Covid vaccination ರಾಜ್ಯದಲ್ಲಿ ಲಸಿಕೆ ಪಡೆದವರೀಗ 4 ಕೋಟಿ

By Kannadaprabha News  |  First Published Oct 9, 2021, 9:13 AM IST
  •  ರಾಜ್ಯಾದ್ಯಂತ ಶುಕ್ರವಾರ ಹಮ್ಮಿಕೊಂಡಿದ್ದ ಲಸಿಕಾ ಮೇಳದಲ್ಲಿ ಬರೋಬ್ಬರಿ 9 ಲಕ್ಷ ಡೋಸ್‌ ಕೊರೋನಾ ಲಸಿಕೆ 
  • ಮೊದಲ ಡೋಸ್‌ ಲಸಿಕೆ ಪಡೆದವರ ಸಂಖ್ಯೆ 4 ಕೋಟಿ ಗಡಿ ದಾಟಿದೆ

 ಬೆಂಗಳೂರು (ಅ.09):  ರಾಜ್ಯಾದ್ಯಂತ ಶುಕ್ರವಾರ ಹಮ್ಮಿಕೊಂಡಿದ್ದ ಲಸಿಕಾ ಮೇಳದಲ್ಲಿ (vaccination camp) ಬರೋಬ್ಬರಿ 9 ಲಕ್ಷ ಡೋಸ್‌ ಕೊರೋನಾ ಲಸಿಕೆ (Covid vaccine) ನೀಡಿದ್ದು, ಮೊದಲ ಡೋಸ್‌ ಲಸಿಕೆ ಪಡೆದವರ ಸಂಖ್ಯೆ 4 ಕೋಟಿ ಗಡಿ ದಾಟಿದೆ. ಅಲ್ಲದೆ, ರಾತ್ರಿ 8.25 ಗಂಟೆ ವೇಳೆಗೆ 9 ಲಕ್ಷ ಡೋಸ್‌ ಲಸಿಕೆ ವಿತರಿಸಿದ್ದು, ಉತ್ತರ ಪ್ರದೇಶ (16.40 ಲಕ್ಷ) ಬಳಿಕ ದೇಶದಲ್ಲೇ ಎರಡನೇ ಅತಿ ಹೆಚ್ಚು ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ತನ್ಮೂಲಕ ಈವರೆಗೆ 5.85 ಕೋಟಿ ಡೋಸ್‌ ಲಸಿಕೆ ನೀಡಿದಂತಾಗಿದ್ದು, 4.01 ಕೋಟಿ ಮಂದಿಗೆ ಮೊದಲ ಡೋಸ್‌ ಹಾಗೂ 1.85 ಕೋಟಿ ಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ಒಟ್ಟಾರೆ (ಯಾವುದಾದರೂ ಒಂದು ಡೋಸ್‌) ಲಸಿಕೆ ಪಡೆದವರ ಸಂಖ್ಯೆ 4 ಕೋಟಿ ಗಡಿ ದಾಟಿದೆ. 

Tap to resize

Latest Videos

ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ದಿನಾಂಕ ವಿಸ್ತರಣೆ

ಕರ್ನಾಟಕ ರಾಜ್ಯದಲ್ಲಿ (Karnataka) ಲಸಿಕೆಗೆ 4.9 ಕೋಟಿ ಮಂದಿ ಅರ್ಹರು ಎಂಬುದಾಗಿ ಅಂದಾಜಿಸಿದ್ದು, ಈಗಾಗಲೇ 4.01 ಕೋಟಿ ಮಂದಿ (ಶೇ.82) ಮೊದಲ ಡೋಸ್‌ ಲಸಿಕೆ ಪಡೆದಂತಾಗಿದೆ. ಉಳಿದಂತೆ 1.9 (ಶೇ.39) ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ (Health Department) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಲಸಿಕಾ ಮೇಳ:  ಲಸಿಕೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿ ಬುಧವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿತ್ತು. ಕಳೆದ ಬುಧವಾರ ರಜೆ ಮತ್ತು ಮಹಾಲಯ ಅಮಾವಾಸ್ಯೆ ಹಿನ್ನೆಲೆ ಹೆಚ್ಚಿನ ಮಂದಿ ಲಸಿಕೆಗೆ ಆಗಮಿಸುವುದಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಮೇಳವನ್ನು ಆಯೋಜಿಸಲಾಗಿತ್ತು. ರಾಜ್ಯದಲ್ಲಿ ಈವರೆಗೂ ನಡೆಯುತ್ತಿರುವ ಆರನೇ ಮೇಳ ಇದಾಗಿದ್ದು, 3.5 ಲಕ್ಷ ಮಂದಿ ಮೊದಲ ಡೋಸ್‌ ಸೇರಿದಂತೆ ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ.

ಕೋವಿಡ್‌ ಬಗ್ಗೆ ಇನ್ನೂ 3 ತಿಂಗಳು ಎಚ್ಚರ

9008 ಕೇಂದ್ರಗಳಲ್ಲಿ ಲಸಿಕೆ:  ಮೇಳದಲ್ಲಿ ರಾಜ್ಯಾದ್ಯಂತ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ (Health Centres), ತಾಲೂಕು, ಜಿಲ್ಲಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ವಲಯದ 8708, ಖಾಸಗಿ ವಲಯ 334 ಲಸಿಕಾ ಕೇಂದ್ರಗಳು ಸೇರಿ ಒಟ್ಟು 9,008 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಪೈಕಿ ಈ ಬಾರಿಯೂ ಬೆಂಗಳೂರು ನಗರ (Bengaluru ) ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಶುಕ್ರವಾರ ರಾತ್ರಿ 8.25ರ ವೇಳೆಗೆ ಬೆಂಗಳೂರು ನಗರದಲ್ಲಿ 85,691 (BBMPಸೇರಿ ನಗರ ಜಿಲ್ಲೆ) ಡೋಸ್‌, ಬೆಳಗಾವಿಯಲ್ಲಿ (Belagavi) 73,703 ಡೋಸ್‌, ಬಾಗಲಕೋಟೆ 56,434 ಡೋಸ್‌ ವಿತರಣೆಯಾಗಿದ್ದು, ಈ ಮೂಲಕ ಮೂರು ಜಿಲ್ಲೆಗಳು ಮೊದಲ ಮೂರು ಸ್ಥಾನ ಪಡೆದಿವೆ.

click me!