* ಶಿವಮೊಗ್ಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಪ್ರದಾನ
* ರವಿ ಹೆಗಡೆ ಅವರಿಗೆ ಡಿವಿಜಿ ಪ್ರಶಸ್ತಿ
* 2019ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ
ಶಿವಮೊಗ್ಗ(ಅ.09): ತೊಂಬತ್ತು ವರ್ಷ ಇತಿಹಾಸವಿರುವ ಕರ್ನಾಟಕ(Karnataka) ಕಾರ್ಯನಿರತ ಪತ್ರಕರ್ತರ(Journalists) ಸಂಘದ 2019ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಪ್ರಭ(Kannada Prabha) ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್(Asianet Suvarna News) ಪ್ರಧಾನ ಸಂಪಾದಕರಾದ ರವಿಹೆಗಡೆ(Ravi Hegde) ಅವರಿಗೆ ಡಿವಿಜಿ ಪ್ರಶಸ್ತಿ(DVG Award) ಸೇರಿ 18 ಪತ್ರಕರ್ತರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಶಿವಮೊಗ್ಗ(Shivamogga) ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಗರದ ಕುವೆಂಪು(Kuvempu) ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಪ್ರಭ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆಗೆ ಡಿವಿಜಿ ಪ್ರಶಸ್ತಿ
ಪ್ರಶಸ್ತಿ ಪುರಸ್ಕೃತರ ವಿವರ- ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ:
ಬಿ.ಎಂ ಹನೀಫ್(ಪ್ರಜಾವಾಣಿ), ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್.ಎನ್.ಅಶೋಕಕುಮಾರ್, ಸಂಪಾದಕರು(ಗೊಮ್ಮಟವಾಣಿ), ಪಾಟೀಲ್ ಪುಟ್ಟಪ್ಪ ಪ್ರಶಸ್ತಿ(Patil Puttappa Award) : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು, ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು, ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್.ಶೆಣೈ, ಸಂಪಾದಕರು(ಕುಂದಪ್ರಭ), ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು(ಮಲೆನಾಡ ಮಂದಾರ), ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ :ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು, ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ.ರೇಖಾ, ಸಂಪಾದಕರು(ಹೊಸಪೇಟೆ ಟೈಮ್ಸ್), ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು(ಶಿಡ್ಲು ಪತ್ರಿಕೆ), ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ(ಪ್ರಜಾವಾಣಿ), ಎಂ.ನಾಗೇಂದ್ರರಾವ್ ಪ್ರಶಸ್ತಿ : ಪಿ.ಸುನಿಲ್ ಕುಮಾರ್ ಸಂಪಾದಕರು (ಸಿಟಿ ಹೈಲೈಟ್ಸ್), ಎಂ. ನಾಗೇಂದ್ರರಾವ್ ಪ್ರಶಸ್ತಿ : ಎನ್.ಡಿ.ಶಾಂತಕುಮಾರ್, ವಿಜಯವಾಣಿ(ಶಿವಮೊಗ್ಗ), ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು(ವಿಜಯಕರ್ನಾಟಕ), ಎಸ್.ಎಚ್.ರಂಗಸ್ವಾಮಿ ಪ್ರಶಸ್ತಿ: ಪಿ.ಸುನೀಲ್‌ಕುಮಾರ್ ಸಂಪಾದಕರು(ಸಿಟಿ ಹೈಲೈಟ್ಸ್…),
ಸಂಘದ ವಿಶೇಷ ಪ್ರಶಸ್ತಿಗಳು: ಪ್ರಹ್ಲಾದಗುಡಿ, ವರದಿಗಾರರು(ಕನ್ನಡ ಪ್ರಭ), ಮುನಿವೆಂಕಟೇಗೌಡ, ಹಿರಿಯ ಪತ್ರಕರ್ತರು ಕೋಲಾರ, ಪ್ರಕಾಶ್ ರಾಮಜೋಗಿಹಳ್ಳಿ (ವಾರ್ತಾಭಾರತಿ), ಬೆಂಗಳೂರು(Bengaluru), ಎಂ.ಕೆ. ರಾಘವೇಂದ್ರ ಮೇಗರವಳ್ಳಿ (ವಿಜಯ ಕರ್ನಾಟಕ) ತೀರ್ಥಹಳ್ಳಿ.