ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ

By Web DeskFirst Published 18, Jan 2019, 8:39 AM IST
Highlights

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಗಣನೀಯ  ಚೇತರಿಕೆ ಕಂಡು ಬಂದಿದೆ. ಐಸಿಯುನಲ್ಲಿಯೇ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. 

ತುಮಕೂರು : ‘ನಡೆದಾಡುವ ದೇವರು’ ಸಿದ್ಧಗಂಗೆಯ ಡಾ. ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಗುರುವಾರ ರಾತ್ರಿ ದಿಢೀರ್ ಚೇತರಿಕೆ ಕಂಡು ಬಂದಿದ್ದು, ಭಕ್ತರು ಹಾಗೂ ವೈದ್ಯರಲ್ಲಿ ಹೊಸ ಭರವಸೆ ಮೂಡಿಸಿದೆ. 

 ಪೂಜೆ ಮುಗಿಸಿ ಹಳೇ ಮಠದಿಂದ ಕಿರಿಯ ಶ್ರೀಗಳು ಹೊರಬರುವಾಗ ಲವಲವಿಕೆ ಕಂಡು ಬಂದಿದೆ.  ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಾಣಿಸಿದೆ. ಕಿರಿಯ ಶ್ರೀಗಳ ಸಹಾಯದಿಂದ ಸ್ವಾಮೀಜಿ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. 

ಐಸಿಯು ಕೊಠಡಿಯಲ್ಲಿಯೇ  ಶಿವಕುಮಾರ ಸ್ವಾಮೀಜಿ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. 

ಶ್ರೀಗಳ ದೇಹದಲ್ಲಿ ಪ್ರೋಟಿನ್  ಅಂಶದಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲದೇ ಶುಕ್ರವಾರ ಮುಂಜಾನೆ ದ್ರವರೂಪದಲ್ಲಿ ಇಡ್ಲಿ ಸೇವನೆ ಮಾಡಿದ್ದಾರೆ.

Last Updated 18, Jan 2019, 8:45 AM IST