* ಕರ್ನಾಟಕದಲ್ಲಿಇಳಿಕೆ ಹಾದಿಯಲ್ಲಿ ಕೊರೋನಾ
* ಮೊದಲ ಬಾರಿಗೆ ಹೊಸ ಕೇಸ್ 3 ಸಾವಿರಕ್ಕಿಂತ ಕಡಿಮೆ
.* ಸಕ್ರಿಯ ಪ್ರಕರಣಗಳ ಸಂಖ್ಯೆ ಮೊದಲ ಸಲ 1 ಲಕ್ಷಕ್ಕಿಂತ ಕಡಿಮೆ
ಬೆಂಗಳೂರು, (ಜೂನ್.28): ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣ ಹಾಗೂ ಮರಣ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.
ಹೌದು.. ಇಂದು (ಜೂನ್.28) ರಾಜ್ಯದಲ್ಲಿ ಹೊಸದಾಗಿ 2576 ಜನರಿಗೆ ಸೋಂಕು ತಗುಲಿದ್ದು, 93 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಸಾವಿನ ಸಂಖ್ಯೆ ಎರಡಂಕಿಗೆ ಇಳಿದಿದೆ.
ಬ್ಲ್ಯಾಕ್ ಫಂಗಸ್ ಟೆಸ್ಟ್: BPL, APL ಕಾರ್ಡ್‌ದಾರರಿಗೆ ಪ್ರತ್ಯೇಕ ದರ ನಿಗದಿ
ಇನ್ನು ಕಳೆದ 24 ಗಂಟೆಗಳಲ್ಲಿ 5933 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮೊದಲ ಸಲ 1 ಲಕ್ಷಕ್ಕಿಂತ ಕಡಿಮೆಯಾಗಿದ್ದು, 97,592 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ ಎರಡಕ್ಕಿಂತ ಕಡಿಮೆ ಅಂದ್ರೆ ಶೇ.1.92ಗೆ ಇಳಿದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದಿನ 28/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/rg6a3B0wFm
pic.twitter.com/yfMcQCNAME