Namo Brigade 2.0: ನಾಳೆಯಿಂದ ಶಿವಮೊಗ್ಗದಲ್ಲಿ 3ದಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ

Published : Aug 27, 2023, 11:58 AM ISTUpdated : Aug 27, 2023, 12:02 PM IST
Namo Brigade 2.0: ನಾಳೆಯಿಂದ ಶಿವಮೊಗ್ಗದಲ್ಲಿ 3ದಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ

ಸಾರಾಂಶ

ನಮೋ ಬ್ರಿಗೇಡ್‌ 2.0, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಆ.28ರಿಂದ 30ರವರೆಗೆ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ರಾಮಾಚಾರ್‌ ಹೇಳಿದರು.

ಶಿವಮೊಗ್ಗ (ಆ.27) : ನಮೋ ಬ್ರಿಗೇಡ್‌ 2.0, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಆ.28ರಿಂದ 30ರವರೆಗೆ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ರಾಮಾಚಾರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ರಾರಾಜಿಸುತ್ತಿದ್ದು, ಸಶಕ್ತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸೆಟೆದು ನಿಂತಿದೆ. ಆದರೆ ಈ ಪ್ರಗತಿಯನ್ನುಸಹಿಸದ ಒಂದು ದೊಡ್ಡ ಬುದ್ಧಿಜೀವಿಗಳ ವರ್ಗ ಭಾರತದ ಅಖಂಡತೆಗೆ ಮಾರಕವಾಗುವ ದೇಶಭಂಜನೆಯ ಕೆಲಸಗಳಲ್ಲಿ ನಿರತವಾಗಿದ್ದು, ಜನಾಂಗೀಯ ದ್ವೇಷ ಹೆಚ್ಚಿಸುತ್ತಾ ಮತಾಂತರದ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಾ, ನೈಜ ಇತಿಹಾಸವನ್ನು ತಿರುಚುವ ಸುಳ್ಳು ವಿವಾದ ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಕೆಲಸ ಮಾಡುತ್ತಾ ಬಂದಿದೆ ಎಂದರು.

80 ಕೋಟಿ ಜನಕ್ಕೆ ಮೋದಿ 5 ಕೇಜಿ ಉಚಿತ ಅಕ್ಕಿ; ಇದು ಮೋದಿ ಗ್ಯಾರಂಟಿ!

ಯುವಾ ಬ್ರಿಗೇಡ್‌(Yuva brigade) ಪ್ರಮುಖರಾದ ವಿನಯ್‌ ಮಾತನಾಡಿ, ‘ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ’ ಎಂಬ ಶೀರ್ಷಿಕೆಯಡಿ ನಮ್ಮ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ಯುವಾ ಬ್ರಿಗೇಡ್‌ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ(Chakravarthy sulibele)ಯವರು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಭಾರತ ಭಂಜನೆಯ ಷಡ್ಯಂತ್ರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.

ಸಂಜೆ 6.30ರಿಂದ 8ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕ ರಾಜೀವ್‌ ಮಲ್ಹೋತ್ರಾ(Rajeev Malhotra)ರವರ ಪ್ರಸಿದ್ಧ ಕೃತಿಗಳಾದ ಬ್ರೇಕಿಂಗ್‌ ಇಂಡಿಯಾ(Breaking india) ಹಾಗೂ ಸ್ನೇಕ್ಸ್‌ ಇನ್‌ ದಿ ಗಂಗಾ(Snakes in the Ganga) (ಗಂಗೆಯಲ್ಲಿ ವಿಷಸರ್ಪಗಳು) ಗ್ರಂಥಗಳಲ್ಲಿ ಆಧಾರ ಸಹಿತವಾಗಿ ವಿವರಿಸಿದ್ದು, ಭಾರತದ ಅಸ್ಮಿತೆ ಪ್ರೀತಿಸುವ ಪ್ರತಿಯೊಬ್ಬರೂ ಈ ಕುರಿತು ಜಾಗೃತಿಗೊಳ್ಳಬೇಕಾದ ಅವಶ್ಯಕತೆ ಇದೆ. ಈ ಕಾರಣಕ್ಕಾಗಿ ಈ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ

ಈ ಸಂದರ್ಭದಲ್ಲಿ ಪ್ರಮುಖರಾದ ನಾಗೇಶ್‌, ಅಚ್ಯುತ್‌ರಾವ್‌, ಚೇತನ್‌, ಹರೀಶ್‌ಕಾರ್ಣಿಕ್‌, ಕುಮಾರ ಶಾಸ್ತ್ರಿ ರಾಜೇಶ್‌ ಶಾಸ್ತ್ರಿ, ಪುರೋಹಿತ್‌ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಲಾಟೆ, ದೊಂಬಿ, ಗಲಭೆ ಇಲ್ಲದೆ 518 ಆರೆಸ್ಸೆಸ್‌ ಪಥ ಸಂಚಲನ : ಸರ್ಕಾರ
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!