ಲೋಕಸಭಾ ಚುನಾವಣೆ ಹೊತ್ತಲ್ಲಿ ಕಾಸರಗೋಡು ಮನೆಯೊಂದರಲ್ಲಿ ₹2000 ಮುಖಬೆಲೆಯ 7.25 ಕೋಟಿ ರೂ. ನಕಲಿ ನೋಟು ಪತ್ತೆ!

By Ravi Janekal  |  First Published Mar 22, 2024, 6:20 PM IST

ದಕ್ಷಿಣ ಕನ್ನಡದ, ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ಗುರಪುರ ಎಂಬಲ್ಲಿ ಬರೋಬ್ಬರಿ 7 ಕೋಟಿ ಮೌಲ್ಯದ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ ನೋಟು ಪತ್ತೆಯಾಗಿರುವುದು  ಹಲವು ಅನುಮಾನಗಳಿಗೆ ಕಾರಣವಾಗಿದೆ


ದಕ್ಷಿಣ ಕನ್ನಡ ಮಾ.(ಕ22): ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ದಿನದಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದೆ ಮತ್ತು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣ ಇನ್ನಿತರ ಚುನಾವಣಾ ಅಕ್ರಮ ತಡೆಯಲು ಕಟ್ಟೆಚ್ಚರ ವಹಿಸಿರುವ ಪೊಲೀಸರು ಪೊಲೀಸರು ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ನಡುವೆ ದಕ್ಷಿಣ ಕನ್ನಡದ, ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ಗುರಪುರ ಎಂಬಲ್ಲಿ ಬರೋಬ್ಬರಿ 7.25 ಕೋಟಿ ಮೌಲ್ಯದ 2000 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಗಲ್ಫ್‌ ಉದ್ಯೋಗಿಯಾಗಿರುವ ಕೆಪಿ ಬಾಬು ರಾಜ್ ಎಂಬುವವರ ಮಾಲೀಕತ್ವದ ಮನೆಯಲ್ಲಿ ಪತ್ತೆಯಾಗಿರುವ 2000 ಮುಖಬೆಲೆ ಕೋಟ್ಯಂತರ ರೂಪಾಯಿ ಕಂತೆ ಕಂತೆ ನಕಲಿ ನೋಟುಗಳು. ಪಾಣತ್ತೂರು ಪಣತ್ತಡಿಯ ಅಬ್ದುಲ್ ರಝಾಕ್ ಎಂಬವರು ಈ ಮನೆಯನ್ನು ಬಾಡಿಗೆಗೆ ನೀಡಿದ್ದರು.

Latest Videos

undefined

ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ 5.85 ಕೋಟಿ ನಗದು ಜಪ್ತಿ

ಮನೆಯಲ್ಲಿ ನಿಷೇಧಿತ ನೋಟುಗಳಿರುವುದು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು. ಈ ಬಗ್ಗೆ ಕಳೆದ ಎರಡುಮೂರು ದಿನಗಳಿಂದ ಮನೆಯ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಬುಧವಾರ ದಾಳಿ ನಡೆಸಿ ಎರಡು ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದ ಪೊಲೀಸರು.

ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದ ರಾಜ್ಯ ಸರ್ಕಾರ ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪತ್ತೆಯಾಗಿರುವುದುಕ ಹಲವು ಅನುಮಾನಗಳನ್ನು ಹುಟ್ಟಿಸಿದೆ. 

ಬೀದರ್‌: ಔರಾದ್ ಬಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 15.50 ಕೋಟಿ ಮೌಲ್ಯದ ಗಾಂಜಾ ವಶ

ಖಚಿತ ಸುಳಿವಿನ ಮೇರೆಗೆ ದಾಳಿ: 

ಮನೆಯಲ್ಲಿ ಕೋಟ್ಯಂತರ ಮೌಲ್ಯದ ಮೌಲ್ಯದ ನೋಟುಗಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಂಬಲತ್ತರ ಪೊಲೀಸರು ಮನೆಯ ಮೇಲೆ ನಿಗಾ ಇಟ್ಟಿದ್ದರು. ಬುಧವಾರ ಮನೆಯ ಮೇಲೆ ದಾಳಿ ನಡೆಸಿರುವ ಪೊಲೀಸರು. ನೋಟುಗಳನ್ನು ಪೂಜಾ ಕೋಣೆ, ಹಾಲ್‌ನಲ್ಲಿ ಚೀಲಗಳಲ್ಲಿ ತುಂಬಿ ಇರಿಸಲಾಗಿತ್ತು. ಪೂಜಾ ಕೋಣೆ ತಪಾಸಣೆ ನಡೆಸಿದಾಗ ಹೆಚ್ಚಿನ ನೋಟುಗಳು ಪತ್ತೆಯಾಗಿವೆ. ಘಟನೆ ಸಂಬಂಧ ಓರ್ವನ ವಶಕ್ಕೆ ಪಡೆಯಲಾಗಿದೆ. ಪರಪಳ್ಳಿಯ ಬಾಬುರಾಜ್ ವಿಚಾರಣೆಗೆ ಗೈರಾಗಿದ್ದಾರೆ. ಮೊಬೈಲ್ ಸ್ವಿಚ್ ಮಾಡಿಕೊಂಡಿರುವ ಬಾಬುರಾಜ್ ಪೊಲೀಸರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. 

click me!