ದಲಿತರಿಗೆ ಒಳ ಮೀಸಲಾತಿ, ಮುಸ್ಲಿಮರ ಒಬಿಸಿ ರದ್ದು, ಎಸ್‌ಟಿಗೆ ಕುರುಬರ ಶಿಫಾರಸು; ಯಾರಿಗೆ ಎಷ್ಟೆಷ್ಟು?

By Suvarna News  |  First Published Mar 24, 2023, 8:42 PM IST

ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ ನೀಡಲಾಗಿದೆ. ಸದ್ಯ ಇರುವ ಮೀಸಲಾತಿ ಎಷ್ಟು? ಮುಸ್ಲಿಮರು ಯಾವ ವರ್ಗದಡಿ ಮೀಸಲಾತಿ ಪಡೆಯಬಹುದು? ಕುರುಬರ ಹೋರಾಟದ ಕತೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.


ಬೆಂಗಳೂರು(ಮಾ.24): ಸಿಎಂ ಬಸವರಾಜ್ ಬೊಮ್ಮಾಯಿ ಮೀಸಲಾತಿ ಕುರಿತು ಸಮುದಾಯಗಳು ನಡೆಸುತ್ತಿದ್ದ ಹೋರಾಟಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಹೀಗಾಗಿ ಮೀಸಲಾತಿಯಲ್ಲಿ ಕೆಲ ಬದಲಾವಣೆಗಳು ಆಗಿವೆ. ಲಿಂಗಾಯಿತರಿಗೆ ಶೇಕಡಾ 7, ಒಕ್ಕಲಿಗರಿಗೆ ಶೇಕಡಾ 6 ರಷ್ಟು ಮೀಸಲಾತಿ ಘೋಷಿಸಲಾಗಿದೆ. ಇನ್ನು ಪ್ರವರ್ಗ ಒಂದಕ್ಕೆ 4 ಪರ್ಸೆಂಟ್ ಮೀಸಲಾತಿ ನೀಡಲಾಗಿದ್ದರೆ, ದಲಿತ ಬಲ ಸಮುದಾಯಕ್ಕೆ 5.5ರಷ್ಟು ಮೀಸಲಾತಿ ನೀಡಲಾಗಿದೆ. ಮುಸ್ಲಿಮರ ಒಬಿಸಿ ಮೀಸಲಾತಿ ರದ್ದು ಮಾಡಿರುವ ಸರ್ಕಾರ, ಅವರನ್ನು ಆರ್ಥಿಕ ಹಿಂದುಳಿದ ಪಟ್ಟಿಗೆ ಸೇರಿಸಲಾಗಿದೆ.  

ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ ನೀಡಲಾಗಿದೆ. ಸದ್ಯ ಇರುವ ಮೀಸಲಾತಿ ಎಷ್ಟು? ಮುಸ್ಲಿಮರು ಯಾವ ವರ್ಗದಡಿ ಮೀಸಲಾತಿ ಪಡೆಯಬಹುದು? ಕುರುಬರ ಹೋರಾಟದ ಕತೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

Tap to resize

Latest Videos

ಲಿಂಗಾಯಿತರಿಗೆ ಶೇ.7 ಮೀಸಲಾತಿ, ಹೋರಾಟ ಮುಂದುವರಿಸಬೇಕಾ, ನಿರ್ಧಾರ ಸ್ವಾಗತಿಸಬೇಕಾ? ನಾಳೆ ಘೋಷಣೆ!

ಒಕ್ಕಲಿಗ, ಲಿಂಗಾಯಿತರ ಮೀಸಲು ಪ್ರಮಾಣ
3A ಒಕ್ಕಲಿಗ:  ಶೇ.4(ಮೊದಲು): 2C ಒಕ್ಕಲಿಗ- ಶೇ.6(ಈಗ)
3B ಲಿಂಗಾಯತ: ಶೇ.5(ಮೊದಲು) : 2D ಲಿಂಗಾಯತ- ಶೇ7(ಈಗ)

ರಾಜ್ಯದಲ್ಲಿ ಮೀಸಲಾತಿ..!
ಪರಿಶಿಷ್ಟ ಜಾತಿ    : ಶೇ.15(ಮೊದಲು)    -ಶೇ.17(ಪರಿಷ್ಕೃತ)
ಪರಿಶಿಷ್ಟ ಪಂಗಡ: ಶೇ.3(ಮೊದಲು)    - ಶೇ.7(ಪರಿಷ್ಕೃತ)
ಹಿಂದುಳಿದ ವರ್ಗ: ಶೇ.32(ಮೊದಲು)    - ಶೇ.32(ಪರಿಷ್ಕೃತ)
ಮೇಲ್ವರ್ಗದ ಬಡವರು    : ಶೇ.10(ಮೊದಲು) ಶೇ.10(ಪರಿಷ್ಕೃತ)
ಒಟ್ಟು ಮೀಸಲು: ಶೇ.50(ಮೊದಲು)    - ಶೇ.66(ಪರಿಷ್ಕೃತ)

ಹಿಂದುಳಿದ ವರ್ಗ  
ಕೆಟಗರಿ 1 :(91 ಜಾತಿ)- 04%
ಕೆಟಗರಿ2A : (102 ಜಾತಿ)- 15%
ಕೆಟಗರಿ2C : ಒಕ್ಕಲಿಗ, ರೆಡ್ಡಿ, ಬಲಿಜಿಗ ಸೇರಿ 12 ಜಾತಿ)- 06%
ಕೆಟಗರಿ2D : ವೀರಶೈವ, ಲಿಂಗಾಯತ, ಕ್ರಿಶ್ಚಿಯನ್)    - 07%
ಒಟ್ಟು ಮೀಸಲು: 32%

Breaking, Reservation: ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!

ದಲಿತ ಒಳ  ಮೀಸಲಾತಿ
ಎಡ ಸಮುದಾಯ:  ಶೇ.6 
ಬಲ ಸಮುದಾಯ : ಶೇ.5.5 
ಸ್ಪೃಷ್ಯ ದಲಿತರು: ಶೇ.4.5 
ಇತರೆ ದಲಿತ : ಶೇ.1 ರಷ್ಟು 

ಮುಸ್ಲಿಮರ ಒ.ಬಿ.ಸಿ ಮೀಸಲು ರದ್ದು!
ಹಿಂದುಳಿದ ವರ್ಗಗಳ ಅಡಿಯಲ್ಲಿದ್ದ ಮುಸ್ಲಿಮರ ಮೀಸಲಾತಿ ರದ್ದು ಮಾಡಲಾಗಿದೆ. 2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ರಾಜ್ಯದಲ್ಲಿ ಶೇಕಡಾ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಇದನ್ನು ರದ್ದು ಪಡಿಸಿ ಇದೀಗ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲಾಗಿದೆ. ಮುಸ್ಲಿಮರಿಗೆ ಒಬಿಸಿಯಲ್ಲಿ ಶೇಕಡಾ 4 ರಷ್ಟು ಮೀಸಲಾತಿಯನ್ನು ಲಿಂಗಾಯಿತ ಹಾಗೂ ಒಕ್ಕಲಿಗರಿಗೆ ಹಂಚಿಕೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ಇದೆ.

ಕುರುಬರು ಎಸ್‌ಟಿ ವರ್ಗಕ್ಕೆ ಶಿಫಾರಸು
ಕುರುಬ ಸಮುದಾಯ ಹಲವು ವರ್ಷಗಳಿಂದ ಮೀಸಲಾತಿ ಹೋರಾಟ ಮಾಡುತ್ತಿದೆ. ಹಿಂದುಳಿದ ವರ್ಗದಲ್ಲಿದ್ದ ಕುರುಬರಿಗೆ ಎಸ್‌ಟಿ ಸ್ಥಾನಮಾನಕ್ಕ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕುರುಬ, ಕಾಡು ಕುರುಬ, ಗೋಂಡ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ. ಇನ್ನು ಜಂಗಮ ಸಮುದಾಯವನ್ನು ಎಸ್‌ಸಿಗೆ ಸೇರಿಸಲು ಸಮಿತಿ ರಚನೆ ಮಾಡಲಾಗಿದೆ. 

click me!