ಬ್ಲ್ಯಾಕ್ ಫಂಗಸ್ ಟೆಸ್ಟ್‌: BPL, APL ಕಾರ್ಡ್‌ದಾರರಿಗೆ ಪ್ರತ್ಯೇಕ ದರ ನಿಗದಿ

By Suvarna News  |  First Published Jun 28, 2021, 6:16 PM IST

* ಬ್ಲ್ಯಾಕ್ ಫಂಗಸ್ ಪತ್ತೆಗೆ ನಡೆಸುವ ಟೆಸ್ಟ್ ಗೆ ದರ ನಿಗದಿ
* ವಿವಿಧ ಟೆಸ್ಟ್ ಗಳಿಗೆ ದರ ನಿಗದಿ ಪಡಿಸಿ ಸರ್ಕಾರ ಆದೇಶ
* BPL ಹಾಗೂ APL ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ದರ ನಿಗದಿ
* ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ಗಳು ಇದೇ ದರದಲ್ಲಿ ಟೆಸ್ಟ್ ‌ಮಾಡಬೇಕು


ಬೆಂಗಳೂರು, (ಜೂನ್.28): ಬ್ಲ್ಯಾಕ್ ಫಂಗಸ್ ಟೆಸ್ಟ್‌ಗೆ ರಾಜ್ಯ ಸರ್ಕಾರ ದರ ನಿಗದಿಪಡಿಸಿದೆ. BPL ಹಾಗೂ APL  ಕಾರ್ಡುದಾರರಿಗೆ ಬೇರೆ-ಬೇರೆ ದರ ಫಿಕ್ಸ್ ಮಾಡಿ ಸರ್ಕಾರ ಇಂದು (ಸೋಮವಾರ) ಆದೇಶ ಹೊರಡಿಸಿದೆ.

ಬೆಳಗಾವಿ: 120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Tap to resize

Latest Videos

ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ.ಸ್ಕ್ಯಾನಿಂಗ್ ದರವನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್‌ಗಳು ಇದೇ ದರದಲ್ಲಿ ಟೆಸ್ಟ್ ‌ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಹಾಗಾದ್ರೆ ಬಿಪಿಎಲ್‌, ಎಪಿಎಲ್ ಕಾರ್ಡ್‌ದಾರರಿಗೆ ಯಾವ ಟೆಸ್ಟ್‌ಗೆ ಎಷ್ಟು ದರ ಎನ್ನುವುದು ಈ ಕೆಳಗಿನಂತಿದೆ.

BPL ಕಾರ್ಡ್‌ದಾರರಿಗೆ ಟೆಸ್ಟಿಂಗ್ ದರದ ವಿವರ
* ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ಗೆ 3000 ರೂ.
* ಪ್ಯಾರಾ ನೇಸಲ್ ಸೈನಸ್ ಎಂ.ಆರ್.ಐ. ಟೆಸ್ಟ್ 3000 ರೂ.
* ಕಣ್ಣಿನ ಎಂ.ಆರ್.ಐ. ಸ್ಕ್ಯಾನ್‌ಗೆ 3000 ರೂ ನಿಗದಿ
* ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 7500 ರೂ. ದರ ನಿಗದಿ ಮಾಡಲಾಗಿದೆ.

APL ಕಾರ್ಡುದಾರರಿಗೆ ಟೆಸ್ಟಿಂಗ್ ದರ ವಿವರ
* ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ಗೆ 4000 ರೂ.
* ಪ್ಯಾರಾ ನೇಸಲ್ ಸೈನಸ್ ಎಂ.ಆರ್.ಐ. ಟೆಸ್ಟ್ 4000 ರೂ.
* ಕಣ್ಣಿನ ಎಂ.ಆರ್.ಐ. ಸ್ಕ್ಯಾನ್ ಗೆ 4000 ರೂ. ನಿಗದಿ 
* ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 10,000 ರೂ. ದರ ನಿಗದಿ ಮಾಡಲಾಗಿದೆ

click me!