದಿದ್ದ. ಬಳಿಕ ಆಟೋದಲ್ಲಿ ಸ್ಟೇಡಿಯಂ ಬಳಿ ಹೋಗಿ ಆರೋಪಿ ಬಾಂಬ್ ಇಟ್ಟಿದ್ದ. 12ನೇ ಗೇಟ್ ಸ್ಫೋಟದಿಂದ ಇಬ್ಬರಿಗೆ ಕಿವಿಗೆ ಹಾನಿಯಾಗಿತ್ತು. ಕಿವಿ ಹಾನಿಯಾದವರಿಗೆ 1.5 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ