Covid Crisis: ರಾಜ್ಯದಲ್ಲಿ ಕೋವಿಡ್‌ ಭಾರಿ ಇಳಿಕೆ: ಕೇವಲ 588 ಕೇಸ್‌!

By Kannadaprabha News  |  First Published Feb 25, 2022, 1:08 AM IST

ರಾಜ್ಯದಲ್ಲಿ ಗುರುವಾರ 588 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 19 ಮಂದಿ ಮೃತರಾಗಿದ್ದಾರೆ. 2022ರ ಸಾಲಿನ ಕನಿಷ್ಠ ಪ್ರಕರಣ ಮತ್ತು ಅತ್ಯಂತ ಕಡಿಮೆ ಪಾಸಿಟಿವಿಟಿ ದರ (ಶೇ.0.84) ಗುರುವಾರ ದಾಖಲಾಗಿದೆ.


ಬೆಂಗಳೂರು (ಫೆ.25): ರಾಜ್ಯದಲ್ಲಿ (Karnataka) ಗುರುವಾರ 588 ಮಂದಿಯಲ್ಲಿ ಕೊರೋನಾ ಸೋಂಕು (Coronavirus) ಪತ್ತೆಯಾಗಿದೆ. 19 ಮಂದಿ ಮೃತರಾಗಿದ್ದಾರೆ. 2022ರ ಸಾಲಿನ ಕನಿಷ್ಠ ಪ್ರಕರಣ ಮತ್ತು ಅತ್ಯಂತ ಕಡಿಮೆ ಪಾಸಿಟಿವಿಟಿ ದರ (ಶೇ.0.84) ಗುರುವಾರ ದಾಖಲಾಗಿದೆ. ಕಳೆದ ಡಿಸೆಂಬರ್‌ 29ಕ್ಕೆ 566 ಪ್ರಕರಣ ದಾಖಲಾದ ಬಳಿಕದ ಕನಿಷ್ಠ ಪ್ರಕರಣ ಇದಾಗಿದೆ. 1692 ಮಂದಿ ಕೋವಿಡ್‌ನಿಂದ (Covid19) ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 8,255ಕ್ಕೆ ಇಳಿದಿದೆ. 69,388 ಕೋವಿಡ್‌ ಪರೀಕ್ಷೆ ನಡಿದಿದೆ.

ಬೆಂಗಳೂರು ನಗರದಲ್ಲಿ 353, ಮೈಸೂರು 28, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 23, ಬೆಳಗಾವಿ 18, ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ 15, ಬಳ್ಳಾರಿ 14, ಕಲಬುರಗಿ 11 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೊಪ್ಪಳದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

undefined

ಬೆಂಗಳೂರು ನಗರದಲ್ಲಿ 14 ಮಂದಿ ಮೃತರಾಗಿದ್ದು, ಕಲಬುರಗಿ, ಕೊಡಗು, ಧಾರವಾಡ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.39 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು 38.91 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,885 ಮಂದಿ ಮರಣವನ್ನಪ್ಪಿದ್ದಾರೆ. 37 ಸೋಂಕಿತರು ಅನ್ಯ ಕಾರಣದಿಂದ ಅಸುನೀಗಿದ್ದಾರೆ.

Covid Crisis: ಬೆಂಗ್ಳೂರಲ್ಲಿ ಕೋವಿಡ್‌ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು

1.05 ಲಕ್ಷ ಜನರಿಗೆ ಲಸಿಕೆ: ಗುರುವಾರ 1.05 ಲಕ್ಷ ಮಂದಿ ಕೋವಿಡ್‌ ಲಸಿಕೆ (Covid Vaccine) ಪಡೆದಿದ್ದಾರೆ. 6,298 ಮಂದಿ ಮೊದಲ ಡೋಸ್‌, 93,225 ಮಂದಿ ಎರಡನೇ ಡೋಸ್‌ ಮತ್ತು 6,372 ಮಂದಿ ಮುನ್ನೆಚ್ಚರಿಕಾ ಡೋಸ್‌ (Booster Dose) ಪಡೆದಿದ್ದಾರೆ. ಈವರೆಗೆ ಒಟ್ಟು 5.21 ಕೋಟಿ ಮೊದಲ ಡೋಸ್‌, 4.70 ಕೋಟಿ ಎರಡನೇ ಮತ್ತು 11.71 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 10.03 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆಯಿಂದ ವಿನಾಯಿತಿ: ರಾಜ್ಯದಲ್ಲಿ (Karnataka) ಕೋವಿಡ್‌-19 ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಕೇರಳ(Kerala) ಮತ್ತು ಗೋವಾ(Goa) ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್‌ ಪರೀಕ್ಷೆಯಿಂದ (Covid Test) ವಿನಾಯಿತಿ ನೀಡಲಾಗಿದೆ. ಆದರೆ ಕೋವಿಡ್‌ನ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ಕಡ್ಡಾಯ ಮಾಡಲಾಗಿದೆ. 

ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಕೇರಳ, ಗೋವಾ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ವ್ಯಕ್ತಿಗಳು 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿಯನ್ನು ಹೊಂದಿರುವುದನ್ನು ಸರ್ಕಾರ ಈ ಹಿಂದೆ ಕಡ್ಡಾಯ ಮಾಡಿತ್ತು. ಆದರೆ ಸದ್ಯ ನೆರೆಯ ರಾಜ್ಯಗಳಲ್ಲೂ ಕೋವಿಡ್‌ ಸಂಖ್ಯೆ ಕಡಿಮೆ ಇರುವುದರಿಂದ ಕೋವಿಡ್‌ ಪರೀಕ್ಷಾ ವರದಿಯಿಂದ ವಿನಾಯಿತಿ ನೀಡಲಾಗಿದೆ. ಕೇರಳ, ಗೋವಾದಿಂದ ವಿಮಾನ, ರೈಲು, ರಸ್ತೆ ಮಾರ್ಗಗಳ ಮೂಲಕ ರಾಜ್ಯ ಪ್ರವೇಶಿಸುವರ ಕೋವಿಡ್‌ ವರದಿ ಪರಿಶೀಲಿಸುವ ಕ್ರಮವನ್ನು ಕೈ ಬಿಡಲಾಗಿದೆ. 

Covid Crisis: ಕೋವಿಡ್‌ ಮತ್ತಷ್ಟು ಇಳಿಕೆ: 34113 ಹೊಸ ಕೇಸ್‌!

ಆದರೆ ಎರಡು ಡೋಸ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ. ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಕಳೆದ ವಾರದಿಂದಲೇ ಕಡ್ಡಾಯ ಪರೀಕ್ಷಾ ವರದಿಯಿಂದ ವಿನಾಯಿತಿ ನೀಡಲಾಗಿತ್ತು. ಅಂತರ್‌ ರಾಜ್ಯಗಳಿಂದ ಆಗಮಿಸುವವರ ಕೋವಿಡ್‌ ಪರೀಕ್ಷೆಯನ್ನು ರದ್ದು ಪಡಿಸಬಹುದು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

click me!