Latest Videos

7 ಲಕ್ಷ ಶುಲ್ಕ ಬಾಕಿ ಉಳಿಸಿಕೊಂಡ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತ!

By Suvarna NewsFirst Published Jun 14, 2024, 7:13 PM IST
Highlights

ಶುಲ್ಕ ಭರಿಸಿಲ್ಲ ಎಂದು ಯಾರದ್ದೋ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದನ್ನು ನಾವು ನೀವೆಲ್ಲರೂ ನೋಡಿಯೇ ಇರ್ತೀವಿ ಅಲ್ವಾ.? ಆದರೆ ಇಲ್ಲಿ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಆದೂ ಕೂಡ ಬರೋಬ್ಬರಿ ಕಳೆದ 1 ತಿಂಗಳಿನಿಂದ ಪಂಚಾಯಿತಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ ಎನ್ನುವುದು ಎಂತಹ ನಾಚಿಕೆಯ ವಿಷಯ ಅಲ್ವಾ.? 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.14): ಶುಲ್ಕ ಭರಿಸಿಲ್ಲ ಎಂದು ಯಾರದ್ದೋ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದನ್ನು ನಾವು ನೀವೆಲ್ಲರೂ ನೋಡಿಯೇ ಇರ್ತೀವಿ ಅಲ್ವಾ.? ಆದರೆ ಇಲ್ಲಿ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಆದೂ ಕೂಡ ಬರೋಬ್ಬರಿ ಕಳೆದ 1 ತಿಂಗಳಿನಿಂದ ಪಂಚಾಯಿತಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ ಎನ್ನುವುದು ಎಂತಹ ನಾಚಿಕೆಯ ವಿಷಯ ಅಲ್ವಾ.? 

ಹೌದು ಇಂತಹ ನಾಚಿಕೆಗೇಡಿನ ಪರಿಸ್ಥಿತಿ ಇರುವ ಪಂಚಾಯಿತಿ ಬೇರೆ ಯಾವುದೂ ಅಲ್ಲ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ. ಸೋಮವಾರಪೇಟೆ ಮತ್ತು ಕುಶಾಲನಗರ ಎರಡು ತಾಲ್ಲೂಕುಗಳಿಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅತೀ ದೊಡ್ಡ ಮತ್ತು ಗ್ರೇಡ್ 1 ಪಂಚಾಯಿತಿ. ಇಂತಹ ಪಂಚಾಯಿತಿಗೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಸಂಪರ್ಕವಿಲ್ಲ. ಬೀದಿ ದೀಪ, ಕುಡಿಯುವ ನೀರಿನ ಪಂಪ್ ಸೆಟ್ಗಳ ವಿದ್ಯುತ್ ಶುಲ್ಕ ಸೇರಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಶುಲ್ಕವನ್ನು ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕಳೆದ ಒಂದು ತಿಂಗಳ ಹಿಂದೆ ಪಂಚಾಯಿತಿಯ ವಿದ್ಯುತ್ ಫ್ಯೂಜ್ ತೆಗೆಯಲಾಗಿತ್ತು. ಆದರೆ ಪಂಚಾಯಿತಿ ಸಿಬ್ಬಂದಿಗೆ ಕೆ.ಇ.ಬಿ ಇಲಾಖೆಗೆ ತಿಳಿಯದಂತೆ ಫ್ಯೂಜ್ ಹಾಕಿಕೊಂಡಿದ್ದಾರೆ. ಈ ವಿಷಯ ತಿಳಿದ ಕೆಇಬಿ ಸಿಬ್ಬಂದಿ ಕಂಬದಿಂದ ಪಂಚಾಯಿತಿ ಕಟ್ಟಡಕ್ಕೆ ಎಳೆಯಲಾಗಿರುವ ವಿದ್ಯುತ್ ಲೈನ್ ಅನ್ನೇ ತುಂಡರಿಸಿ ಹೋಗಿದ್ದಾರೆ. ಹೀಗಾಗಿ ಪಂಚಾಯಿತಿಗೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಸಂಪರ್ಕವೇ ಇಲ್ಲದಂತೆ ಆಗಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ಬೈದಿದ್ದಕ್ಕೆ ಕುಮಾರಸ್ವಾಮಿಗೆ ಸಚಿವ ಸ್ಥಾನ ಕೊಟ್ರು: ಎಂ ಲಕ್ಷ್ಮಣ್

 ಪರಿಣಾಮ ಸಾರ್ವಜನಿಕರು ಯಾವುದೇ ದಾಖಲೆ ಮಾಡಿಸಿಕೊಳ್ಳಲಾಗದೆ, ತಮ್ಮ ಮನೆ, ನಲ್ಲಿ ಕಂದಾಯಗಳನ್ನು ಕಟ್ಟುವುದಕ್ಕೂ ಆಗದೆ ಪರದಾಡುವಂತೆ ಆಗಿದೆ. ಶಾಲಾ ಕಾಲೇಜುಗಳಿಗೆ ದಾಖಲಾಗುತ್ತಿರುವ ಸಮಯವೂ ಇದು ಆಗಿರುವುದರಿಂದ ವಾಸಸ್ಥಳ ದೃಢೀಕರಣ ಪತ್ರ ಸೇರಿದಂತೆ ಪಂಚಾಯಿತಿಯಿಂದ ಕೆಲವು ದಾಖಲೆಗಳನ್ನು ಮಾಡಿಸಿಕೊಳ್ಳಲಾಗದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತೆ ಆಗಿದೆ. ಈ ಗ್ರಾಮ ಪಂಚಾಯಿತಿಗೆ ಹಲವು ಹಳ್ಳಿಗಳು ಒಳಪಟ್ಟಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿರುವ ಮಾಹಿತಿ ಗೊತ್ತಿಲ್ಲದೆ ಜನರು ವಿವಿಧ ಕೆಲಸಗಳಿಗೆ ಬಂದು ನಿರಾಸೆಯಿಂದ ವಾಪಸ್ ಹೋಗುವಂತೆ ಆಗಿದೆ. 

ಇನ್ನು ಪಂಚಾಯಿತಿ ಸಿಬ್ಬಂದಿ ಕೂಡ ಕತ್ತಲೆಯ ಕಟ್ಟಡದಲ್ಲೇ ಇಡೀ ದಿನ ಕುಳಿತು ಕಾಲ ಕಳೆದು ಮನೆಗೆ ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಗೆ ಗ್ರಾಮ ಪಂಚಾಯಿತಿಯ ಪಿಡಿಓ, ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ಸಾರ್ವಜನಿಕರು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿಲ್ಲ. ಮೊದಲನೆಯದಾಗಿ ಪಂಚಾಯಿತಿಗೆ ಪರ್ಮನೆಂಟ್ ಪಿಡಿಓ ಇಲ್ಲ. ಎರಡು ಪಂಚಾಯಿತಿಗಳಿಗೆ ಒಬ್ಬರೇ ಪಿಡಿಓ ಅನ್ನು ನೇಮಿಸಲಾಗಿದ್ದು ಪಿಡಿಓ ಈ ಪಂಚಾಯಿತಿಗೆ ವಾರದಲ್ಲಿ ಎರಡು ದಿನಗಳು ಬಂದರೆ ಅದೇ ಹೆಚ್ಚು. ಇದರಿಂದಾಗಿ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಇನ್ನಾದರೂ ಇಲ್ಲಿಗೆ ಪೂರ್ಣಾವಧಿಯ ಪಿಡಿಓವನ್ನು ನೇಮಿಸಲಿ, ಇಲ್ಲದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯ ಜನರೆಲ್ಲರೂ ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಶರತ್ ಎಚ್ಚರಿಕೆ ನೀಡಿದ್ದಾರೆ.

ಮಂಜಿನ ನಗರಿ ಮಡಿಕೇರಿಯ ಈ ಐದು ಬಡಾವಣೆಗಳಲ್ಲಿ ಭೂಕುಸಿತದ ಆತಂಕ!

 ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಮಂತರ್ ಗೌಡ ಪಂಚಾಯಿತಿಯಲ್ಲಿ ಹೊಂದಾಣಿಕೆಯ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಭೆ ಕರೆದು ಎಲ್ಲವನ್ನೂ ಸರಿಪಡಿಸಲಾಗುವುದು. ಎಷ್ಟೋ ಸಾಧ್ಯವೋ ಅಷ್ಟು ವಿದ್ಯುತ್ ಬಿಲ್ಲು ಪಾವತಿಸಿ ವಿದ್ಯುತ್ ಸಂಪರ್ಕ ಕೊಡಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.

click me!