ಪೊಲೀಸ್ ಇಲಾಖೆಗೆ ಬಂಪರ್ ಕೊಡುಗೆ

By Kannadaprabha News  |  First Published Oct 15, 2021, 7:13 AM IST
  • ಕಳೆದರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ 200 ಕೋಟಿ ರು. ಅನುದಾನ
  • ಸ್ವಾತಂತ್ರ್ಯ ಬಂದ ನಂತರದಲ್ಲಿ ಇಷ್ಟು ಮೊತ್ತದ ಹಣವನ್ನು ಯಾರ ಕಾಲದಲ್ಲಿಯೂ ನೀಡಿಲ್ಲ

ಮಂಡ್ಯ (ಅ.15):   ಕಳೆದರಡು ವರ್ಷಗಳಲ್ಲಿ ಪೊಲೀಸ್ (Police) ಇಲಾಖೆಗೆ 200 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ (karnataka govt) ನೀಡಿ ದ್ದು, ಸ್ವಾತಂತ್ರ್ಯ (Freedom) ಬಂದ ನಂತರದಲ್ಲಿ ಇಷ್ಟು ಮೊತ್ತದ ಹಣವನ್ನು ಯಾರ ಕಾಲದಲ್ಲಿಯೂ ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಹೇಳಿದರು. 

ಮಂಡ್ಯದ (Mandya) ಡಿಎಆರ್ ಆವರಣದಲ್ಲಿ 36 ಪೊಲೀಸ್ ವಸತಿ ಗೃಹ, ಡಿಎಆರ್ ಆಡಳಿತ ಕಚೇರಿ ಕಟ್ಟಡ, ಶ್ವಾನದಳ, ಸೆಂಟ್ರಲ್ ಪೊಲೀಸ್ (Police) ಠಾಣೆ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯದಲ್ಲಿ 100 ಪೊಲೀಸ್ ಠಾಣೆಗ ಳನ್ನು ನಿರ್ಮಿಸಲಾಗಿದೆ. 

Tap to resize

Latest Videos

ಇದುವರೆಗೆ ವರ್ಷಕ್ಕೆ 4 ರಿಂದ 5 ಪೊಲೀಸ್ ಠಾಣೆಗಳು ಮಾತ್ರ ನಿರ್ಮಾಣ ವಾಗುತ್ತಿದ್ದವು ಎಂದರು. ಪೊಲೀಸ್ ವಸತಿ ಗೃಹದ (Police Quarters) ಸಮಸ್ಯೆ ತೀವ್ರವಾಗಿರುವು ದನ್ನು ಮನಗಂಡು 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ. ಇನ್ನೂ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ. 

ನನ್ನ ಬೆನ್ನು ಮುರಿದಿದ್ದ ಪೊಲೀಸರೇ ಈಗ ನನಗೆ ಸಲ್ಯೂಟ್‌ ಹೊಡಿತಿದ್ದಾರೆ!

ಇದುವರೆಗಿದ್ದ ಸಿಂಗಲ್ ಬೆಡ್‌ರೂಂಗೆ ಬದಲಾಗಿ ಎರಡು ಬೆಡ್ ರೂಂಗಳುಳ್ಳ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದರು. 

140 ಠಾಣೆಗಳು ಮೇಲ್ದರ್ಜೆಗೆ: ರಾಜ್ಯದಲ್ಲಿ 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಪಿಎಸ್‌ಐ ಹಂತದ ಠಾಣೆಗಳನ್ನು ಸಿಪಿಐ ದರ್ಜೆಗೇರಿಸ ಲಾಗಿದೆ. ಸೈಬರ್ ವಿಭಾಗವನ್ನು ಶಕ್ತಿಯುತಗೊಳಿಸಿ ದ್ದೇವೆ. ಇದಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಗುಜರಾತ್ ರಾಜ್ಯದ ಸೈಬರ್ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ತರಬೇತಿ ಕೊಡಿಸ ಲಾಗುತ್ತಿದೆ. ಜಿಲ್ಲೆಯಲ್ಲಿಯೂ ಸೈಬರ್ ವಿಭಾಗ ಪರಿ ಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಿರುವುದಾಗಿ ಹೇಳಿದರು. 

250 ವಿಧಿ ವಿಜ್ಞಾನ ತಜ್ಞರ ನೇಮಕ: ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಎಫ್‌ಎಸ್ ಎಲ್ ತಜ್ಞರು ಸ್ಥಳಕ್ಕೆ ಆಗಮಿಸಬೇಕು, ಸಾಕ್ಷ್ಯಗಳನ್ನು ನೇರವಾಗಿ ಸಂಗ್ರಹಿಸಬೇಕೆಂಬ ಕಾರಣಕ್ಕೆ 250 ವಿಧಿ ವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಎಂ. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಎನ್. ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷ ಎಚ್.ಎಸ್.ಮಂಜು, ರಾಜ್ಯ ಐಜಿಪಿ ಪ್ರವೀಣ್‌ಸೂದ್, ಐಪಿಎಸ್ ಅಧಿಕಾರಿ ಎ.ಎಸ್. ಎನ್.ಮೂರ್ತಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಎಂ.ಅಶ್ವಿನಿ, ಎಎಸ್‌ಪಿ ಡಾ.ಧನಂಜಯ್ ಸೇರಿದಂತೆ ಇತರರು ಇದ್ದ  

click me!