6 ಮಂದಿಗೆ ಲಲಿತಾ ಅಕಾಡೆಮಿ ಪ್ರಶಸ್ತಿ: 20 ಸಾಧಕರಿಗೆ ವರ್ಣಶ್ರೀ ಪ್ರಶಸ್ತಿ

Published : Feb 08, 2025, 10:59 AM IST
6 ಮಂದಿಗೆ ಲಲಿತಾ ಅಕಾಡೆಮಿ ಪ್ರಶಸ್ತಿ: 20 ಸಾಧಕರಿಗೆ ವರ್ಣಶ್ರೀ ಪ್ರಶಸ್ತಿ

ಸಾರಾಂಶ

ಕರ್ನಾಟಕ ಲಲಿತಕಲಾ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಹಾಗೂ 2022- 2023ನೇ ಸಾಲಿನ ಗೌರವ ಪ್ರಶಸ್ತಿ, 51-52ನೇ ವಾರ್ಷಿಕ ಕಲಾ ಬಹುಮಾನ ಪ್ರಕಟಗೊಂಡಿದೆ. 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿಗೆ ತಲಾ ಮೂವರು ಸಾಧಕರು ಆಯ್ಕೆಯಾಗಿದ್ದಾರೆ.  

ಬೆಂಗಳೂರು (ಫೆ.08): ಕರ್ನಾಟಕ ಲಲಿತಕಲಾ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಹಾಗೂ 2022- 2023ನೇ ಸಾಲಿನ ಗೌರವ ಪ್ರಶಸ್ತಿ, 51-52ನೇ ವಾರ್ಷಿಕ ಕಲಾ ಬಹುಮಾನ ಪ್ರಕಟಗೊಂಡಿದೆ. 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿಗೆ ತಲಾ ಮೂವರು ಸಾಧಕರು ಆಯ್ಕೆಯಾಗಿದ್ದಾರೆ. 2022ನೇ ಸಾಲಿಗೆ ಕಮಲ್‌ ಅಹಮದ್‌ (ಗದಗ), ನಿರ್ಮಲಾ ಕುಮಾರಿ (ತುಮಕೂರು), ಬಿ.ಪಿ.ಕಾರ್ತಿಕ್‌ (ಬೆಂಗಳೂರು) ಮತ್ತು 2023ನೇ ಸಾಲಿನಲ್ಲಿ ನಿಜಲಿಂಗಪ್ಪ ಹಾಲ್ವಿ(ಯಾದಗಿರಿ), ವಿಠಲ ರೆಡ್ಡಿ ಚುಳಕಿ(ಹುಬ್ಬಳ್ಳಿ), ಎಚ್‌.ಬಾಬೂರಾವ್‌ (ಕಲಬುರಗಿ) ಅವರು ಆಯ್ಕೆಗೊಂಡಿದ್ದಾರೆ.

ವರ್ಣಶ್ರೀ ಪ್ರಶಸ್ತಿ: 2021-22ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ವೀಣಾ ಶ್ರೀನಿವಾಸನ್‌ (ಮಂಗಳೂರು), ಪರಮೇಶ ಜೋಳದ(ಬಾಗಲಕೋಟೆ), ಪಿ.ಎ.ಬಿ.ಈಶ್ವರ(ರಾಯಚೂರು), ಕುಡಲಯ್ಯ ಹಿರೇಮಠ(ಪುಣೆ), ಅಶೋಕ ಕಲ್ಲಶೆಟ್ಟಿ(ತುಮಕೂರು), ನಂದಬಸಪ್ಪ ವಾಡೆ(ವಿಜಯಪುರ), ಕೆ.ಜಿ.ಲಿಂಗದೇವರು(ರಾಮನಗರ), ಬಿ.ಮಹೇಶ್‌(ಮಡಿಕೇರಿ), ಶಕುಂತಲಾ ವರ್ಣೇಕರ(ಹುಬ್ಬಳ್ಳಿ) ಮತ್ತು ಜಿ.ಮಂಜುನಾಥ(ಬಳ್ಳಾರಿ) ಆಯ್ಕೆಯಾಗಿದ್ದಾರೆ. 2022-23ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಪ್ರಕಾಶ್‌ನಾಯಕ್‌(ಶಿರಸಿ), ಬಸವರಾಜ ಸಿ.ಕುತ್ನಿ(ಗದಗ), ಜಗದೀಶ್‌ ಕಾಂಬ್ಲೆ(ಕಲಬುರಗಿ), ಟಿ.ಜಯದೇವಣ್ಣ(ಹಾಸನ), ಶೈಲದೊತ್ರೆ(ಬಾಗಲಕೋಟೆ), ಸಿ.ಮಹದೇವಸ್ವಾಮಿ(ಚಾಮರಾಜನಗರ), ಮೀನಾಕ್ಷಿ ಸದಲಗಿ(ಬೆಳಗಾವಿ), ಕೆ.ಎಂ.ರವೀಶ್‌(ತುಮಕೂರು), ಎಫ್‌.ವಿ.ಚಿಕ್ಕಮಠ(ಧಾರವಾಡ) ಮತ್ತು ಸಯ್ಯದ್‌ ಅಸೀಫ್‌ ಆಲಿ(ಮಂಗಳೂರು) ಅವರು ಆಯ್ಕೆಗೊಂಡಿದ್ದಾರೆ.

51ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರು ಮತ್ತು ಕಲಾಕೃತಿಗಳು: ಶಿವಪ್ರಸಾದ-ವರ್ಲ್ಡ್ಸ್ ಯು ಲವ್‌(ಕಲಾಕೃತಿ), ಬಿ.ಎಲ್‌.ಭಾನುಪ್ರಕಾಶ್‌- ಟ್ರಾವೆಲ್ಸ್‌ ಆ್ಯಂಡ್‌ ರೆಪ್ಲೆಕ್ಷನ್‌ ಸೀರಿಸ್‌-1, ರಾಜೇಂದ್ರ ಕೇದಿಗೆ- ದ ಅನ್‌ಡಿಫೈನಡ್‌, ರೋಷ್ ರವೀಂದ್ರನ್‌- ಫೆಸೆಟ್ಸ್‌ ಸೆಟಲ್ಸ್‌, ವರ್ಣಂ ನಾರಾಯಣ- ವಿಲೇಜ್‌/ಸಿಟಿ, ಅಮೋಘರಾಜ್‌ ಡಿ.ಬಾಲಿ- ರೀಸೈಕಲ್‌, ಗಿರೀಶ್‌ ಬಿ.ಕುಲಕರ್ಣಿ- ಮರಳಿ ಗೂಡಿಗೆ, ಪಿ.ನಾಗರಾಜು- ಜೀವನದ ಪ್ರಯಾಣದ ನಡುವೆ ಭಾವೋದ್ರೇಕ, ಹಣಮಂತ ಮಲ್ಕಾಪುರ- ಫಸ್ಟ್‌ಜೆನರೇಷನ್‌, ಕೃಷ್ಣಾಚಾರಿ- ಜೀವನಕ್ಕಾಗಿ ಕಲಾಕೃತಿಗಳು ಆಯ್ಕೆಯಾಗಿವೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ ಏಷ್ಯಾನೆಟ್ ಫೈವ್ ಸ್ಟಾರ್ಸ್!

52ನೇ ವಾರ್ಷಿಕ ಕಲಾ ಬಹುಮಾನಕ್ಕೆ ಡಾ.ರೆಹಮಾನ್‌ ಪಟೇಲ್‌- ಮದ್ಯಮಾದಿರಾಗ(ಕಲಾಕೃತಿ), ಕೆ.ಪ್ರಶಾಂತ- ಸಂಸ್ಕೃತಿ ಚಲನೆ, ಎಸ್‌.ಅರುಳ್‌ ದೇವನ್‌- ಅನೌನ್‌ ಮೆಟಮೊರ್ಫಾಸಿಸ್‌-1, ಬ್ಪಿನೆಲ್‌ ಮರಿಯಾ- ಅನ್‌ಹೋಮ, ಎಂ.ಗೌತಮಿ- ಬಿನೆತ್‌ ದ ಸರ್ಫೆಸ್‌, ರಮೇಶ್‌ ಚವ್ಹಾಣ- ಯುನೈಟೆಡ್‌-2, ಸಂತೋಷ ಪತ್ತಾರ- ಚಂಚಲೆ, ಎನ್‌.ಚೈತ್ರ- ಅನ್‌ಟೈಟಲ್ಡ್‌, ಶಿವರಾಮು- ಆಸರೆ, ಎನ್‌.ದಯಾನಂದ-ಕಣಜ ಕಲಾಕೃತಿಗಳು ಬಹುಮಾನ ಮತ್ತು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿಯು ತಲಾ ₹50 ಸಾವಿರ ನಗದು, ವರ್ಣಶ್ರೀ ಪ್ರಶಸ್ತಿಯು ತಲಾ ₹25 ಸಾವಿರ ನಗದು ಮತ್ತು ವಾರ್ಷಿಕ ಕಲಾ ಪ್ರದರ್ಶನದ 20 ಉತ್ತಮ ಕಲಾಕೃತಿಗಳಿಗೆ ತಲಾ ₹25 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ