Corona Crisis: ರಾಜ್ಯದಲ್ಲಿ ಕೋವಿಡ್‌ ಮತ್ತಷ್ಟು ಕುಸಿತ: 6,000 ಕೇಸ್‌, ತಿಂಗಳಲ್ಲೇ ಕನಿಷ್ಠ..!

Kannadaprabha News   | Asianet News
Published : Feb 08, 2022, 07:57 AM IST
Corona Crisis: ರಾಜ್ಯದಲ್ಲಿ ಕೋವಿಡ್‌ ಮತ್ತಷ್ಟು ಕುಸಿತ: 6,000 ಕೇಸ್‌, ತಿಂಗಳಲ್ಲೇ ಕನಿಷ್ಠ..!

ಸಾರಾಂಶ

*   ಪಾಸಿಟಿವಿಟಿ ದರ ಶೇ.6 ರಷ್ಟು ದಾಖಲು *   ಬೆಂಗಳೂರಿನಲ್ಲಿ 2718 ಹೊಸ ಕೇಸ್‌ *   318 ಮಂದಿ ಗಂಭೀರ

ಬೆಂಗಳೂರು(ಫೆ.08):  ರಾಜ್ಯದಲ್ಲಿ(Karnataka) ಒಂದು ಲಕ್ಷಕ್ಕಿಂತ ಕಡಿಮೆ ಕೊರೋನಾ ಸೋಂಕು ಪರೀಕ್ಷೆಗಳು(Covid Test) ನಡೆದಿದ್ದು, ಹೊಸ ಪ್ರಕರಣಗಳು ಕೂಡಾ ಆರು ಸಾವಿರಕ್ಕೆ ಕುಸಿದಿವೆ. ಇದು 1 ತಿಂಗಳ ಕನಿಷ್ಠ. ಸೋಂಕಿತರ ಸಾವು ಮಾತ್ರ ಐವತ್ತರ ಆಸುಪಾಸಿನಲ್ಲಿಯೇ ಮುಂದುವರೆದಿದೆ. 

ಸೋಮವಾರ 6,151 ಮಂದಿ ಸೋಂಕಿತರಾಗಿದ್ದು, 49 ಸೋಂಕಿತರು ಸಾವಿಗೀಡಾಗಿದ್ದಾರೆ(Death). 16,802 ಮಂದಿ ಗುಣಮುಖರಾಗಿದ್ದಾರೆ. ಸದ್ಯ 87 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 99 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.6 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 23 ಸಾವಿರ ಕಡಿಮೆಯಾಗಿದ್ದು, ಹೊಸ ಸೋಂಕಿತರ ಎರಡು ಸಾವಿರಷ್ಟು ಇಳಿಕೆಯಾಗಿವೆ (ಭಾನುವಾರ 8,425 ಪ್ರಕರಣ). ರಾಜಧಾನಿ ಬೆಂಗಳೂರಿನಲ್ಲಿ 2,718 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಂದು ಸಾವಿರ ಕಡಿಮೆಯಾಗಿವೆ (ಭಾನುವಾರ 3,822).

Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!

ಗರಿಷ್ಠ 2.5 ಲಕ್ಷ ನಡೆಯುತ್ತಿದ್ದ ಕೊರೋನಾ(Coronavirus) ಸೋಂಕು ಪರೀಕ್ಷೆಗಳು ಇಳಿಕೆಯಾಗುತ್ತಾ ಸಾಗಿ 99 ಸಾವಿರಕ್ಕೆ ತಗ್ಗಿದೆ. ಅಂತೆಯೇ ಹೊಸ ಪ್ರಕರಣಗಳು ಕೂಡ ಇಳಿಮುಖವಾಗಿ 6 ಸಾವಿರಕ್ಕೆ ತಲುಪಿವೆ. ಇನ್ನು ಸೋಂಕಿತರ ಸಾವು ಮಾತ್ರ 50 ಆಸುಪಾಸಿನಲ್ಲಿಯೇ ಇದೆ. ರಾಯಚೂರಿನಲ್ಲಿ(Raichur) 12 ವರ್ಷದ ಬಾಲಕ, ಬೆಂಗಳೂರಿನಲ್ಲಿ 29 ವರ್ಷದ ಯುವಕ ಸೊಂಕಿಗೆ ಬಲಿಯಾಗಿದ್ದಾರೆ. ಅತಿ ಹೆಚ್ಚು ಬೆಂಗಳೂರಿನಲ್ಲಿ 15, ಮೈಸೂರು ಆರು, ತುಮಕೂರು ಹಾಗೂ ಉಡುಪಿ ತಲಾ ನಾಲ್ಕು, ದಕ್ಷಿಣ ಕನ್ನಡ ಮೂರು ಸಾವು ವರದಿಯಾಗಿವೆ.

ಹೆಚ್ಚು ಸೋಂಕು ಎಲ್ಲಿ?:

ಬೆಂಗಳೂರು(Bengaluru) ಹೊರತು ಪಡಿಸಿದರೆ ಯಾವ ಜಿಲ್ಲೆಯಲ್ಲೂ ಒಂದು ಸಾವಿರ ಗಡಿದಾಟಿಲ್ಲ. ಬೆಳಗಾವಿ 321, ಮೈಸೂರು 285, ಹಾಸನ 219, ತುಮಕೂರು 210 ಮಂದಿಗೆ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಕಲಬುರಗಿ, ಕೊಡಗು, ಕೊಪ್ಪಳ, ಮಂಡ್ಯ, ಶಿವಮೊಗ್ಗ, ಉತ್ತರ ಕರ್ನಾಟಕಲ್ಲಿ(North Karnataka) 100ಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಮೂರು ಅಲೆಗಳನ್ನು ಸೇರಿ ಈವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 39.02 ಲಕ್ಷಕ್ಕೆ, ಗುಣಮುಖರ ಸಂಖ್ಯೆ 37.7 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 39,396ಕ್ಕೆ ಏರಿಕೆಯಾಗಿದೆ.

Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ

ನಗರದಲ್ಲಿ 2718 ಹೊಸ ಕೇಸ್‌: ಶೇ.6ಕ್ಕೆ ಇಳಿದ ಪಾಸಿಟಿವಿಟಿ

ರಾಜಧಾನಿಯಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಸೋಮವಾರ 2718 ಮಂದಿ ಸೋಂಕು ತಗುಲಿದ್ದು, 15 ಸೋಂಕಿತರು ಸಾವಿಗೀಡಾಗಿದ್ದಾರೆ. 6,726 ಮಂದಿ ಗುಣಮುಖರಾಗಿದ್ದಾರೆ.
ನಗರದಲ್ಲಿ ಸದ್ಯ 35,631 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 46,000 ಸೋಂಕು ಪರೀಕ್ಷೆ ನಡೆದಿದ್ದು, ಶೇ.6ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ.
ಒಂದು ಲಕ್ಷಕ್ಕೂ ಅಧಿಕ ನಡೆಸುತ್ತಿದ್ದ ಸೋಂಕು ಪರೀಕ್ಷೆಗಳು ಈಗ 46 ಸಾವಿರಕ್ಕೆ ತಗ್ಗಿವೆ. ಇದರಿಂದ ಹೊಸ ಪ್ರಕರಣಗಳು ಇಳಿಕೆಯಾಗುತ್ತಾ ಎರಡೂವರೆ ಸಾವಿರಕ್ಕೆ ತಗ್ಗಿವೆ. ಆದರೆ, ಸೋಂಕಿತರ ಸಾವು ಮಾತ್ರ 15 ಆಸುಪಾಸಿನಲ್ಲಿಯೇ ಮುಂದುವರೆದಿದೆ.

318 ಮಂದಿ ಗಂಭೀರ:

ಜನವರಿ ಮೂರನೇ ವಾರ ಸೋಂಕು ಪ್ರಕರಣ ಎರಡು ಲಕ್ಷ ಗಡಿದಾಟಿತ್ತು. ಹೊಸ ಪ್ರಕರಣಗಳು ಇಳಿಕೆಯಾಗಿ, ಗುಣಮುಖರು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 35 ಸಾವಿರಕ್ಕಿಂತ ಕಡಿಮೆಯಾಗಿವೆ. ಸಕ್ರಿಯ ಸೋಂಕಿತರ ಪೈಕಿ 1,291 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 318 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ. ಉಳಿದ 33 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ. ನಗರದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 17.6 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.07 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 16,692ಕ್ಕೆ ಏರಿಕೆಯಾಗಿದೆ. ಕ್ಲಸ್ಟರ್‌ ಮತ್ತು ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 61ಕ್ಕೆ ಇಳಿಕೆಯಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ - ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!