*ರಾಜ್ಯದ ಜನತೆಗೆ ಗುಡ್ ನ್ಯೂಸ್; ಗುಡ್‌ನ್ಯೂಸ್
* ರಾಜ್ಯದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಡಬಲ್
*22,823 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 52,253 ಜನರು ಕೊವಿಡ್ನಿಂದ ಗುಣಮುಖ
ಬೆಂಗಳೂರು, (ಮೇ.28): ಕೊರೋನಾ ಆತಂಕದ ಮಧ್ಯೆ ರಾಜ್ಯದ ಜನತಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಒಂದು ಗುಡ್‌ನ್ಯೂಸ್ ನೀಡಿದ್ದಾರೆ.
ಹೌದು....ರಾಜ್ಯದಲ್ಲಿ ಇಂದು (ಶುಕ್ರವಾರ) 22,823 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 52,253 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ.
undefined
7 ತಿಂಗಳಲ್ಲಿ ಸಮಸ್ತ ಭಾರತೀಯರಿಗೆ ಲಸಿಕೆ; ಕೇಂದ್ರದ ಭರವಸೆ!
ಬೆಂಗಳೂರು ನಗರ ಜಿಲ್ಲೆಯಲ್ಲಿ 5736 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಶುಕ್ರವಾರ ಒಂದೇ ದಿನ 31,237 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜ್ಯಾದ್ಯಂತ ಕಳೆದ 24 ಗಂಟೆಗಳಲ್ಲಿ 1,38,983 ಟೆಸ್ಟ್ ಮಾಡಲಾಗಿದ್ದು, 22,823 ಪ್ರಕರಣಗಳು ಪತ್ತೆಯಾಗಿವೆ. ಪಾಸಿಟಿವಿಟಿ ಪ್ರಮಾಣ ಶೇಕಡ 16.4 ರಷ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 5736 ಪ್ರಕರಣ ಪತ್ತೆಯಾಗಿದ್ದು 31,237 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 25,46,821 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 21,46,621 ಸೋಂಕಿತರು ಗುಣಮುಖರಾಗಿದ್ದು, 3,72,373 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ
🔹ರಾಜ್ಯದಲ್ಲಿ ಇಂದು 52,253 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ
🔹ರಾಜ್ಯಾದ್ಯಂತ ಇಂದು 1,38,983 ಟೆಸ್ಟ್ ನಡೆಸಲಾಗಿದ್ದು, 22,823 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಪಾಸಿಟಿವಿಟಿ ದರ 16.42% ರಷ್ಟಿದೆ
🔹ಬೆಂಗಳೂರಿನಲ್ಲಿ 5,736 ಪ್ರಕರಣ ಪತ್ತೆಯಾಗಿದ್ದು, 31,237 ಜನ ಗುಣಮುಖರಾಗಿದ್ದರೆ.
ಜಿಲ್ಲಾವಾರು ಕೋವಿಡ್ ಪ್ರಕರಣಗಳ ಅಂಕಿ-ಸಂಖ್ಯೆ :
ಬಾಗಲಕೋಟೆ-252, ಬಳ್ಳಾರಿ-782, ಬೆಳಗಾವಿ-1319, ಬೆಂಗಳೂರು ಗ್ರಾಮಾಂತರ-514, ಬೆಂಗಳೂರು ನಗರ-5736, ಬೀದರ್-64, ಚಾಮರಾಜನಗರ-318, ಚಿಕ್ಕಬಳ್ಳಾಪುರ-337, ಚಿಕ್ಕಮಗಳೂರು-559, ಚಿತ್ರದುರ್ಗ-489, ದಕ್ಷಿಣ ಕನ್ನಡ-799, ದಾವಣಗೆರೆ-522, ಧಾರವಾಡ-700, ಗದಗ-302, ಹಾಸನ-1170, ಹಾವೇರಿ-137, ಕಲಬುರಗಿ-91, ಕೊಡಗು-245, ಕೋಲಾರ-656, ಕೊಪ್ಪಳ-339, ಮಂಡ್ಯ-825, ಮೈಸೂರು-1677, ರಾಯಚೂರು-365, ರಾಮನಗರ-339, ಶಿವಮೊಗ್ಗ-1135, ತುಮಕೂರು-1326, ಉಡುಪಿ-766, ಉತ್ತರ ಕನ್ನಡ-692, ವಿಜಯಪುರ-183, ಯಾದಗಿರಿ-184.