
ಬೆಂಗಳೂರು(ಜೂ.27): ಸದ್ಯ ಎಲ್ಲೆಡೆ ಕೊರೋನಾ ವೈರಸ್‌ನದ್ದೇ ಸುದ್ದಿ, ಇದರಿಂದ ಸದ್ಯ ಎಲ್ಲರ ಜೀವನ ಶೈಲಿಯೂ ಬದಲಾಗಿದೆ. ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಈ ನಡುವೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ 47ನೇ ವರ್ಷದ ಜನ್ಮದಿನವಾಗಿದೆ. ಆದರೆ ಸಚಿವ ಸುಧಾಕರ್ ಪತ್ನಿ ಹಾಗೂ ಮಗಳೂ ಕೊರೋನಾದಿಂದಾಗಿ ಆಸ್ಪತ್ರೆಯಲ್ಲಿದ್ದರೆ, ಖುದ್ದು ಸಚಿವರು ಐಸೋಲೇಷನ್‌ನಲ್ಲಿದ್ದಾರೆ. ಆದರೀಗ ಆಸ್ಪತ್ರೆಯಲ್ಲಿರುವ ಪತ್ನಿ ಹಾಗೂ ಮಗಳು ವಿಭಿನ್ನವಾಗಿ ಸಚಿವರಿಗೆ ವಿಶ್ ಮಾಡಿದ್ದಾರೆ.
"
ಕೊರೋನಾ ಸಾವು ಹೆಚ್ಚಳ: ಬದ್ಧತೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸುಧಾಕರ್ ತಾಕೀತು!
ಹೌದು ಕೊರೋನಾ ಆತಂಕದ ನಡುವೆ ಹುಟ್ಟುಹಬ್ಬ ಆಚರಣೆಗೆ ಸಚಿವ ಸುಧಾಕರ್ ಬ್ರೇಕ್ ನೀಡಿದ್ದಾರೆ. ಇದೇ ಕಾರಣದಿಂದ ಅವರು ಹೀಗಿರುವಾಗ ಬೆಂಬಲಿಗರು ಹಾಗೂ ಅಭಿಮಾಗಳಿಗೆ ಎಲ್ಲಿದ್ದೀರೋ ಅಲ್ಲಿಂದಲೇ ವಿಶ್ ಮಾಡಿ ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಆತಂಕದಿಂದ ಅವರ ಕುಟುಂಬ ಸದಸ್ಯರೂ ಆಸ್ಪತ್ರೆಯಲ್ಲಿದ್ದಾರೆ. ಆದರೆ ಅಲ್ಲಿದ್ದುಕೊಂಡೇ ಸಚಿವರ ಮುದ್ದಿನ ಮಗಳು ಹಾಗೂ ಪತ್ನಿ ವಿಡಿಯೋ ಮೂಲಕ ಸಚಿವರಿಗೆ ವಿಶ್ ಮಾಡಿದ್ದಾರೆ. ಸಚಿವ ಸುಧಾಕರ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋ ಶೇರ್ ಮಾಡಿಕೊಂಡಿರುವ ಸಚಿವ ಸುಧಾಕರ್ ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ