ಪಂಚಾಯ್ತಿ ಎಲೆಕ್ಷನ್‌ ಆಗದಿದ್ರೆ 2100 ಕೋಟಿ ಅನುದಾನ ಕಟ್‌: ಸಂಗ್ರೇಶಿ

By Kannadaprabha News  |  First Published Aug 9, 2024, 12:20 PM IST

ರಾಜ್ಯ ಸರ್ಕಾರದ ನಡೆಯಿಂದ ಕಳೆದ 4 ವರ್ಷಗಳಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಚುನಾವಣೆ ನಡೆಸದಿದ್ದರೆ 15ನೇ ಹಣಕಾಸು ಆಯೋಗದ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಬರಬೇಕಾದ 2100 ಕೋಟಿ ರು. ಅನುದಾನ ಕಡಿತವಾಗಲಿದೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ 


ಬೆಂಗಳೂರು(ಆ.09): ಪ್ರಸಕ್ತ ಆರ್ಥಿಕ ವರ್ಷದ ಅವಧಿಯೊಳಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದಿದ್ದರೆ 15ನೇ ಹಣಕಾಸು ಆಯೋಗದ ಮೂಲಕ ರಾಜ್ಯಕ್ಕೆ ಬರಬೇಕಿರುವ 2100 ಕೋಟಿ ರು. ಅನುದಾನ ಕೈತಪ್ಪಲಿದೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಆತಂಕ ವ್ಯಕ್ತಪಡಿಸಿದ್ದಾರೆ. 

ಗುರುವಾರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆಯಿಂದ ಕಳೆದ 4 ವರ್ಷಗಳಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಚುನಾವಣೆ ನಡೆಸದಿದ್ದರೆ 15ನೇ ಹಣಕಾಸು ಆಯೋಗದ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಬರಬೇಕಾದ 2100 ಕೋಟಿ ರು. ಅನುದಾನ ಕಡಿತವಾಗಲಿದೆ. ಈ ಕುರಿತು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಪಂಚಾಯ್ತಿ ಚುನಾವಣೆ, ಬಿಬಿಎಂಪಿ ಸಂಬಂಧ ಅರ್ಜಿಗಳು ಕೋರ್ಟಲ್ಲಿ ಇತ್ಯರ್ಥವಾಗಬೇಕಿದೆ. 

Latest Videos

undefined

ನಗನೂರು ಗ್ರಾಪಂ ಚುನಾವಣೆಯಲ್ಲಿ ನಡೆಯಿತಾ ಅಕ್ರಮ? ಚುನಾವಣಾಧಿಕಾರಿ ಹಾಕಿದ್ದ ಮತವೇ ಅಸಿಂಧು..!

3 ಪಾಲಿಕೆಗಳಿಗೆ ಶೀಘ್ರ ಚುನಾವಣೆ ಘೋಷಣೆ

ಅವಧಿ ಮುಕ್ತಾಯಗೊಂಡಿರುವ ಮೈಸೂರು, ತುಮಕೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳಿಗೆ ಮುಂದಿನ ವಾರದಲ್ಲಿ ಚುನಾವಣೆ ಘೋಷಣೆ ಮಾಡಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ಮಾಹಿತಿ ನೀಡಿದರು.

ಸುಪ್ರೀಂಕೋರ್ಟ್ ಆದೇಶದಂತೆ ಹಾಲಿ ಇರುವ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ಅನ್ವಯ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮುಂದಿನ ವಾರದಲ್ಲಿ ಚುನಾವಣೆ ಘೋಷಣೆ ಮಾಡಲಿದ್ದು, ನವೆಂ ಬ‌ರ್ ತಿಂಗಳ ಅಂತ್ಯದವೇಳೆ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಚುನಾಯಿತ ಆಡಳಿತ ಬರಬೇಕು. ಇದು ಪ್ರಜಾಪ್ರಭುತ್ವದ ಹಕ್ಕು ಎಂದರು.

click me!