ಜನರ ಮೇಲೆ ಸಾಲ ಹೊರಿಸಿ ಬಜೆಟ್‌ ಮಂಡಿಸುವ ಅಗತ್ಯ ಏನಿತ್ತು: ಎನ್‌ಆರ್‌ ರಮೇಶ್ ಕಿಡಿ

By Kannadaprabha NewsFirst Published Feb 20, 2024, 1:12 PM IST
Highlights

ರಾಜ್ಯದ ಪ್ರತಿ ಪ್ರಜೆಯ ತಲೆಗೆ ₹28,821 ಮೊತ್ತದ ಸಾಲದ ಹೊರೆ ಹೊರಿಸಿ ಆಯವ್ಯಯವನ್ನು ಮಡಿಸುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು (ಫೆ.20) :  ರಾಜ್ಯದ ಪ್ರತಿ ಪ್ರಜೆಯ ತಲೆಗೆ ₹28,821 ಮೊತ್ತದ ಸಾಲದ ಹೊರೆ ಹೊರಿಸಿ ಆಯವ್ಯಯವನ್ನು ಮಡಿಸುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

2024-25ನೇ ಸಾಲಿಗೆ ರಾಜ್ಯದ ₹3,71,383 ಕೋಟಿ ಬೃಹತ್ ಮೊತ್ತದ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಆದರೆ ಸರ್ಕಾರಕ್ಕೆ ಯಾವ ಮೂಲಗಳಿಂದ ಆದಾಯ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಜನರ ತಲೆಗೆ ಸಾಲದ ಹೊರೆ ಹೊರಿಸಿ ಆಯವ್ಯಯ ಮಂಡಿಸುವ ಅಗತ್ಯವೇನಿತ್ತು ಎಂದು ರಮೇಶ್ ಆಕ್ಷೇಪಿಸಿದ್ದಾರೆ.

1 ಲಕ್ಷ ಕೋಟಿ ಸಾಲ ಮಾಡಿ 52 ಸಾವಿರ ಕೋಟಿ ಗ್ಯಾರೆಂಟಿಗೆ ನೀಡಿದ್ರೆ ಬಡವರ ಬಜೆಟ್ ಅಂತಾರಾ? ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ!

ಪ್ರಸುತ್ತ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಲಭಿಸುತ್ತಿರುವುದು ಸುಮಾರು ₹2.10 ಲಕ್ಷ ಕೋಟಿ ಆದಾಯ ಬರುತ್ತದೆ. ಹೀಗಿದ್ದರೂ ವಾರ್ಷಿಕ ಆದಾಯಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚು ಮೊತ್ತದ ಆಯವ್ಯಯವನ್ನು ಮಂಡಿಸಿರುವುದು ನಿಜಕ್ಕೂ ಈ ನಾಡಿನ ದೌರ್ಭಾಗ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

 

ಅಧಿಕಾರಕ್ಕಾಗಿ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಅವುಗಳ ಕಾರ್ಯರೂಪಕ್ಕಿಳಿಸಲು ಮುಖ್ಯಮಂತ್ರಿಗಳು ಹೆಣಗಾಡುತ್ತಿದ್ದಾರೆ. ಕಳೆದ ಒಂಭತ್ತು ತಿಂಗಳಿಂದ ರಾಜ್ಯದ ಪ್ರಮುಖ 37 ಇಲಾಖೆಗಳ ಮೂಲಕ ಒಂದು ನಯಾಪೈಸೆಯ ಅಭಿವೃದ್ಧಿ ಕಾರ್ಯವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

 

ಈ ಆಯವ್ಯಯವು ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನುವಂತಿದೆ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಗಳಾದ ನಂತರ ಕಳೆದ ಸಾಲಿನಲ್ಲಿ -2023-24 ರ ಸಾಲಿನಲ್ಲಿ ಒಟ್ಟು ₹85,818 ಕೋಟಿ ಸಾಲವನ್ನು ಮಾಡಿದ್ದರು. ಮತ್ತೆ ₹1.05 ಲಕ್ಷ ಕೋಟಿ ಸಾಲ ಮಾಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಈ ಬೃಹತ್ ಮೊತ್ತದ ಸಾಲವನ್ನು ತೆಗೆದುಕೊಂಡು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ದೂರಿದ್ದಾರೆ.

ಕರ್ನಾಟಕ ಬಜೆಟ್ ಸಾಮಾನ್ಯ ಅಲ್ಲ, ಐತಿಹಾಸಿಕ ಬಜೆಟ್: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಸ್ವಾರ್ಥದ ಬಜೆಟ್‌ಗಾಗಿರಾಜ್ಯದ ಜನರಿಗೆ ಬರೆ

ಪ್ರಸ್ತುತ ರಾಜ್ಯದ ಒಟ್ಟು ಜನಸಂಖ್ಯೆ 6,78,33,000 ಆಗಿದ್ದು, 2024-25 ರ ಸಾಲಿನಲ್ಲಿ ಆಯವ್ಯಯದಲ್ಲಿ ತಿಳಿಸಿರುವಂತೆ ₹1,05 ಮೊತ್ತದ ಸಾಲವನ್ನು ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಗೆ ₹15,516 ಸಾಲ ಬರುತ್ತದೆ. ನಿಮ್ಮ ಸ್ವಾರ್ಥದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಜೀವನದೊಂದಿಗೆ ಚೆಲ್ಲಾಟವಾಡೋದು ಸರಿಯಲ್ಲ ಎಂದು ಅವರು ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!