Breaking, Reservation: ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!

By Gowthami KFirst Published Mar 24, 2023, 7:26 PM IST
Highlights

ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ. 2 ಡಿ ಪ್ರವರ್ಗದ ಮೂಲಕ 7% ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಕ್ಕಲಿಗರಿಗೆ 6% ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗದಿಂದ ಮುಸ್ಲಿಂ ಮೀಸಲಾತಿಗೆ ಕೋಕ್ ನೀಡಲಾಗಿದೆ.

ಬೆಂಗಳೂರು (ಮಾ.24): ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ. 2 ಡಿ ಪ್ರವರ್ಗದ ಮೂಲಕ 7% ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಕ್ಕಲಿಗರಿಗೆ 6% ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗದಿಂದ ಮುಸ್ಲಿಂ ಮೀಸಲಾತಿಗೆ ಕೋಕ್ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೊನೆಯ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜಯಪ್ರಕಾಶ್ ಹೆಗಡೆ ವರದಿ ಪ್ರಕಾರ ನಾವು  ಬೆಳಗಾವಿ ಅಧಿವೇಶನದಲ್ಲೇ ಇದನ್ನ ನಾವು ತಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು. 2 d ಯನ್ನು 2 c ಮಾಡಿದ್ದೇವೆ ಎಂದರು. 2b ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲ. ಆಂದ್ರಪ್ರದೇಶ ಅದನ್ನ ವಜಾ ಗೊಳಿಸಲಾಗಿತ್ತು. ಅದ್ರೆ ಅವರಿಗೆ ಅನ್ಯಾಯವಾಗದಂತೆ Ews ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಕಾಡು ಗೊಲ್ಲರ ಬಗ್ಗೆ ಅಭಿಪ್ರಾಯ ತಿಳಿಸಲು ಕೇಂದ್ರ ಸೂಚಿಸಿದೆ. ಕೋಲಿ ಸಮುದಾಯದ್ದೂ ಕೂಡ ಕೇಂದ್ರದಲ್ಲಿ ಬಾಕಿ ಇದೆ. ಮುಂದಿನ ನಿರ್ಣಯ ಕೈಗೊಳ್ಳಲಾಗಿದೆ. ST ಗೆ ಕಾಡು ಕುರುಬ, ಗೊಂಡ ಕುರುಬ ಸೇರಿಸೋ ಬಗ್ಗೆ ಚರ್ಚೆಯಾಗಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರಕ್ಕೆ‌ ಶಿಫಾರಸ್ಸು ಮಾಡಲಾಗಿದೆ. ಶಿಫಾರಸ್ಸು ಮಾಡಿ ಕ್ರೈಟೀರಿಯಾಗೆ ಇಲಾಖೆಗೆ ನೀಡಲಾಗಿದೆ. ಒಳ ಮೀಸಲಾತಿ ನೀಡಲು ರೆಕಮೆಂಡ್ ಮಾಡಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಣ್ಣ ಸಣ್ಣ ಸಮಾಜ ಇದೆ. ಅವು ಯಾವ ಲೀಸ್ಟ್‌ನಲ್ಲೂ ಇಲ್ಲ. ಅದರ ರಿಪೋರ್ಟ್ ಪಡೆಯಲಾಗಿದೆ. ಅದರ ಸಂಪೂರ್ಣ ಅಧ್ಯಯನ ಮಾಡಿ, ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದ ಕೊನೆಯ ಹಂತದಲ್ಲಿ  ದೊಡ್ಡ ನಿರ್ಧಾರ ಮಾಡಿದೆ. ಮುಸ್ಲಿಂ ಮೀಸಲಾತಿಗೆ ಕೊಕ್‌ ಕೊಡುವ ಬಗ್ಗೆ  ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ (EWS) ಮಾಡಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಪ್ರವರ್ಗ 2ಬಿ ರದ್ದು ಮಾಡಲಾಗಿದೆ.

ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಕೂಡ ಏರಿಕೆಯಾಗಿದೆ. ಸದ್ಯ 3ಎ ಪ್ರವರ್ಗದಡಿ ಒಕ್ಕಲಿಗರಿಗಿದ್ದ 4% ಮೀಸಲಾತಿ  ರದ್ದು ಮಾಡಿ 2ಸಿ ಪ್ರವರ್ಗ ಸೃಷ್ಟಿಸಿದೆ. ಈ ಪ್ರವರ್ಗದ ಮೂಲಕ ಹೆಚ್ಚುವರಿಯಾಗಿ 2% ಮೀಸಲಾತಿ ನೀಡಿದೆ. ಇದರಿಂದ 2ಸಿ ಮೂಲಕ ಒಕ್ಕಲಿಗರ ಮೀಸಲಾತಿ ಪ್ರಮಾಣ 6% ಕ್ಕೆ ಏರಿಕೆಯಾಗಿದೆ.

ಮೀಸಲಾತಿಯ ಸಂಕ್ಷಿಪ್ತ ವಿವರ ಇಲ್ಲಿದೆ:
ಇತರ ಸಮುದಾಯದಗಳಿಗೆ 32% ಮೀಸಲಾತಿ ಹಂಚಿಕೆ
ಪ್ರವರ್ಗ 2Aಗೆ   15% ಮೀಸಲಾತಿ
ಲಿಂಗಾಯಿತ ಸಮುದಾಯಕ್ಕೆ ( 2D ) 7% ಮೀಸಲಾತಿ  
ಒಕ್ಕಲಿಗ ಸಮುದಾಯಕ್ಕೆ  (ಪ್ರವರ್ಗ 2ಸಿ)  6 % ಮೀಸಲಾತಿ  
ಪ್ರವರ್ಗ 1ಕ್ಕೆ 4 % ಮೀಸಲಾತಿ

ದಲಿತ ಒಳ ಮೀಸಲಾತಿ ಒಟ್ಟು  17% ಹಂಚಿಕೆ:
ದಲಿತ ಎಡ ಸಮುದಾಯಕ್ಕೆ (ಮಾದಿಗ + ) 6% ಮೀಸಲಾತಿ 
ದಲಿತ ಬಲ ಸಮುದಾಯಕ್ಕೆ ( ಹೊಲೆಯ + )  5.5% ಮೀಸಲಾತಿ
ಬೋವಿ, ಲಂಬಾಣಿ ಸಮುದಾಯಕ್ಕೆ (sc) 4.5% ಮೀಸಲಾತಿ
ಅಲೆಮಾರಿ ಸಣ್ಣ ಜಾತಿಗಳಿಗೆ 1% ಮೀಸಲಾತಿ

click me!