ಯಾರೂ ಕೂಡ ವಿಜಯೋತ್ಸವ ಆಚರಿಸಬಾರದು. ಇದು ಜಯಮೃತ್ಯುಂಜಯ ಸ್ವಾಮೀಜಿ ನೀಡಿ ಹೇಳಿಕೆ. ಮುಖಂಡರ ಜೊತೆ ಚರ್ಚಿಸಿ ನಾಳೆ ನಿರ್ಧಾರ ಪ್ರಕಟಿಸಲಾಗುತ್ತದೆ. ಈ ನಿರ್ಧಾರವನ್ನು ಪಂಚಮಸಾಲಿ ಸಮುದಾಯ ಸ್ವಾಗತಿಸಬೇಕೋ ಅಥವಾ ಹೋರಾಟ ಮುಂದುವರಿಸಬೇಕೋ ಅನ್ನೋದು ನಾಳೆ ಘೋಷಣೆಯಾಗಲಿದೆ.
ಬೆಂಗಳೂರು(ಮಾ.24) ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಘೋಷಣ ಮಾಡಿದ್ದಾರೆ. ಕಳೆದ 2 ವರ್ಷದಿಂದ ಹೋರಾಟ ನಡೆಸುತ್ತಿರುವ ಲಿಂಗಾಯಿತ ಪಂಚಮಸಾಲಿ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಲಿಂಗಾಯಿತ ಸಮುದಾಯಕ್ಕೆ ಶೇಕಡಾ 7 ರಷ್ಟು ಮೀಸಲಾತಿ ನೀಡಲಾಗಿದೆ. ನಮ್ಮ ಬೇಡಿಕೆ ಶೇಕಡಾ 15. ಬಸವರಾಜ್ ಬೊಮ್ಮಾಯಿ ಮೀಸಲಾತಿ ನೀಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಕಾನೂನು ತಜ್ಞರು, ಸಮುದಾಯ ಮುಖಂಡರ ಜೊತೆ ಚರ್ಚೆ ಮಾಡಿ ನಾಳೆ ಸುದ್ದಿಗೋಷ್ಠಿಯಲ್ಲಿ ನಮ್ಮ ನಿರ್ಧಾರ ಪ್ರಕಟಿಸುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಅಲ್ಲೀವರೆಗೆ ಯಾರೂ ಕೂಡ ವಿಜಯೋತ್ಸವ ಆಚರಿಸಬಾರದು ಎಂದಿದ್ದಾರೆ.
ನಮ್ಮೆಲ್ಲರ ಕೂಗು 3ಬಿಯಲ್ಲಿರುವ ಮೀಸಲಾತಿ ಪ್ರಮಾಣ ಬಹಳ ಕಡಿಮೆ ಇರುವ ಕಾರಣ 2ಎ ವರ್ಗಕ್ಕೆ ಸೇರಿಸಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುವ ಅವಕಾಶ ಹೆಚ್ಚಿರುವ ಕಾರಣ ನಮ್ಮ ಸಮುದಾಯದ ಹೋರಾಟ ಮಾಡಿಕೊಂಡು ಬಂದಿದೆ. ಕಳೆದ ಎರಡು ವರ್ಷದಿಂದ ನಮ್ಮ ಸಮುದಾಯ ಹೋರಾಟ ತೀವ್ರಗೊಳಿಸಿದೆ. ಡಿಸೆಂಬರ್ 29ರಂದು ಬೆಳಗಾವಿಯಲ್ಲಿ ನಡೆದ ಮೀಟಿಂಗ್‌ನಲ್ಲಿ ಸ್ಪಷ್ಟತೆ ಇರಲಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
Breaking, Reservation: ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!
ಸಚಿವ ಸಂಪುಟ ನಮ್ಮ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡಿದೆ. 2ಎ ಮೀಸಲಾತಿ ಯಾವುದೇ ಸಮುದಾಯ ಸೇರಿಸಲು ಸಾಧ್ಯವಿಲ್ಲ ಅನ್ನೋ ಲಿಖಿತ ಹೇಳಿಕೆಯನ್ನು ಕೋರ್ಟ್‌ಗೆ ನೀಡಿರುವ ಕಾರಣ, 2ಡಿ ಅನ್ನೋ ಹೆಸರಿನಲ್ಲಿ ನ್ಯಾಯ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. 2ಎನಲ್ಲಿ ಶೇಕಡಾ 15 ರಷ್ಟು ಮೀಸಲಾತಿ ಕೇಳಿದ್ದೇವೆ. ಈಗ ಬಂದಿರುವುದು ಶೇಕಡಾ 7 ರಷ್ಟು ಮೀಸಲಾತಿ ನೀಡಿದೆ. ಪ್ರಧಾನಿ ಮಂತ್ರಿಗಳ ಆದೇಶದ ಮೇಲೆ ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈ ನಿರ್ಧಾರವನ್ನು ಸ್ವಾಗತಿಸಬೇಕು ಅನ್ನೋದನ್ನು ನಾಳೆ ಬೆಳಗ್ಗೆ 9 ಗಂಟೆಗೆ ಮಾಹಿತಿ ನೀಡಲಿದ್ದಾರೆ.
ಬಸಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಈ ನಿರ್ಧಾರ ಸ್ವಾಗತ ಮಾಡಬೇಕು, ಮತ್ತೆ ಹೋರಾಟ ಮಾಡಬೇಕೋ ಅನ್ನೋದನ್ನು ಬಹಿರಂಗ ಮಾಡುತ್ತೇವೆ ಎಂದು ಬಸವ ಜಯಮೃತ್ಯುಂಜಯ್ ಸ್ವಾಮೀಜಿ ಹೇಳಿದ್ದಾರೆ.ಯಾರೂ ಕೂಡ ಅಂಧಾಭಿಮಾನಕ್ಕೆ ಒಳಪಟ್ಟು, ವಿಜಯೋತ್ಸವ ಮಾಡಬೇಡಿ, ಎಲ್ಲರ ಜೊತೆ ಚರ್ಚಿಸಿ, ಕಾನೂನಾತ್ಮಕ ವಿಚಾರಗಳನ್ನು ಚರ್ಚಿಸಿ ನಾಳೆ(ಮಾ.25) ಬೆಳಗ್ಗೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ.
ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್: ಸುರ್ಜೇವಾಲಾ ಆರೋಪ
ಮೀಸಲಾತಿ ವಿಚಾರ ಕಳೆದ ಹಲುವ ವರ್ಷದಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ರಾಜ್ಯ ಸರ್ಕಾರ ಅಂತ್ಯಹಾಡಿದೆ. ಇಂದು ಕೊನೆಯ ಕ್ಯಾಬಿನೆಟ್ ಸಭೆ ನಡೆಸಿದ ಬೊಮ್ಮಾಯಿ ಬಳಿಕ ಸುದ್ದಿಗೋಷ್ಠಿ ನಡಸಿ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಲಿಂಗಾಯಿತ ಸಮುದಾಯಕ್ಕೆ ಶೇಕಡಾ 7 ರಷ್ಟು ಮೀಸಲಾತಿ ಘೋಷಿಸಲಾಗಿದೆ.ಇನ್ನು ಒಕ್ಕಲಿಗ ಸಮುದಾಯಕ್ಕೆ ಶೇಕಡಾ 6 ರಷ್ಟು ಮೀಸಲಾತಿ ಘೋಷಿಸಲಾಗಿದೆ. ಇದೇ ವೇಳೆ ಮುಸ್ಲಿಮ್ ಮೀಸಲಾತಿಗೆ ರಾಜ್ಯ ಸರ್ಕಾರ್ ಕೊಕ್ ನೀಡಿದೆ. ಮುಸ್ಲಿಮರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ.