
ಬೆಂಗಳೂರು (ಡಿ.25) : ಸರ್ಕಾರದ ವಿರುದ್ಧ ಶೇ.40ರಷ್ಟು ಭ್ರಷ್ಟಾಚಾರ ಆರೋಪ ಮಾಡಿ ಬಂಧನಕ್ಕೊಳಗಾಗಿದ್ದ ಗುತ್ತಿದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿದಂತೆ ಐವರಿಗೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ.
ಸಚಿವ ಮುನಿರತ್ನ(Minister Muniratna) ಹೂಡಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣ(Defamation case) ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಕೆಂಪಣ್ಣ(Kempanna) ವಿರುದ್ಧ ನಾನ್‌ಬೇಲೆಬಲ್ ವಾರಂಟ್ ಹೊರಡಿಸಿತ್ತು. ಡಿ.19 ರಂದು ನಾನ್‌ಬೇಲೆಬಲ್ ವಾರಂಟ್ ಹೊರಡಿಸಿದ್ದ 8 ನೇ ಎಸಿಎಂಎಂ ಕೋರ್ಟ್. ಆದ್ದರಿಂದ ವೈಯಾಲಿಕಾವಲ್ ಪೊಲೀಸರು ಕೆಂಪಣ್ಣ ಅವರನ್ನು ಬಂಧಿಸಿದ್ದರು. ಇವರೊಂದಿಗೆ ನಾಲ್ವರು ಪದಾಧಿಕಾರಿಗಳು ಸೇರಿ ಒಟ್ಟು ಐವರು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಬಂಧಿಸಲಾಗಿತ್ತು.
ಕೋರ್ಟ್ ಸಮನ್ಸ್ ನೀಡಿದಾಗ ಹಾಜರಾಗಬೇಕು:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬರೆಡ್ಡಿ ಪ್ರತಿಕ್ರಿಯಿಸಿದ್ದು, ಕೋರ್ಟ್ ಸಮನ್ಸ್ ನೀಡಿದಾಗ ಹಾಜರಾಗಬೇಕು ಎಂದು ತಿಳಿಸಿದ್ದಾರೆ. ಮಾನನಷ್ಟ ಮೊಕದ್ದಮೆ ಆದ್ದರಿಂದ ಸಮನ್ಸ್ ಇಶ್ಯೂ ಆಗಿದೆ. ಆದರೆ ಸಮನ್ಸ್ ತಗೊಂಡು ಕೋರ್ಟ್ ಗೆ ಹಾಜರಾಗಿಲ್ಲ. ಕೋರ್ಟ್ ಸಮನ್ಸ್ ನೀಡಿದಾಗ ಹಾಜರಾಗಬೇಕು. ಹೀಗಾಗಿ ಬಂಧನವಾಗಿದೆ. ಬೇಲಬಲ್ ಕೇಸ್ ಆಗಿದ್ರೂ ಎನ್‌ಬಿಡಬ್ಲ್ಯೂ 19 ಜನರ ವಿರುದ್ಧ ಇಶ್ಯು ಆಗಿದೆ. ಬೇಲಬಲ್ ಅಫೆನ್ಸ್ ಆಗಿದ್ರಿಂದ ಕೋರ್ಟ್ ಜಾಮೀನು ನೀಡಿದೆ. NBW ಜಾರಿಯಾಗಿದೆ ಹೀಗಾಗಿ ಪೊಲೀಸರು ಬಂಧನ ಮಾಡಿ ಹಾಜರು ಪಡಿಸಿದ್ದಾರೆ. ಸದ್ಯ ಷರತ್ತು ಬದ್ದ ಜಾಮೀನು(Grant of bail) ನೀಡಿ ಆದೇಶಿಸಿದೆ.
Bengaluru: ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ