* ಧರ್ಮದ ಬಗ್ಗೆ ಗೌರವವಿರಲಿ ಆದರೆ ಶಾಲಾ-ಕಾಲೇಜುಗಳಲ್ಲಿ ವಿವಾದ ಬೇಡ
* ಶಾಲೆಗಳು ಮಾಡಿರುವ ಕ್ರಮಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು
* ನಾವು ಮೊದಲು ಭಾರತೀಯರು ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ
ಬೆಂಗಳೂರು(ಫೆ.27): ಕರ್ನಾಟಕದಲ್ಲಿ(Karnataka) ನಡೆಯುತ್ತಿರುವ ವಿದ್ಯಮಾನಗಳು ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರು ವಿಷಾದವನ್ನು ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರು(Bengaluru) ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ಬಳಿ ಇರುವ ಗ್ರೀನ್ ವುಡ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಧರ್ಮದ(Religion) ಬಗ್ಗೆ ಗೌರವವಿರಲಿ ಆದರೆ ಶಾಲಾ-ಕಾಲೇಜುಗಳಲ್ಲಿ ವಿವಾದ ಬೇಡ ಶಾಲೆಗಳು ಮಾಡಿರುವ ಕ್ರಮಗಳನ್ನು ವಿದ್ಯಾರ್ಥಿಗಳು(Students) ಅಳವಡಿಸಿಕೊಳ್ಳಬೇಕು ಅಂತ ಕರೆ ನೀಡಿದ್ದಾರೆ.
ವಚನಾನಂದ ಶ್ರೀಗೆ ಕರೆ ಮಾಡಿದ ಉಪ ರಾಷ್ಟ್ರಪತಿ Venkaiah Naidu
ಪ್ರತಿಯೊಂದು ಶಾಲಾ-ಕಾಲೇಜುಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆ ಹೊಂದಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಪರಿಸರ ಕಾಳಜಿ ರೇಡಿಯೋ ಹವಾಮಾನ ಸೇರಿದಂತೆ ಹಲವು ವಿಚಾರಗಳಿಗೆ ಒಳಪಡಿಸಬೇಕು. ನಾವು ಮೊದಲು ಭಾರತೀಯರು ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ, ಭಾರತೀಯತೆ ನಮ್ಮದಾಗಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೊತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಸಚಿವ ಮುನಿರತ್ನ ನಾಯ್ಡು ಅವರು ಸಾಥ್ ನೀಡಿದರು.
ನಿಮ್ಮ ಧರ್ಮವನ್ನ ಪಾಲಿಸಿ ಆದರೆ, ದ್ವೇಷ ಭಾಷಣ ಬೇಡ!
ಕೊಟ್ಟಾಯಂ: ದೇಶದಲ್ಲಿರುವ ಪ್ರತಿ ವ್ಯಕ್ತಿಗೂ ತನ್ನ ಧರ್ಮವನ್ನು ಆಚರಿಸುವ ಹಾಗೂ ಅದನ್ನು ಭೋಧನೆ ಮಾಡುವ ಹಕ್ಕಿದೆ. ಆದರೆ, ಇತರ ಧರ್ಮಗಳನ್ನು ಅಪಹಾಸ್ಯ ಮಾಡುವ, ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಪ್ರಯತ್ನಗಳಿಂದ ದೂರವಿರಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದರು.
ಜ.4 ರಂದು ಕೇರಳದ ಕೊಟ್ಟಾಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣವು ದೇಶದ ಸಂಸ್ಕೃತಿ, ಸಂವಿಧಾನ ಹಾಗೂ ನಮ್ಮ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಜಾತ್ಯಾತೀತತೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಕಾರಣದಿಂದಾಗಿ ಇಂದು ಪ್ರಪಂಚದಾದ್ಯಂತ ಗೌರವವನ್ನು ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದ್ದರು.
Venkaiah Naidu: ವಿಶ್ವದಲ್ಲೇ ಹೆಚ್ಚು ಜಾತ್ಯಾತೀಯ ದೇಶ ಭಾರತ ಎಂದ ಉಪರಾಷ್ಟ್ರಪತಿ
ಕೇರಳ ಕ್ಯಾಥೋಲಿಕ್ ಸಮುದಾಯದ ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವರ 150ನೇ ಪುಣ್ಯತಿಥಿಯ (150th death anniversary of Saint Kuriakose Elias Chavara)ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಿಮ್ಮ ಧರ್ಮವನ್ನು ನೀವು ಅಭ್ಯಾಸ ಮಾಡಿ, ಆದರೆ ದ್ವೇಷ ಭಾಷಣ (hate speech) ಹಾಗೂ ಬರಹಗಳನ್ನು ಬರೆಯುವ ಮೂಲಕ ಬೇರೆ ಧರ್ಮವನ್ನು ಟೀಕಿಸುವ ಕೆಲಸ ಮಾಡಬೇಡಿ' ಎಂದರು. ದ್ವೇಷ ಭಾಷಣಗಳು ಮತ್ತು ಬರಹಗಳು ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳು, ಸಾಂವಿಧಾನಿಕ ಹಕ್ಕುಗಳು ಮತ್ತು ನೈತಿಕತೆಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದರು.
ಇದೇ ವೇಳೆ, ಭಾರತೀಯ ಮೌಲ್ಯವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳು ಜಾರಿಯಾಗಬೇಕು ಎಂದು ಹೇಳಿದ ಅವರು, "ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮುದಾಯ ಸೇವೆಯನ್ನು (community service) ಕಡ್ಡಾಯಗೊಳಿಸಬೇಕು. ಇದರ ಇತರ ವ್ಯಕ್ತಿಗಳೊಂದಿಗೆ ಪರಸ್ಪರ ಹಂಚಿಕೊಳ್ಳುವ ಹಾಗೂ ಕಾಳಜಿಯ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ' ಎಂದರು. “ಇಂದು, ಈ ದೇಶದ ಯುವಜನರಲ್ಲಿ ಚಿಕ್ಕ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸುವ ಅವಶ್ಯಕತೆಯಿದೆ. ಒಮ್ಮೆ ಈ ಸಾಂಕ್ರಾಮಿಕ ವೈರಸ್ ನಮ್ಮ ನಡುವೆ ಮರೆಯಾಗಿ ಪರಿಸ್ಥಿತಿಗಳೆಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಸಮುದಾಯ ಸೇವೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ. ವಿದ್ಯಾರ್ಥಿಗಳಿಗೆ ಕನಿಷ್ಠ ಎರಡರಿಂದ ಮೂರು ವಾರಗಳ ಕಾಲ ಸಮುದಾಯ ಸೇವೆಯನ್ನು ಕಡ್ಡಾಯಗೊಳಿಸಿ" ಎಂದು ಹೇಳಿದ್ದರು.