* ಕರ್ನಾಟಕದಲ್ಲಿ ಜಾಗ ಖಾಲಿ ಮಾಡತೊಡಗಿದ ಕೊರೋನಾ
* ಸೋಂಕಿನ ಸಂಖ್ಯೆಯಲ್ಲಿ ಇಳಿಕೆ
* ಮಾಹಿತಿ ನೀಡಿದ ರಾಝ್ಯ ಆರೋಗ್ಯ ಇಲಾಖೆ ಸಚಿವ ಸುಧಾಕರ್
ಬೆಂಗಳೂರು, (ಜ.31): ಕರ್ನಾಟಕದಲ್ಲಿ (Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಕಡೆಮೆಯಾಗುವುತ್ತಿರುವುದು ಸಂತಸದ ಸಂಗತಿ. ಆದ್ರೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.
ಇಂದು(ಸೋಮವಾರ) ರಾಜ್ಯದಲ್ಲಿ 24,172 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 56 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಸಿಲಿನಾಕ್ ಸಿಟಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ10,692 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 12 ಜನರು ಬಲಿಯಾಗಿದ್ದಾರೆ.
undefined
Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC
1,41,240 ಜನರು ಇಂದು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. 30,869 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 17.11% ಇದ್ದು, ಒಟ್ಟು ರಾಜ್ಯದಲ್ಲಿ 2,44,331 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
COVID numbers in Karnataka today:
◾New cases in State: 24,172
◾New cases in B'lore: 10,692
◾Positivity rate in State: 17.11%
◾Discharges: 30,869
◾Active cases State: 2,44,331 (B'lore- 134k)
◾Deaths:56 (B'lore- 12)
◾Tests: 1,41,240
ಕರ್ನಾಟಕದಲ್ಲಿ (Karnataka) ಕೊರೋನಾ ನಿರ್ಬಂಧಗಳನ್ನು ಸೂಕ್ತ ಸಂದರ್ಭದಲ್ಲಿ ಜಾರಿಗೊಳಿಸಿ ಪರಿಣಾಮ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆಯಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಅಲ್ಲದೆ, ಈಗ ನಿರ್ಬಂಧ ಹಿಂಪಡೆದರೂ ಸಹ ಸೋಂಕು ಪ್ರಮಾಣ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ತಜ್ಞರಾದ ಅನಿರುದ್ಧ್ ಅಡಿಗ, ಶಿವ ಆತ್ರೇಯ, ರಾಜೇಶ್ ಸುಂದರೇಶನ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ(Bengaluru) ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ(Weekend and Night Curfew) ಸೇರಿದಂತೆ ಕೊರೋನಾ ನಿರ್ಬಂಧಗಳ(Corona Restrictions) ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ದಕ್ಷಿಣ ಆಫ್ರಿಕಾ(South Africa) ಮತ್ತು ಬೆಂಗಳೂರಿನಲ್ಲಿ ಒಮಿಕ್ರೋನ್(Omicron) ರೂಪಾಂತರಿ ಸೋಂಕಿನ ಪರಿಣಾಮಗಳು ಒಂದೇ ರೀತಿ ಕಂಡು ಬಂದ ಹಿನ್ನೆಲೆ ಈ ಅಧ್ಯಯನವನ್ನು ನಡೆಸಲಾಗಿದೆ.
ದೇಶದಲ್ಲಿ ಕೊರೋನಾ
ದೇಶದಲ್ಲಿ ಒಂದೇ ದಿನ 2,09,918 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು 959 ಸಾವನ್ನಪ್ಪಿದ್ದಾರೆ.ಕಳೆದ ಮೂರು ದಿನದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.
ಸಕ್ರಿಯ ಪ್ರಕರಣಗಳು 53,669 ರಷ್ಟು ಕಡಿಮೆಯಾಗಿ 18,31,268 ಕ್ಕೆ ತಲುಪಿದೆ ಚೇತರಿಕೆಯ ಪ್ರಮಾಣವು ಶೇಕಡಾ 94.37 ರಷ್ಟಿದೆ .ಕೇರಳದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ.ರಾಜ್ಯದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸೂಚಿಸಿದೆ.ಮೆಟ್ರೂ ನಗರಗಳಲ್ಲಿ ಬಿಗಿ ಕ್ರಮ ಅವಶ್ಯಕ ಎಂದು ಹೇಳಿದೆ. ಏತನ್ಮಧ್ಯೆ, ದೇಶದಲ್ಲಿ ಇದುವರೆಗೆ ನೀಡಲಾದ ಲಸಿಕೆ ಪಡೆದವರ ಸಂಖ್ಯೆ 166.03 ಕೋಟಿ ದಾಟಿದೆ.
ಇಳಿಕೆಯತ್ತ ಮೂರನೇ ಅಲೆ
ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ಊಹಿಸಲಾಗಿತ್ತು. ಆದರೆ, ಇದೀಗ ಮೂರನೆ ಅಲೆ ಸದ್ದುಗದ್ದಲವಿಲ್ಲದೆ ಜಾಗ ಖಾಲಿ ಮಾಡತೊಡಗಿದೆ.
ಫೆಬ್ರವರಿ ಮೂರನೇ ವಾರದಿಂದ 3ನೇಅಲೆ ಅಬ್ಬರ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಇದೀಗ ಕಳೆದ ಒಂದು ವಾರದಲ್ಲಿ 2ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿರುವುದರಿಂದ ಮೂರನೇ ಅಲೆ ಅಂತ್ಯದ ಕಡೆ ಮುಖ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜನವರಿ ಕೊನೆಯ ವಾರದಿಂದ ಶುರುವಾಗಿ ಫೆಬ್ರವರಿ ಮೊದಲ ವಾರದಲ್ಲೇ ಮೂರನೇ ಅಲೆ ಇಳಿಕೆ ಕಾಣುತ್ತಿದೆ.ಇದಕ್ಕೆ ಪೂರಕ ಎಂಬಂತೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ.