Corona Crisis: ಐದು ತಿಂಗಳ ಬಳಿಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕೋವಿಡ್‌!

By Govindaraj S  |  First Published Jul 23, 2022, 11:06 AM IST

ರಾಜ್ಯದಲ್ಲಿ ಸತತ ಎರಡನೇ ದಿನವೂ ಕೊರೋನಾ ಸೋಂಕು ಹೊಸ ಪ್ರಕರಣಗಳು ಒಂದೂವರೆ ಸಾವಿರದಷ್ಟುವರದಿಯಾಗಿವೆ. ಐದು ತಿಂಗಳ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. 


ಬೆಂಗಳೂರು (ಜು.23): ರಾಜ್ಯದಲ್ಲಿ ಸತತ ಎರಡನೇ ದಿನವೂ ಕೊರೋನಾ ಸೋಂಕು ಹೊಸ ಪ್ರಕರಣಗಳು ಒಂದೂವರೆ ಸಾವಿರದಷ್ಟುವರದಿಯಾಗಿವೆ. ಐದು ತಿಂಗಳ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರ 1562 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1107 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಗುರುವಾರ 1552 ಕೇಸ್‌, ಒಂದು ಸಾವು ವರದಿಯಾಗಿತ್ತು. 

ಫೆಬ್ರವರಿ ಬಳಿಕ ಇದೇ ಮೊದಲ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಹೊಸ ಪ್ರಕರಣಗಳು ಕಂಡುಬಂದಿವೆ. ಸದ್ಯ 8,488 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 33 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.6 ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 110 ಹೆಚ್ಚಳವಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 10 ಏರಿಕೆಯಾಗಿವೆ. (ಗುರುವಾರ 1552 ಕೇಸ್‌, ಸಾವು ಒಂದು)

Tap to resize

Latest Videos

undefined

Corona Vaccine: 4 ಕೋಟಿ ಜನರು ಒಂದು ಡೋಸು ಪಡೆದಿಲ್ಲ: ಕೇಂದ್ರ

ಐದು ತಿಂಗಳ ಬಳಿಕ ಗುರುವಾರ ಮೊದಲ ಬಾರಿ ಸೋಂಕು ಪ್ರಕರಣಗಳು ಒಂದೂವರೆ ಸಾವಿರ ಗಡಿ ದಾಟಿದ್ದವು. ಸತತ ಎರಡನೇ ದಿನವೂ ಅದೇ ಪ್ರಮಾಣ ಮುಂದುವರೆದಿದೆ. ಅಲ್ಲದೆ, ಫೆಬ್ರವರಿ ಬಳಿಕ ಇದೇ ಮೊದಲ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಹೊಸ ಪ್ರಕರಣಗಳು ಕಂಡುಬಂದಿವೆ. ಬೆಂಗಳೂರು ಸೇರಿದಂತೆ ಬೆರಳೆಣಿಕೆ ಜಿಲ್ಲೆಗಳಿಗೆ ಸೀಮಿತವಾಗಿದ್ದ ಕೊರೋನಾ ಹೊಸ ಪ್ರಕರಣಗಳು ನಿಧಾನವಾಗಿ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿಯೂ ಕಾಣಿಸಿಕೊಂಡಿವೆ. ಅದರಲ್ಲೂ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಎಲ್ಲಿ, ಎಷ್ಟು ಮಂದಿಗೆ ಸೋಂಕು?: ಶುಕ್ರವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1244 ಪತ್ತೆಯಾಗಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ 45, ಧಾರವಾಡ 38, ಮೈಸೂರು 34, ದಕ್ಷಿಣ ಕನ್ನಡ 28, ಬೆಳಗಾವಿ 27, ಬಳ್ಳಾರಿ 22, ತುಮಕೂರು ಮತ್ತು ಉಡುಪಿ ತಲಾ 14, ಕೋಲಾರ 11, ಕಲಬುರಗಿ 10 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 19 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಪತ್ತೆಯಾಗಿವೆ.

ಶೇ.7ರ ಹತ್ತಿರ ಪಾಸಿಟಿವಿಟಿ ದರ: ಬೆಂಗಳೂರಿನಲ್ಲಿ ಶುಕ್ರವಾರ 1,244 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.63ಕ್ಕೆ ಏರಿಕೆಯಾಗಿದೆ. 996 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ7,355 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 29 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14,622 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ.

Corona Crisis: 5 ತಿಂಗಳ ಬಳಿಕ ಕರ್ನಾಟಕದಲ್ಲಿ 1500+ ಕೋವಿಡ್‌ ಕೇಸು: 1 ಸಾವು

572 ಮಂದಿ ಮೊದಲ ಡೋಸ್‌, 3888 ಮಂದಿ ಎರಡನೇ ಡೋಸ್‌ ಮತ್ತು 10,162 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 17,943 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14,411 ಆರ್‌ಟಿಪಿಸಿಆರ್‌ ಹಾಗೂ 3,532 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿಲ್ಲ. ನಗರದಲ್ಲಿ ಒಟ್ಟು ನಗರದಲ್ಲಿ ಒಟ್ಟು 22 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!