ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ಈ ಬಾರಿ 26 ಸಾವಿರ ರು. ಕೋಟಿ ಹಂಚಿಕೆ

By Kannadaprabha News  |  First Published Jun 12, 2021, 8:45 AM IST
  •  ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕಾಗಿ   26,005 ಕೋಟಿ ರು. ಅನುದಾನ ಹಂಚಿಕೆ
  • ಅನುಮೋದನೆಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಪರಿಷತ್‌ ಸಭೆ 
  • ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾಹಿತಿ

ಬೆಂಗಳೂರು (ಜೂ.12):   ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಪ್ರಸಕ್ತ 2021-22ನೇ ಸಾಲಿನಲ್ಲಿ ಎಸ್‌ಸಿಎಸ್‌ಟಿ  ಮತ್ತು ಟಿಎಸ್‌ಪಿ ಯೋಜನೆಯಡಿ 26,005 ಕೋಟಿ ರು. ಅನುದಾನವನ್ನು ಹಂಚಿಕೆ ಮಾಡಲಾಗಿದ್ದು, ಅನುಮೋದನೆಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಪರಿಷತ್‌ ಸಭೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಎರಡು ದಿನಗಳ ಅವಧಿ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಪರಿಷತ್‌ ಸಭೆಯಲ್ಲಿ ಮಂಡಿಸಲು ತ್ವರಿತವಾಗಿ ಕರಡು ಕ್ರಿಯಾಯೋಜನೆಯನ್ನು ತಯಾರಿಸುವಂತೆ ನೋಡಲ್‌ ಏಜೆನ್ಸಿಯಲ್ಲಿರುವ ವಿವಿಧ 35 ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ನೋಡಲ್‌ ಏಜೆನ್ಸಿಗಳ ಅಧ್ಯಕ್ಷರೂ ಆಗಿರುವ ಸಚಿವರು ಸೂಚಿಸಿದರು.

Tap to resize

Latest Videos

undefined

SC, ST ಭೂಮಿ ಯಾರು ಬೇಕಾದರೂ ಮಾರುವಂತಿಲ್ಲ: ಹೈಕೋರ್ಟ್‌

ಕಳೆದ ಸಾಲಿನ ಆರ್ಥಿಕ ಹಾಗೂ ಭೌತಿಕ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಕಳೆದ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ 25,916 ಕೋಟಿ ರು. ಅಂತಿಮವಾಗಿ ಹಂಚಿಕೆಯಾಗಿತ್ತು. ಈ ಪೈಕಿ 24,568 ಕೋಟಿ ರು.ಗಳನ್ನು (ಶೇ.95) ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಖರ್ಚು ಮಾಡಲಾಗಿದೆ. 

ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಬದ್ಧ: ಸಿಎಂ ಯಡಿಯೂರಪ್ಪ ...

ಈ 35 ಇಲಾಖೆಗಳು ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುವಂಥ ಯೋಜನೆ/ಕಾರ್ಯಕ್ರಮಗಳ ಕರಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಎಲ್ಲಾ ಇಲಾಖೆಗಳ ಕ್ರೋಢಿಕೃತ ಕರಡು ಕ್ರಿಯಾಯೋಜನೆಯನ್ನು ಶೀಘ್ರವಾಗಿ ಸಲ್ಲಿಸಬೇಕು. ಈ ಕರಡು ಕ್ರಿಯಾ ಯೋಜನೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯ ಪರಿಷತ್‌ ಸಭೆಯಲ್ಲಿ ಮಂಡಿಸಿ, ಅಂತಿಮವಾಗಿ ಅನುಮೋದನೆಯನ್ನು ನೀಡಲಾಗುವುದು ಎಂದು ಹೇಳಿದರು.

click me!