
ಹಾಸನ (ಫೆ.20) : ಕೇರಳದ ವೈನಾಡಿನಲ್ಲಿ ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಸರ್ಕಾರದ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಾಡಾನೆ ತುಳಿತಕ್ಕೆ ಕೇರಳದ ವ್ಯಕ್ತಿ ಬಲಿಯಾದ್ರೆ ತಕ್ಷಣ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುವ ಸರ್ಕಾರ, ನಮ್ಮದೇ ಕರ್ನಾಟಕ ರಾಜ್ಯ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಾವನ್ನಪ್ಪಿದ ಮನು(35) ಕುಟುಂಬಕ್ಕೆ ಇನ್ನೂವರೆಗೆ ಸರ್ಕಾರ ಇನ್ನೂವರೆಗೆ ಪರಿಹಾರ ಹಣ ಕೊಡುತ್ತಿಲ್ಲ.
2022 ನವೆಂಬರ್ 1 ಮನು ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿತ್ತು. ಪರಿಹಾರ ಕೊಡುವವರೆಗೆ ಅಂದು ಶವ ಮೇಲೆತ್ತಲು ಬಿಡದೆ ಸ್ಥಳೀಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಮಧ್ಯರಾತ್ರಿ ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು, ಪರಿಹಾರ ನೀಡುವುದಾಗಿ ಪ್ರತಿಭಟಕಾರರ ಮನವೊಲಿಸಿದ್ದರು. ಅಲ್ಲದೇ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ಗೆ ಕರೆ ಮಾಡಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಮನು ಕುಟುಂಬಕ್ಕೆ ಹದಿನೈದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇಂದಿನಿಂದಲೇ ಏಳುವರೆ ಲಕ್ಷ ಪರಿಹಾರವನ್ನು ಹದಿನೈದು ಲಕ್ಷಕ್ಕೆ ಹೆಚ್ಚಿಸಿದ್ದೇವೆ ಎಂದಿದ್ದರು. ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ್ದ ಸ್ಥಳೀಯರು ಪ್ರತಿಭಟನೆ ಹಿಂಪಡೆದಿದ್ದರು. \
ಆದರೆ ಮನು ಕುಟುಂಬಕ್ಕೆ ಏಳುವರೆ ಲಕ್ಷ ಮಾತ್ರ ಪರಿಹಾರ ನೀಡಿರುವ ಸರ್ಕಾರ.ಇನ್ನುಳಿದ ಏಳೂವರೆಗೆ ಲಕ್ಷ ಪರಿಹಾರದ ಹಣ ನೀಡಲು ಸಬೂಬು ಹೇಳುತ್ತಿರುವ ಅರಣ್ಯ ಇಲಾಖೆ ಹಾಗೂ ಸರ್ಕಾರ. ಮನು 2023 ನವೆಂಬರ್ 1 ರಂದು ಮೃತಪಟ್ಟಿದ್ದಾರೆ ಆದರೆ ಡಿ.15 ರಿಂದ ಪರಿಹಾರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಾರೆ ಎಂದು ಉಲ್ಟಾ ಹೊಡೆದಿರುವ ಅಧಿಕಾರಿಗಳು. ರಾಜ್ಯದಲ್ಲಿ ಬಲಿಯಾದವರಿಗೆ ಅನ್ಯಾಯ ಆಗ್ತಿದೆ. ಆದರೆ ಹೊರರಾಜ್ಯದಲ್ಲಿ ಬಲಿಯಾದವನಿಗೆ ತಕ್ಷಣ 15 ಲಕ್ಷ ರೂಪಾಯಿ ನೀಡಲಾಗ್ತಿದೆ. ಸರ್ಕಾರದ ನಡೆಗೆ ಮಲೆನಾಡು ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ದಾಳಿಗೆ ಬಲಿಯಾದ ಕೇರಳದ ವ್ಯಕ್ತಿಗೆ ಮಾನವೀಯ ನೆಲೆಯಿಂದ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೇವೆ ಎಂದು ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಹಾಗಾದರೆ ಮಾನವೀಯತೆ ಉಕ್ಕಿ ಬರೋದು ಹೊರರಾಜ್ಯದವರು ಬಲಿಯಾದಾಗ ಮಾತ್ರವಾ? ನಮ್ಮದೇ ಕರ್ನಾಟಕ ರಾಜ್ಯದ ಜನರು ಬಲಿಯಾದ್ರೆ ಯಾಕೆ ತಕ್ಷಣ ಪರಿಹಾರ ಘೋಷಣೆ ಮಾಡುವುದಿಲ್ಲ? ರಾಹುಲ್ ಗಾಂಧಿ ಸೂಚನೆ ಕೊಟ್ರೆ ಮಾತ್ರ ಮಾನವೀಯತೆ ಹುಟ್ಟುತ್ತಾ? ಅರಣ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ