ಕರ್ನಾಟಕದಲ್ಲಿ ಈ ವರ್ಷ ಮಾರ್ಚ್‌ನಿಂದ ಪೂರ್ವ ಮುಂಗಾರು ಮಳೆ ಆರಂಭಗೊಂಡಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಸರಾಸರಿ 8.8 ರಷ್ಟು ಮಳೆಯಾಗಬೇಕು.
ಬೆಂಗಳೂರು (ಮಾ.28): ಕರ್ನಾಟಕದಲ್ಲಿ ಈ ವರ್ಷ ಮಾರ್ಚ್‌ನಿಂದ ಪೂರ್ವ ಮುಂಗಾರು ಮಳೆ ಆರಂಭಗೊಂಡಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಸರಾಸರಿ 8.8 ರಷ್ಟು ಮಳೆಯಾಗಬೇಕು. ಆದರೆ, ಈ ಬಾರಿ 14.8 ಸೆಂ.ಮೀ. ನಷ್ಟು ಮಳೆಯಾಗುವ ಮೂಲಕ ವಾಡಿಕೆ ಪ್ರಮಾಣಕ್ಕಿಂತ ಶೇ.69 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿಯಲ್ಲಿ ಶೇ.49ರಷ್ಟು ಮಳೆ ಹೆಚ್ಚಾಗಿದ್ದರೆ, ಉತ್ತರ ಒಳನಾಡಿನಲ್ಲಿ ಕೇವಲ ಶೇ.5 ರಷ್ಟು ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.107ರಷ್ಟು ಮಳೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
12 ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮಳೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮುಂಗಾರು ಪೂರ್ವ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಕೆಲ ಕಡೆ ಉತ್ತಮ ಮಳೆಯಾಗಿದೆ. ಇನ್ನೂ ಒಂದು ವಾರ ಕರಾವಳಿಯ ಮೂರು ಜಿಲ್ಲೆ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಯಲ್ಲಿ ಏ.3ವರೆಗೆ ಹಗುರ ಮಳೆಯಾಗಲಿದೆ.
ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 15 ಕುಸಿತ: ಈಗ ಇರೋದು ಎಷ್ಟು ಗೊತ್ತಾ?
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಕೊಡಗಿನ ನಾಪೋಕ್ಲುದಲ್ಲಿ ಅತಿ ಹೆಚ್ಚು 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೈಲಹೊಂಗಲ 4, ಶಿವಮೊಗ್ಗದ ಹಂಚದಕಟ್ಟೆ, ಸೋಮವಾರ ಪೇಟೆ, ಭಾಗಮಂಡಲ, ಹಾರಂಗಿಯಲ್ಲಿ ತಲಾ 3, ಶೃಂಗೇರಿ, ಬಾಳೆಹೊನ್ನೂರು, ಖಾನಾಪುರ, ಸಂಕೇಶ್ವರದಲ್ಲಿ ತಲಾ 2, ಬೆಳಗಾವಿ, ಗದಗ, ಕೊಣನೂರು ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಒಣ ದ್ರಾಕ್ಷಿ ತಯಾರಿಕೆಯ ಶೆಡ್‌ಗೆ ಹಾನಿ: ಕಳೆದೆರಡು ದಿನಗಳಿಂದ ಅಕಾಲಿಕ ಮಳೆ, ಗಾಳಿ ಸುರಿದು ಒಣ ದ್ರಾಕ್ಷಿ ತಯಾರಿಕೆಯ ಶೆಡ್‌ಗಳಲ್ಲಿ ಮಳೆ ನೀರು ನಿಂತು ದ್ರಾಕ್ಷಿ ಹಾನಿಯಾಗಿದೆ. ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ ಅನೇಕ ರೈತರು ಕಡಿಮೆ ನೀರಿನಲ್ಲಿ ದ್ರಾಕ್ಷಿ ಬೆಳೆ ಮಾಡಿದ್ದಾರೆ. ಈ ವರ್ಷ ಇಳುವರಿ ಕಳೆದ ವರ್ಷಕ್ಕಿಂತ ಶೇ.50 ರಷ್ಟು ಕಮ್ಮಿಯಾಗಿದೆ. ಕಾರಣ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ದ್ರಾಕ್ಷಿ ಬೆಳೆ ಕಡ್ಡಿ ಕಟಾವು ಮಾಡುತ್ತಿರುವ ಸಮಯ ಎಳೆ ಹೂ ಏಕಕಾಲಕ್ಕೆ ಬಿಡುವುದರಿಂದ ಸತತ ಮಳೆಗೆ ಎಲೆ ಹಾಗೂ ಹೂಗಳು ಉದರಿದವು ಹೀಗಾಗಿ ಉಳುವರಿಯಲ್ಲಿ ಅರ್ಧ ಕಮ್ಮಿಯಾಗಿ ರೈತ ಕಷ್ಟದಲ್ಲಿದ್ದಾನೆ. ಅರ್ಧ ಇಳುವರಿ ಚೆನ್ನಾಗಿ ಬಂದಿದೆ. ಒಳ್ಳೆಯ ಬೆಲೆ ಸಿಗಲಿದೆಂದು ಕನಸು ಸಹ ಕಟ್ಟಿಕೊಂಡಿದ್ದರು.
ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ವಿದ್ಯುತ್ ಶುಲ್ಕ ಹೆಚ್ಚಳ ಬರೆ: ಯುಗಾದಿಗೆ ಡಬಲ್ ಶಾಕ್!
ಆದರೆ, ತಾನೊಂದು ಬಗೆದರೇ ದೈವಯೊಂದು ಬಗೆದಂತೆ ಅಕಾಲಿಕ ಮಳೆ ಗಾಳಿ ಬೀಸಿ ಸೆಡ್ ಮೇಲೆ ಹೋದಿಕೆಯು ಗಾಳಿಗೆ ಹಾರಿ ಹೋಗಿ ಒಣ ದ್ರಾಕ್ಷಿ ಮಳೆಯಿಂದ ನೀರು ಸೇರಿದವು. ಯಲಿಹಡಲಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ರಾಮತೀರ್ಥ, ಗ್ರಾಮಗಳಲ್ಲಿ ನೂರಾರು ಸೆಡ್‌ಗಳಲ್ಲಿ ದ್ರಾಕ್ಷಿ ಅಕಾಲಿಕ ಮಳೆಯಿಂದ ಹಾನಿ ಆಗಿದೆ. ಸಿಕಂದರ ಮುಜಾವರ ಒಣ ದ್ರಾಕ್ಷಿ ಘಟಕದಲ್ಲಿ ಸ್ವಂತ ಹಾಗೂ ಅನೇಕ ರೈತರು ಒಣ ದ್ರಾಕ್ಷಿಗೆ ಸಂಸ್ಕರಣೆ ಮಾಡಲು ತಂದಿದ್ದ ರೈತರು ಗೋಳು ಯಾರ ಮುಂದೆ ಹೇಳಲಿ ಎನ್ನುವ ಪರಿಸ್ಥಿತಿ ಉಂಟಾಗಿದೆ. ದಯಮಾಡಿ ಇಲಾಖೆಯು ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಮುಟ್ಟಿಸುವ ಕಾರ್ಯ ಆಗಲಿ ಎಂದು ರೈತರು ಅಭಿಪ್ರಾಯವಾಗಿದೆ.