ರಾಜ್ಯದಲ್ಲಿ ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡುವ ಮಾದರಿಯಲ್ಲಿಯೇ, ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡುವುದಕ್ಕೆ ಸರ್ಕಾರ ಮುಂದಾಗಿದೆ.
ಬೆಂಗಳೂರು(ಡಿ.3): ರಾಜ್ಯದಲ್ಲಿ ಇನ್ನುಮುಂದೆ ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡುವ ಮಾದರಿಯಲ್ಲಿಯೇ, ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ಒದಗಿಸಲಾಗುವುದು. ಮೊದಲು ಅರಣ್ಯ ಪ್ರದೇಶದ ಪಕ್ಕದಲ್ಲಿ ಆಗುತ್ತಿತ್ತು. ಈಗ ಬೆಂಗಳೂರಿನ ಆಸುಪಾಸಿನಲ್ಲಿ ಆಗುತ್ತಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳೆದ ಹಲವಾರು ದಿನಗಳಿಂದ ಅದರ ಬೇಟೆಯಾಡಲು ಪ್ರಯತ್ನ ಮಾಡಲಾಗುತ್ತಿದ್ದು, ಅದಕ್ಕೆ ಬಲೆಯನ್ನೂ ಹಾಕಲಾಗಿದೆ. ಅದನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡಲು ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
undefined
ಮೈಸೂರು: ಚಿರತೆ ದಾಳಿಗೆ ಯುವತಿ ಸಾವು, ಒಂದೇ ತಿಂಗಳಲ್ಲಿ ಇಬ್ಬರು ಬಲಿ, ಹೆಚ್ಚಿದ ಜನಾಕ್ರೋಶ
ವಿಶೇಷ ತಂಡ ನಿಯೋಜನೆ: ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ಆನೆ ಕಾಡಿದಾರ್ ಸುತ್ತಮುತ್ತ ಚಿರತೆಗಳೂ ಇವೆ. ಹೀಗಾಗಿ ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡಗಳು ನಿರ್ದಿಷ್ಟವಾಗಿ ಚಿರತೆ ದಾಳಿ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಹಾಗೂ ಕಾಡು ಬಿಟ್ಟು ಆಚೆ ಬಂದಿರುವ ಚಿರತೆಗಳನ್ನು ಹಿಡಿಯಲು ತಂಡಗಳು ಕಾರ್ಯಾಚರಣೆ ಮಾಡಲಿವೆ ಎಂದು ಮಾಹಿತಿ ನೀಡಿದರು.
ವಿವಿಧೆಡೆ ಚಿರತೆ ಹಾವಳಿ: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದೊಂದು ತಿಂಗಳಿಂದ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಒಂದು ತಿಂಗಳಿಂದೀಚೆಗೆ ಮೈಸೂರಿನಲ್ಲಿ ಚಿರತೆಯೊಂದು ಇಬ್ಬರನ್ನು ಕೊಂದು ಹಾಕಿದೆ. ಜತೆಗೆ, ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶ ಬಳಿಯೇ ನಾಲ್ಕು ಚಿರತೆಗಳು ಕಾಣುತ್ತಿವೆ. ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟವಾಗಿದ್ದು, ಪ್ರತಿನಿತ್ಯ ಆತಂಕದಿಂದಲೇ ಜೀವನ ಮಾಡುವಂತಾಗಿದೆ. ಕಳೆದ 48 ಗಂಟೆಗಳಿಂದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆಗೆ ಬೋನ್ ಇಡಲಾಗಿದ್ದರೂ, ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಈಗ ಚಿರತೆಯಿಂದ ದಾಳಿಗೆ ಒಳಪಟ್ಟು ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ.
Bengaluru: ಸಿಲಿಕಾನ್ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ
ಭಯ ಹುಟ್ಟಿಸಿದ ಕಾರವಾರದ ಚಿರತೆ ದಾಳಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಕುಳಿ ಪಂಚಾಯತಿಯ ಗೋಳಿಬೈಲ್ ಬೆಳ್ಳಂಬೆಳಗ್ಗೆ ಮನೆಯೊಂದರ ಅಂಗಳಕ್ಕೆ ಚಿರತೆ ಬಂದ ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಕಟ್ಟಿ ಹಾಕಲಾಗಿದ್ದ ನಾಯಿ ಮರಿಯನ್ನು ಎಳೆದೊಯ್ಯಲು ಯತ್ನ ಮಾಡಿದ್ದು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಣಪತಿ ಪರಮಯ್ಯ ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಚಿರತೆ ಪ್ರವೇಶಿಸಿತ್ತು. ಆದರೆ, ಕಟ್ಟಿಹಾಕಿದ್ದ ನಾಯಿಮರಿ ನಿದ್ದೆ ಮಾಡುತ್ತಿರುವಾಗ ಹೊಂಚುಹಾಕಿ ಕುತ್ತಿಗೆಗೆ ಬಾಯಿ ಹಾಕಿದೆ. ಆದರೆ, ನಾಯಿಯನ್ನು ಕಟ್ಟಿ ಹಾಕಿದ್ದರಿಂದ ಎಳೆದೊಯ್ಯಲಾಗದೇ, ನಾಯಿಯ ಚೀರಾಟಕ್ಕೆ ಬೆದರಿ ಅದನ್ನು ಟಲ್ಲಿಯೇ ಬಿಟ್ಟು ಪರಾರಿಯಾಗಿದೆ. ನಿನ್ನೆಯಷ್ಟೇ ಸ್ಥಳೀಯರ ಎರಡು ಆಕಳು, ಎರಡು ನಾಯಿಗಳನ್ನು ಚಿರತೆ ಕೊಂಡೊಯ್ದಿತ್ತು. ಮನೆಗಳ ಬಳಿ ಚಿರತೆ ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಆತಂಕ್ಕೆ ಒಳಗಾಗಿದ್ದಾರೆ.