ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ನಾಲ್ವರು ಸಾವು

By Kannadaprabha NewsFirst Published Oct 30, 2019, 9:48 AM IST
Highlights

ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ನಾಗೋರ್‌ನ ಪ್ರಸಿದ್ಧ ಮುಸ್ಲಿಂ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. 

ನಾಗಪಟ್ಟಿನಂ(ಅ.30): ಪ್ರತ್ಯೇಕ ಘಟನೆಯಲ್ಲಿ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ನಾಗೋರ್‌ನ ಪ್ರಸಿದ್ಧ ಮುಸ್ಲಿಂ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ.

ರಿಹಾನ್‌ (12) ನಾಗೋರ್‌ ಸಮುದ್ರ ತೀರದಲ್ಲಿ ಸೋಮವಾರ ರಾತ್ರಿ ಈಜುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾನೆ. ಬಳಿಕ ಸಮುದ್ರ ಕಿನಾರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'

ಇಮ್ತಿಯಾಜ್‌ ಬಾಷಾ (50), ಅವರ ಪತ್ನಿ ರಿಯಾನ್‌ (40), ಮಗ ಅಫ್ರಾಜ್‌ (18), ಮಗಳು ಸೈನಾ (16) ಹಾಗೂ ಸಂಬಂಧಿ ನಿಜಾಮ್‌(20) ಸ್ನಾನ ಮಾಡಲೆಂದು ಸಮುದ್ರಕ್ಕೆ ಇಳಿದಿದ್ದು, ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾರೆ. ತಕ್ಷಣ ಸ್ಥಳೀಯರು ಸೈನಾ ಹಾಗೂ ರಿಯಾನ್‌ರನ್ನು ರಕ್ಷಿಸಿದ್ದಾರೆ. ಆದರೆ, ಇಮ್ತಿಯಾಜ್‌, ಅಫ್ರಾಜ್‌, ನಿಜಾಮ್‌ ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

click me!