ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ತುಸು ಇಳಿಕೆ ಕಂಡಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.2ಕ್ಕೆ ಹೆಚ್ಚಳವಾಗಿದೆ. ಶುಕ್ರವಾರ 259 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 234 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.
ಬೆಂಗಳೂರು (ಜೂ.04): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ತುಸು ಇಳಿಕೆ ಕಂಡಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.2ಕ್ಕೆ ಹೆಚ್ಚಳವಾಗಿದೆ. ಶುಕ್ರವಾರ 259 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 234 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಆದರೆ ಗುಣಮುಖರ ಸಂಖ್ಯೆ ಇಳಿಕೆ ಕಾರಣ ಸಕ್ರಿಯ ಪ್ರಕರಣ 2229ಕ್ಕೆ ಏರಿದೆ. ಸೋಂಕು ಪರೀಕ್ಷೆಗಳು 12 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 2.06ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 8 ಸಾವಿರ ಕಡಿಮೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 28 ಕಡಿಮೆಯಾಗಿವೆ. ಗುರುವಾರ 297 ಪ್ರಕರಣಗಳು, ಸಾವು ಶೂನ್ಯ ವರದಿಯಾಗಿತ್ತು.
ಬೆಂಗಳೂರಲ್ಲೇ ಅಧಿಕ: ಬೆಂಗಳೂರು 243, ಬೆಳಗಾವಿ 4, ದಕ್ಷಿಣ ಕನ್ನಡ 5, ಶಿವಮೊಗ್ಗ, ಮೈಸೂರು ತಲಾ ಇಬ್ಬರು, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 22 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಮೂರು ತಿಂಗಳ ಬಳಿಕ ಗುರುವಾರ 300 ಗಡಿಗೆ ಹೆಚ್ಚಳವಾಗಿದ್ದವು. ಆದರೆ, ಸೋಂಕು ಪರೀಕ್ಷೆ ಇಳಿಕೆಯಾದ ಹಿನ್ನಲೆ ಹೊಸ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಕಳೆದ ಒಂದು ವಾರದಿಂದ ಸರಾಸರಿ 1.5 ಇದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2ಕ್ಕೆ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,065 ಮಂದಿ ಸಾವಿಗೀಡಾಗಿದ್ದಾರೆ.
undefined
Covid Crisis: ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್
ಕರ್ನಾಟಕದಲ್ಲಿ 300 ಗಡಿಗೆ ಕೊರೋನಾ ಕೇಸ್: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹೊಸ ಪ್ರಕರಣಗಳು 300 ಗಡಿಗೆ ಹೆಚ್ಚಳವಾಗಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.1.5ಕ್ಕೆ ಹೆಚ್ಚಳವಾಗಿದೆ. ಗುರುವಾರ 297 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 187 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 2,204 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 20 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 1.5ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಹೆಚ್ಚಾಗಿಲ್ಲ. ಆದರೂ, ಹೊಸ ಪ್ರಕರಣಗಳು 119 ಹೆಚ್ಚಳವಾಗಿವೆ.
Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!
ಮಾರ್ಚ್ 3ರಂದು 278 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಕಡಿಮೆಯಾಗುತ್ತಾ 50 ಆಸುಪಾಸಿಗೆ ಬಂದಿತ್ತು. ಆದರೆ, ಕಳೆದ ವಾರದಿಂದ 200 ಆಸುಪಾಸಿನಲ್ಲಿ ವರದಿಯಾಗುತ್ತಿದ್ದವು. 297 ಪ್ರಕರಣಗಳು ಪತ್ತೆಯಾಗುವ ಮೂಲಕ ಹೆಚ್ಚು ಕಡಿಮೆ ಮೂರು ತಿಂಗಳಲ್ಲಿ ಅಧಿಕ ಪ್ರಕರಣಗಳು ಪತ್ತೆಯಾದಂತಾಗಿದೆ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,065 ಮಂದಿ ಸಾವಿಗೀಡಾಗಿದ್ದಾರೆ. (ಬುಧವಾರ 178 ಪ್ರಕರಣಗಳು, ಸಾವು ಶೂನ್ಯ). ಬೆಂಗಳೂರು 276, ದಕ್ಷಿಣ ಕನ್ನಡ 8, ಬೆಂಗಳೂರು ಗ್ರಾಮಾಂತರ 3, ಮೈಸೂರು 4, ಬಳ್ಳಾರಿ 2, ಚಿತ್ರದುರ್ಗ, ಹಾಸನ, ರಾಯಚೂರು ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.