ಕರ್ನಾಟಕದಲ್ಲಿ ಒಂದೇ ವರ್ಷ 68,000 ಏಡ್ಸ್‌ ಕೇಸ್‌ಗಳು ಪತ್ತೆ..!

By Kannadaprabha News  |  First Published Aug 13, 2024, 6:22 AM IST

ದೇಶದಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ, 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 68,450 ಕೇಸ್ ವರದಿಯಾಗಿವೆ. ದೇಶದಲ್ಲಿರುವ 24.44 ಲಕ್ಷ ಸೋಂಕಿತರ ಪೈಕಿ ಕರ್ನಾಟಕದಲ್ಲೇ 2.28 ಲಕ್ಷ ಸೋಂಕಿತರಿದ್ದಾರೆ. ಅದರಲ್ಲಿ 1.91 ಲಕ್ಷ ಜನ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ 


ಬೆಂಗಳೂರು(ಆ.13): ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68450 ಎಚ್‌ಐವಿ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಎಚ್‌ಐವಿ ಸೋಂಕಿನ ಕುರಿತು ಯುವಜನತೆ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿರುವ ಎರಡು ತಿಂಗಳ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‌ಐವಿ ತಡೆ ಪ್ರಚಾರಾಂದೋಲನ’ಕ್ಕೆ ಸೋಮವಾರ ಚಾಲನೆ ನೀಡಿದ ಅವರು, ದೇಶದಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ, 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 68,450 ಕೇಸ್ ವರದಿಯಾಗಿವೆ. ದೇಶದಲ್ಲಿರುವ 24.44 ಲಕ್ಷ ಸೋಂಕಿತರ ಪೈಕಿ ಕರ್ನಾಟಕದಲ್ಲೇ 2.28 ಲಕ್ಷ ಸೋಂಕಿತರಿದ್ದಾರೆ. ಅದರಲ್ಲಿ 1.91 ಲಕ್ಷ ಜನ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

Tap to resize

Latest Videos

ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಬಳಕೆ; ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಎಚ್‌ಐವಿಗೆ ಬಲಿ, 828 ಮಕ್ಕಳಿಗೆ ಪಾಸಿಟಿವ್!

ಸೋಂಕು ಹರಡುವಿಕೆಯನ್ನು ಶೂನ್ಯಕ್ಕೆ ಇಳಿಸುವ ಉದ್ದೇಶವಿದೆ. ಲೈಂಗಿಕ ಸಂಪರ್ಕದ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವಿಶೇಷವಾಗಿ ಯುವ ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು. ಎಚ್‌ಐವಿ ತಗುಲಿದೆ ಎಂದಾಕ್ಷಣ ಜೀವಕ್ಕೆ ಅಪಾಯವಿದೆ ಎಂದಲ್ಲ. ನಿಯಮಿತವಾಗಿ ಚಿಕಿತ್ಸೆ ತೆಗೆದುಕೊಂಡರೆ ಆರೋಗ್ಯಕರ ಜೀವನ ನಡೆಸಬಹುದು. ಲೈಂಗಿಕತೆಗೆ ಬಹುಸಂಗಾತಿ ಹೊಂದುವುದು, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಎಚ್‌ಐವಿ ಸೋಂಕು ಹಬ್ಬುವ ಪ್ರಮಾಣ ಹೆಚ್ಚು ಇದೆ ಎಂದು ಸಚಿವರು ಹೇಳಿದರು.ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಿತ್ತಿ ಚಿತ್ರ ಬಿಡಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಲಸಿಗರು, ಯುವಸಮುದಾಯ ಇರುವ ಕಡೆಗಳಲ್ಲಿ

ಆರೋಗ್ಯ ಕಾರ್ಯಕರ್ತರು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಪರೀಕ್ಷೆಗೆ ಉತ್ತೇಜನ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪಾಸಿಟಿವ್ ಪ್ರಮಾಣ ಶೇ.0.41:

2023ರಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ ನಡುವೆ ರಾಜ್ಯದ 475 ಆಪ್ತ ಸಮಾಲೋಚನಾ ಕೇಂದ್ರಗಳಲ್ಲಿ 18,65,141 ಎಚ್‌ಐವಿ ಪರೀಕ್ಷೆ ನಡೆಸಲಾಗಿದ್ದು, 7,696 ಸೋಂಕು ದೃಢಪಟ್ಟಿದೆ. ಪಾಸಿಟಿವ್ ಪ್ರಮಾಣ 0.41 ಇದೆ. ಇದೇ ಅವಧಿಯಲ್ಲಿ 8,37,709 ಗರ್ಭಿಣಿಯರಿಗೆ ತಪಾಸಣೆ ನಡೆಸಿದಾಗ 327 ಜನರಲ್ಲಿ ಸೋಂಕು ದೃಢವಾಗಿದೆ. 2025ರ ವೇಳೆಗೆ ಗರ್ಭಿಣಿಯರಿಂದ ಅವರ ಮಗುವಿಗೆ ಸೋಂಕು ತಗಲುವ ಪ್ರಮಾಣವನ್ನು ಶೂನ್ಯಗೊಳಿಸಲು ಆಸ್ಪತ್ರೆಯಲ್ಲಿ ಕಡ್ಡಾಯ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!