ಸೊಳ್ಳೆಗಳ ನಾಶಕ್ಕೆ ಶಿರಾ ಕೆರೆಯಲ್ಲಿ ಪ್ರಯೋಗ: ರಾಜ್ಯದಲ್ಲೇ ಮೊದಲು!

Published : Feb 08, 2025, 09:09 AM IST
ಸೊಳ್ಳೆಗಳ ನಾಶಕ್ಕೆ ಶಿರಾ ಕೆರೆಯಲ್ಲಿ ಪ್ರಯೋಗ: ರಾಜ್ಯದಲ್ಲೇ ಮೊದಲು!

ಸಾರಾಂಶ

ನೀರಿನ ಸಂರಕ್ಷಣೆ ಹಾಗೂ ಸೊಳ್ಳೆಗಳ ನಿರ್ಮೂಲನೆಗೆ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ಪರಿಸರ ಸ್ನೇಹಿ ಔಷಧವನ್ನು ನೀರಿನಲ್ಲಿ ಹಾಕುವ ಮೂಲಕ ಕೊಳಚೆ ನೀರನ್ನು ಸಂಸ್ಕರಿಸಲು ಹಾಗೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬಹುದು. 

ಶಿರಾ (ಫೆ.08): ನೀರಿನ ಸಂರಕ್ಷಣೆ ಹಾಗೂ ಸೊಳ್ಳೆಗಳ ನಿರ್ಮೂಲನೆಗೆ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ಪರಿಸರ ಸ್ನೇಹಿ ಔಷಧವನ್ನು ನೀರಿನಲ್ಲಿ ಹಾಕುವ ಮೂಲಕ ಕೊಳಚೆ ನೀರನ್ನು ಸಂಸ್ಕರಿಸಲು ಹಾಗೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬಹುದು. ಇದನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಾದಿಂದ ಪ್ರಯೋಗ ಮಾಡುತ್ತಿದ್ದು ಇದು ಯಶಸ್ವಿಯಾದರೆ ದೇಶಾದ್ಯಂತ ನೀರಿನ ಸಂರಕ್ಷಣೆಗೆ ಅನುಕೂಲವಾಗಲಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಸೊಳ್ಳೆಗಳನ್ನು ಸರ್ವನಾಶ ಮಾಡಲು ಒಂದು ಔಷಧಿಯನ್ನು ಆಮದು ಮಾಡಿಕೊಂಡು ಸಿಂಪಡಿಸಲಾಗಿತ್ತು,

ಇದು ಯಶಸ್ವಿಯೂ ಆಗಿತ್ತು. ಆ ನಂತರ ಅದು ಅಲ್ಲಿಗೆ ಸ್ಥಗಿತವಾಗಿತ್ತು. ಅದೇ ರೀತಿ ಮತ್ತೊಂದು ಪ್ರಯೋಗ ಮಾಡಲು ಮುಂದಾಗಿದ್ದು, ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ದ್ರಾವಣವನ್ನು ಕೊಳಚೆ ನೀರಿನಲ್ಲಿ ಹಾಕಿದಾಗ ಆಗ ಕೊಳಚೆ ನೀರಿನಲ್ಲಿರುವ ವಾಸನೆ, ಕೊಚ್ಚೆ ಎಲ್ಲವೂ ಸರಿಯಾಗುತ್ತದೆ. ಈ ಪ್ರಯೋಗವನ್ನು ನಗರದ ಜಾಜಮ್ಮನ ಕಟ್ಟೆಯ ನೀರಿನಲ್ಲಿ ಇಂದು ಪ್ರಯೋಗ ಮಾಡಿದ್ದು, ಇದು ಹದಿನೈದು ದಿನಗಳೊಳಗೆ ನೀರು ಸ್ವಚ್ಛವಾಗಿ ಸೊಳ್ಳೆಗಳು ಸಾಯುತ್ತವೆ. ಇದರಿಂದ ಜನರಿಗೆ ಸೊಳ್ಳೆಗಳ ಕಾಟ ತಪ್ಪುತ್ತದೆ ಎಂದರು. ಮಿರಾಕಲ್ ಇನ್ ವಾಟರ್ ಸಲ್ಯೂಷನ್ ಕಂಪನಿಯ ಮ್ಯಾನೆಜಿಂಗ್ ಡೈರೆಕ್ಟರ್ ಸ್ಟಿಫನ್ ಕೆ ರಾಜ್ ಮಾತನಾಡಿ ಪ್ರಸ್ತುತ ಎಲ್ಲಾ ರೀತಿಯ ಜೀವಗಳಿಗೆ ಅಮೂಲ್ಯವಾದ ಸಂಪನ್ಮೂಲ ನೀರು. 

ಇಂತಹ ನೀರು ಅಭಿವೃದ್ಧಿಯ ಹೆಸರಿನಲ್ಲಿ ಮಲೀನವಾಗುತ್ತಿದೆ. ಕೈಗಾರಿಕೆಗಳಿಂದ, ಮನೆಗಳಿಂದ ಬರುವ ತ್ಯಾಜ್ಯನೀರಿನ ಹರಿವಿನಿಂದ ಪರಿಸರವನ್ನು ಕಲುಷಿತಗೊಳುತ್ತಿದೆ. ಇದು ಮನುಷ್ಯನ ಆರೋಗ್ಯ ಮತ್ತು ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದೆ. ಆದ್ದರಿಂದ ನೀರನ್ನು ಸಂಸ್ಕರಿಸುವ ಉದ್ದೇಶದಿಂದ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಎಂಬ ದ್ರಾವಣವನ್ನು ಸಂಶೋಧಿಸಲಾಗಿದ್ದು, ಇದು ನೀರನ್ನು ಸಂಸ್ಕರಿಸುತ್ತದೆ. ಸೊಳ್ಳೆಗಳು ನಾಶವಾಗುತ್ತದೆ. ಇದು ಪರಿಸರ ಸ್ನೇಹಿಯಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. 

ಮೈಕ್ರೋಫೈನಾನ್ಸ್‌ ಸುಗ್ರೀವಾಜ್ಞೆ ವಾಪಸ್‌ ಕಳುಹಿಸಿದ ರಾಜ್ಯಪಾಲ ಗೆಹಲೋತ್‌

ಇದನ್ನು ಮೊದಲ ಬಾರಿಗೆ ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಪರೀಕ್ಷೆ ಮಾಡಿದ್ದು, ಇದರ ಫಲಿತಾಂಶ ನೋಡಿ ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗಳನ್ನು ಪ್ರಯೋಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್.ಕೆ, ನಗರಸಭೆ ಸದಸ್ಯರಾದ ಆರ್.ರಾಮು, ಬಿ.ಎಂ.ರಾಧಾಕೃಷ್ಣ, ಎಸ್.ಎನ್.ಮಹೇಶ್, ಸ್ವಾತಿ ಮಂಜೇಶ್, ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌