Pradhan Mantri Krishi Sinchai Yojana ಅಡಿ ರಾಜ್ಯಕ್ಕೆ 642 ಕೋಟಿ ನೆರವು: ಸಚಿವ ಪಾಟೀಲ್‌

By Kannadaprabha NewsFirst Published Jan 14, 2022, 8:49 AM IST
Highlights

*  ಕೇಂದ್ರದಿಂದ ಬಂದ ಅನುದಾನ ರಾಜ್ಯದ 57 ತಾಲೂಕಿನಲ್ಲಿ ಬಳಕೆ
*  ಮಳೆಯಾಶ್ರಿತ ರೈತರಿಗೆ 22ರಿಂದ 28 ಸಾವಿರ ರು.ವರೆಗೆ ಅನುದಾನ
*  ಮಳೆಕೊಯ್ಲು, ಅಂತರ್ಜಲ ಹೆಚ್ಚಳ, ತೇವಾಂಶ ರಕ್ಷಣೆಗೆ ಯೋಜನೆ ಜಾರಿ
 

ಬೆಂಗಳೂರು(ಜ.14):  ರಾಜ್ಯದ(Karnataka) 2.75 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಮೂಲಕ ಮಣ್ಣಿನ ತೇವಾಂಶ ರಕ್ಷಣೆ, ಅಂತರ್ಜಲ ಹೆಚ್ಚಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ(Pradhan Mantri Krishi Sinchai Yojana) ರಾಜ್ಯಕ್ಕೆ 642.26 ಕೋಟಿ ರು. ಮಂಜೂರಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ 57 ತಾಲ್ಲೂಕುಗಳಲ್ಲಿ 57 ಉಪ ಜಲಾನಯನಗಳನ್ನು ಉಪಚರಿಸಲು ಅನುಮೋದನೆ ದೊರಕಿದೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌(BC Patil), ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 60:40 ಅನುಪಾತದಲ್ಲಿ ವೆಚ್ಚ ಭರಿಸಲಿವೆ. ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್‌ ಜಲಾನಯನಗಳ ಉಪಚಾರಕ್ಕೆ 22 ಸಾವಿರ ರು., ಗುಡ್ಡಗಾಡು ಪ್ರದೇಶದ ಜಲಾನಯನ ಉಪಚಾರಕ್ಕೆ 28 ಸಾ.ರು.ವರೆಗೆ ಅನುದಾನ(Grants) ಲಭ್ಯವಾಗಲಿದೆ ಎಂದರು.

Coronavirus: ಕೋವಿಡ್‌ 3ನೇ ಅಲೆ ಎದುರಿಸಲು ಸಜ್ಜು: ಸಚಿವ ಬಿ.ಸಿ.ಪಾಟೀಲ್‌

ಪರ್ಯಾಯ ಬೆಳೆ ವ್ಯವಸ್ಥೆ(Alternative Cropping System) ಪ್ರೋತ್ಸಾಹಿಸುವುದು, ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯ ಎದುರಿಸುವುದು, ಆಸ್ತಿ ರಹಿತರಿಗೆ ಸ್ವ ಸಹಾಯ ಗುಂಪುಗಳನ್ನು ರಚಿಸಿ ಉತ್ತೇಜಿಸುವುದು, ಅಂಗವಿಕಲರು ಮತ್ತು ಮಹಿಳೆಯರಿಗೆ ಅಭಿವೃದ್ಧಿಪಡಿಸಿದ ಭೂಮಿ(Land), ನೀರು(Water)ಮತ್ತು ಜೀವರಾಶಿಗಳ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಪ್ರವೇಶ ಮತ್ತು ಅವಕಾಶ, ರೈತ ಉತ್ಪಾದಕ ಸಂಸ್ಥೆ, ಬಳಕೆದಾರರ ಗುಂಪು ಸೇರಿದಂತೆ ವಿವಿಧ ಸಮುದಾಯ ಸಂಸ್ಥೆಗಳಲ್ಲಿ ಈ ವರ್ಗಗಳ ಜನರಿಗೆ ಸದಸ್ಯತ್ವ ನೀಡಲು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ ಎಂದು ಸಚಿವರು ವಿವರಿಸಿದರು.

21 ಜಿಲ್ಲೆಗಳಲ್ಲಿ ‘ರಿವಾರ್ಡ್‌’ ಯೋಜನೆ:

ವಿಶ್ವಬ್ಯಾಂಕ್‌(World Bank) ನೆರವಿನಡಿ ಕೃಷಿಯ ಸುಸ್ಥಿರತೆಗಾಗಿ ನವೀನ ಮಾದರಿಯ ಅಭಿವೃದ್ಧಿಯ ಮೂಲಕ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ (ರಿವಾರ್ಡ್‌) ಯೋಜನೆಯನ್ನು ರಾಜ್ಯದ 21 ಜಿಲ್ಲೆಗಳಲ್ಲಿ ಮುಂದಿನ 5 ವರ್ಷಗಳ ಕಾಲ 600 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುವುದು. ಇದರಲ್ಲಿ ರಾಜ್ಯದ ಪಾಲು ಶೇ.30 ಹಾಗೂ ವಿಶ್ವಬ್ಯಾಂಕ್‌ ಶೇ.70ರಷ್ಟು ನೆರವು ನೀಡಲಿದೆ.

ಕಾಳಸಂತೆಯಲ್ಲಿ ಗೊಬ್ಬರ ಮಾರಿದರೆ ಜೈಲುಶಿಕ್ಷೆ: ಸಚಿವ ಬಿ.ಸಿ. ಪಾಟೀಲ

ಯೋಜನೆಯಡಿ ರಾಜ್ಯದ 14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 11 ಜಿಲ್ಲೆಗಳಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಪ್ರಸ್ತುತ ಹೊಸದಾಗಿ 9 ಜಿಲ್ಲೆಗಳು ಸೇರಿದಂತೆ 19.41 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಈ ಕಾರ್ಡ್‌ನಲ್ಲಿ ತಿಳಿಸಿ ಯಾವ ಬೆಳೆ ಬೆಳೆಯಬಹುದು ಅಥವಾ ಬೇರೆ ಬೇರೆ ಬೆಳೆ ಬೆಳೆದರೆ ಏನು ಅನುಕೂಲ ಎಂಬುದನ್ನು ತಿಳಿಸಲಾಗುವುದು. ಜಲಾನಯನ ನಿರ್ವಹಣೆ ಕುರಿತು ಬೆಂಗಳೂರು ಕೃಷಿ ವಿವಿಯಲ್ಲಿ ಅತ್ಯುನ್ನತ ಮಟ್ಟದ ಅಧ್ಯಯನ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

ಅಮೃತ ಉತ್ಪಾದಕ ಸಂಸ್ಥೆಗಳ ರಚನೆ:

ಮುಖ್ಯಮಂತ್ರಿಗಳು 750 ಅಮೃತ ರೈತ/ ಮೀನುಗಾರರು/ನೇಕಾರರ ಉತ್ಪಾದಕ ಸಂಸ್ಥೆಗಳನ್ನು ಘೋಷಿಸಿದ ಮೇರೆಗೆ ಪ್ರಸಕ್ತ ಸಾಲಿನಲ್ಲಿ 250 ಉತ್ಪಾದಕ ಸಂಸ್ಥೆ ರಚಿಸುವ ಗುರಿ ಹೊಂದಿದ್ದು, ಈವರೆಗೆ 178 ಸಂಸ್ಥೆಗಳನ್ನು ರಚಿಸಲಾಗಿದೆ. ಪ್ರತಿ ಸಂಸ್ಥೆಗೆ 30 ಲಕ್ಷ ರು.ನಂತೆ ಮೂರು ವರ್ಷಗಳಲ್ಲಿ 225 ಕೋಟಿ ರು. ವೆಚ್ಚದಲ್ಲಿ 750 ಅಮೃತ ಉತ್ಪಾದಕರ ಸಂಸ್ಥೆ ರಚಿಸಲಾಗುವುದು. ಕೇಂದ್ರ ಸರ್ಕಾರದ ಯೋಜನೆಯಡಿ 100 ಉತ್ಪಾದಕರ ಸಂಸ್ಥೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 130 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
 

click me!