ದಸರಾ ಹಬ್ಬಕ್ಕೆ ಊರಿಗೆ ತೆರಳೋರಿಗೆ ಸಂತಸದ ಸುದ್ದಿ: ಕೆಎಸ್‌ಆರ್‌ಟಿಸಿಯಿಂದ 2000 ಹೆಚ್ಚುವರಿ ಬಸ್‌

By Kannadaprabha News  |  First Published Oct 14, 2023, 9:55 AM IST

ದಸರಾ ಹಬ್ಬದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಬಸ್‌ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗುವುದು. ಈ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಾಗುತ್ತವೆ. 


ಬೆಂಗಳೂರು(ಅ.14):  ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ.20ರಿಂದ 26ರವರೆಗೆ ಬೆಂಗಳೂರಿನಿಂದ ಮೈಸೂರು ಸೇರಿದಂತೆ ರಾಜ್ಯದ ಬೇರೆ ಊರುಗಳು ಮತ್ತು ಹೊರರಾಜ್ಯಗಳ ವಿವಿಧ ನಗರಗಳಿಗೆ ಹೆಚ್ಚುವರಿ ಎರಡು ಸಾವಿರ ಬಸ್‌ಗಳ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ.

ದಸರಾ ಹಬ್ಬದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಬಸ್‌ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗುವುದು. ಈ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಾಗುತ್ತವೆ. ಅದೇ ರೀತಿ ರಾಜ್ಯ ಮತ್ತು ಬೇರೆ ರಾಜ್ಯಗಳಿಗೆ ತೆರಳುವ ವಿಶೇಷ ಬಸ್‌ಗಳು ಅ.24ರಿಂದ 29ರವರೆಗೆ ಬೆಂಗಳೂರಿಗೆ ಕಾರ್ಯಾಚರಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Tap to resize

Latest Videos

ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿ ಇಬ್ಬರು ಮಹಿಳಾ ಡೀಸಿಗಳ ಮಾದರಿ ನಡೆ

ಮೈಸೂರಿಗೆ ದಸರಾ ವಿಶೇಷ ಕಾರ್ಯಾಚರಣೆ

ಹೆಚ್ಚುವರಿ ಬಸ್‌ಗಳಲ್ಲಿ 600 ಬಸ್‌ಗಳು ದಸರಾ ವಿಶೇಷವಾಗಿ ಮೈಸೂರಿಗೆ ಕಾರ್ಯಾಚರಣೆಗೊಳ್ಳಲಿವೆ. ಆ ಬಸ್‌ಗಳಲ್ಲಿ 250 ಬಸ್‌ಗಳು ಬೆಂಗಳೂರು-ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಮೈಸೂರಿಗೆ ಕಾರ್ಯಾಚರಣೆಗೊಳ್ಳಲಿವೆ. ಉಳಿದ 350 ಬಸ್‌ಗಳು ಮೈಸೂರಿನ ಸುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳು ಹಾಗೂ ತಾಲೂಕು, ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿವೆ. ಜತೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್‌ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.

click me!