ದೇಶದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿರುವ ಕಾರಣ ಅದನ್ನು ಉಳಿಸಲು, ಸಮ ಸಮಾಜ ನಿರ್ಮಾಣ ಗುರಿ ತಲುಪಲು ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಮೇಲ್ವಿಚಾರಣೆಗಾಗಿ ಪ್ರತಿ 100ಮೀಟರ್‌ಗೆ ಒಬ್ಬರು ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇದೇ ವೇಳೆ 10 ಲಕ್ಷ ಸಸಿಗಳನ್ನು ನೆಡಲಾಗುತ್ತದೆ.
ಬೆಂಗಳೂರುಸೆ.15): ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ರಾಜ್ಯಾದ್ಯಂತ 25 ಲಕ್ಷ ಜನರು 2,500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಚಿವರು, ಪೌರಾಡಳಿತ ಇಲಾಖೆ, ಗ್ರಾಮೀಣಾಭಿವೃದ್ಧಿ, ಅರಣ್ಯ ಮತ್ತು ಶಿಕ್ಷಣ ಇಲಾಖೆಗಳ ಸಹಯೋಗ ದಲ್ಲಿ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ಭಾನುವಾರ ಬೆಳಗ್ಗೆ 9.50ಕ್ಕೆ ವಿಧಾನಸೌಧ ಎದುರು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಾರೆ. ಈ ವೇಳೆ ಚಾಮರಾಜನಗರದಿಂದ ಬೀದರ್‌ವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಶಾಸಕರು, ವಿದ್ಯಾ ರ್ಥಿಗಳು ಹಾಗೂ ಸಾರ್ವಜನಿಕರು ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸುತ್ತಾರೆ. ಇದೇ ವೇಳೆ ರಾಜ್ಯದ 2.3 ಕೋಟಿ ಜನರು ಸಂವಿಧಾನ ಪೀಠಿಕೆ ವಾಚಿಸುತ್ತಾರೆ ಎಂದು ತಿಳಿಸಿದರು.
undefined
ಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಸೆ.14, 15ರಂದು ಕರ್ತವ್ಯ ನಿರ್ವಹಿಸಬೇಕು: ಡಿಸಿ ದಿವ್ಯ ಪ್ರಭು
ದೇಶದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿರುವ ಕಾರಣ ಅದನ್ನು ಉಳಿಸಲು, ಸಮ ಸಮಾಜ ನಿರ್ಮಾಣ ಗುರಿ ತಲುಪಲು ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಮೇಲ್ವಿಚಾರಣೆಗಾಗಿ ಪ್ರತಿ 100ಮೀಟರ್‌ಗೆ ಒಬ್ಬರು ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇದೇ ವೇಳೆ 10 ಲಕ್ಷ ಸಸಿಗಳನ್ನು ನೆಡಲಾಗುತ್ತದೆ. ರೈತರು, ವಿದ್ಯಾರ್ಥಿ ಸಂಘಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಭಾಗವಹಿಸುತ್ತಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂ ಗಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಬೇಕು ಎಂಬ ಉದ್ದೇಶವಿದೆ. ಪಕ್ಷಾತೀತವಾಗಿ ಎಲ್ಲರೂ ಪ್ರಜಾಪ್ರಭುತ್ತ ದಿನ ಆಚರಿಸಬೇಕು. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಸಚಿವ ಮಹದೇವಪ್ಪ ಹೇಳಿದರು.
ಏಕೆ ಈ ಕಾರ್ಯಕ್ರಮ?
ಸೆ.15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು, ಸಮ ಸಮಾಜ ನಿರ್ಮಾಣ ಉದ್ದೇಶದಿಂದ ಸರಪಳಿ ನಿರ್ಮಿಸಲಾಗುತ್ತಿದೆ.
25 ಲಕ್ಷ ಜನರು: ಮಾನವ ಸರಪಳಿ ರಚನೆಯಲ್ಲಿ ಭಾಗಿ
100 ಮೀಟರ್ ಮೇಲ್ವಿಚಾರಣೆಗೆ ಪ್ರತಿ 100 ಮೀ. ಒಬ್ಬ ಅಧಿಕಾರಿ
10 ಲಕ್ಷ ಸಸಿ
ಮಾನವ ಸರಪಳಿ ವೇಳೆ ಗಿಡ ನೆಡುವ ಕಾರ್ಯಕ್ರಮ