ಐಟಿ ದಾಳಿಯಾದ ಅಂಬಿಕಾಪತಿ 8 ವರ್ಷದಿಂದ ಗುತ್ತಿಗೆ ಮಾಡಿಲ್ಲ: ಕೆಂಪಣ್ಣ

Published : Oct 14, 2023, 08:26 AM IST
ಐಟಿ ದಾಳಿಯಾದ ಅಂಬಿಕಾಪತಿ 8 ವರ್ಷದಿಂದ ಗುತ್ತಿಗೆ ಮಾಡಿಲ್ಲ: ಕೆಂಪಣ್ಣ

ಸಾರಾಂಶ

ಸಾಕಷ್ಟು ಜನ ಗುತ್ತಿಗೆದಾರರು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲೂ ಇದ್ದಾರೆ. ಬಿಜೆಪಿಯಲ್ಲಿದ್ದ ಗುತ್ತಿಗೆದಾರರೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಡೆದ 40 ಪರ್ಸೆಂಟ್ ಹೋರಾಟದಲ್ಲಿ ಭಾಗವಹಿಸಿದ್ದರು ಎಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಡಿ. ಕೆಂಪಣ್ಣ   

ಬೆಂಗಳೂರು(ಅ.14):  ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾಗಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.

ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ, "ಕಳೆದ 8 ವರ್ಷಗಳಿಂದ ಅಂಬಿಕಾಪತಿಯವರು ಯಾವುದೇ ಗುತ್ತಿಗೆ ಕೆಲಸಗಳನ್ನು ಮಾಡಿಲ್ಲ. ಅವರಿಗೆ ಸರ್ಕಾರದಿಂದ ಯಾವುದೇ ಹಣ ಬಾಕಿ ಇಲ್ಲ. ಭೂಮಿ, ತೋಟ, ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಅವರ ಬ್ರದರ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬೇರೆ ಪಾರ್ಟಿ ಕಟ್ಟಿಕೊಂಡು ಸ್ಪರ್ಧಿಸಿ ಸೋತರು. ಸಾಕಷ್ಟು ಜನ ಗುತ್ತಿಗೆದಾರರು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲೂ ಇದ್ದಾರೆ. ಬಿಜೆಪಿಯಲ್ಲಿದ್ದ ಗುತ್ತಿಗೆದಾರರೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಡೆದ 40 ಪರ್ಸೆಂಟ್ ಹೋರಾಟದಲ್ಲಿ ಭಾಗವಹಿಸಿದ್ದರು" ಎಂದರು.

ಕಾಂಗ್ರೆಸ್ ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..? ಶುರುವಾಯ್ತು ರಣ ರಾಜಕಾರಣ !

ಸರ್ಕಾರಕ್ಕೆ ಕಮಿಷನ್ ನೀಡಲು ಅಂಬಿಕಾಪತಿ ಹಣ ಇಟ್ಟುಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ ಎಂಬ ಪ್ರಶ್ನೆಗೆ, "ಬಿಜೆಪಿಯವರು ಬೇಕಾದಷ್ಟು ಹೇಳುತ್ತಾರೆ. ಅಧಿಕಾರದಲ್ಲಿದ್ದ ಅವರ ವಿರುದ್ಧವೇ ಆರೋಪಗಳು ಕೇಳಿ ಬಂದಾಗ ಏನು ಮಾಡಿದ್ದರು? ಬಿಜೆಪಿಯ ಮುನಿರತ್ನ ಅವರು ಗುತ್ತಿಗೆದಾರರು. ಅವರ ಮೇಲೂ ಸಾಕಷ್ಟು ಆರೋಪಗಳು ಇವೆ. ದಾಳಿ ನಡೆಸಿದ ಐಟಿ ಅಧಿಕಾರಿಗಳು ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ತಪ್ಪು ಕಂಡು ಬಂದರೆ ನಾವು ಕೂಡ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.

ಐಟಿ ದಾಳಿ ನಡೆದಿರುವ ಗುತ್ತಿಗೆದಾರರ ಪೈಕಿ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ದೂರು ನೀಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದ ಹೇಮಂತ್ ಮನೆ ಮೇಲೂ ಐಟಿ ದಾಳಿ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಮತ್ತೆ ಮಳೆ ಚುರುಕು: ಬೆಂಗಳೂರಲ್ಲಿ ಮಳೆ ಎಚ್ಚರಿಕೆ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
Karnataka News Live 17 September 2026: Bengaluru - GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್