ಗಾರ್ಮೆಂಟ್ಸ್‌ ನೌಕರರ ವೇತನ ಶೇ.14 ಹೆಚ್ಚಳ: 8800ರಿಂದ 13200 ಕನಿಷ್ಠ ವೇತನ ನಿಗದಿ

By Kannadaprabha News  |  First Published Jan 19, 2023, 5:23 AM IST

ರಾಜ್ಯದಲ್ಲಿನ ಗಾರ್ಮೆಂಟ್ಸ್‌, ಸ್ಪಿನ್ನಿಂಗ್‌ ಮಿಲ್‌ (ನೂಲುವ ಗಿರಣಿ), ರೇಷ್ಮೆಬಟ್ಟೆಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. 


ಬೆಂಗಳೂರು (ಜ.19): ರಾಜ್ಯದಲ್ಲಿನ ಗಾರ್ಮೆಂಟ್ಸ್‌, ಸ್ಪಿನ್ನಿಂಗ್‌ ಮಿಲ್‌ (ನೂಲುವ ಗಿರಣಿ), ರೇಷ್ಮೆಬಟ್ಟೆಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಕನಿಷ್ಠ ವೇತನ ಪರಿಷ್ಕರಿಸಬೇಕು ಎಂಬ ಕಾರ್ಮಿಕರ ಮನವಿಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯು 2017ರಲ್ಲಿ ಸಭೆ ನಡೆಸಿ ಪರಿಷ್ಕೃತ ಕನಿಷ್ಠ ವೇತನ ದರ ನಿಗದಿ ಮಾಡಿತ್ತು. ಬಳಿಕ 2019ರಲ್ಲಿ ನಡೆದಿದ್ದ ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರ ಒತ್ತಾಯದ ಮೇರೆಗೆ ಮತ್ತೆ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು. 2019ರಲ್ಲಿ ನಡೆದ ಸಭೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕನಿಷ್ಠ ವೇತನ ದರ ನಿಗದಿ ಮಾಡಲಾಗಿತ್ತು. 

ಈ ಎರಡು ಸಭೆಗಳಲ್ಲಿ ನಿಗದಿಯಾಗಿದ್ದ ಕನಿಷ್ಠ ವೇತನದಲ್ಲಿ ಯಾವುದನ್ನು ಜಾರಿ ಮಾಡಬೇಕು ಎಂಬ ಬಗೆಗಿನ ವಿಷಯವು ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇತ್ತೀಚೆಗೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ 2019ರಲ್ಲಿ ವಿವಿಧ ಕೆಲಸಗಳಿಗೆ ನಿಗದಿಯಾಗಿದ್ದ ಕನಿಷ್ಠ ವೇತನಕ್ಕೆ ಶೇ.14ರಷ್ಟು ಹೆಚ್ಚಳ ಮಾಡಿ ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

Tap to resize

Latest Videos

ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವೆ: ಸಿದ್ದರಾಮಯ್ಯ ಪುನರುಚ್ಚಾರ

ಯಾರ್ಯಾರಿಗೆ ಎಷ್ಟೆಷ್ಟು ಕನಿಷ್ಠ ವೇತನ?: ಬಟ್ಟೆಗಳ ತಯಾರಿಕೆ (ಗಾರ್ಮೆಂಟ್ಸ್‌), ವಿನ್ಯಾಸ ಹಾಗೂ ಟೈಲರಿಂಗ್‌ ಉದ್ದಿಮೆಗಳಲ್ಲಿನ ಅತಿ ಕುಶಲ ಕಾರ್ಮಿಕರಿಗೆ (ಡಿಸೈನರ್ಸ್‌, ಮಾರ್ಕ​ರ್‍ಸ್ ಅಂಡ್‌ ಕಟ​ರ್‍ಸ್, ದರ್ಜಿ ಹಾಗೂ ಇತರೆ) 10,990 ರು., ಕುಶಲ ಕಾರ್ಮಿಕರಿಗೆ (ದರ್ಜಿ-1ನೇ ದರ್ಜೆ, ಮುಖ್ಯಅಡಿಗೆಯವರು, ಚಾಲಕರು, ಕತ್ತರಿಸುವ ಯಂತ್ರ ಚಾಲಕ, ಪರೀಕ್ಷಕರು) 10,659 ರು., ಅರೆ ಕುಶಲ ಕಾರ್ಮಿಕರು (ದರ್ಜಿ-2ನೇ ದರ್ಜೆ, ಖಾಜಾ ಮಿಷನ್‌ ಆಪರೇಟರ್‌, ಇಸ್ತ್ರಿ ಮಾಡುವವರು ಹಾಗೂ ಇತರೆ) 10,397 ರು., ಕೌಶಲ್ಯವಿಲ್ಲದ ಸಿಬ್ಬಂದಿಗೆ (ಪ್ಯಾಕ್‌ ಮಾಡುವವ, ವಿತರಣೆ ಮಾಡುವವ, ಬಟ್ಟೆಹರಡುವವ, ಟ್ರಿಮ್‌ ಮಾಡುವವರು, ಮಾಲಿ, ವಾಚ್‌ ಮತ್ತು ವಾರ್ಡ್‌) 10,130 ರು. ನಿಗದಿ ಮಾಡಲಾಗಿದೆ.

ಇನ್ನು ಸ್ಪಿನ್ನಿಂಗ್‌ ಮಿಲ್ಸ್‌ ಉದ್ದಿಮೆಗಳಲ್ಲಿ ಉದ್ಯೋಗ ಮಾಡುವವರಿಗೆ ಅತಿ ಕುಶಲ ಕಾರ್ಮಿಕರಿಗೆ ತಿಂಗಳಿಗೆ 9,679 ರು., ಕುಶಲ ಕಾರ್ಮಿಕರಿಗೆ 9,434 ರು., ಅರೆ ಕುಶಲ ಕಾರ್ಮಿಕರಿಗೆ 8,962 ರು., ಕೌಶಲ್ಯವಿಲ್ಲದ ಕಾರ್ಮಿಕರಿಗೆ 8,715 ರು., ಕಚೇರಿ ಸಿಬ್ಬಂದಿಗಳಿಗೆ ಜವಾಬ್ದಾರಿಗಳ ಆಧಾರದ ಮೇಲೆ 8,883 ರು.ಗಳಿಂದ 11,050 ರು.ವರೆಗೆ ಕನಿಷ್ಠ ವೇತನ ನಿಗದಿ ಮಾಡಲಾಗಿದೆ.

ರೇಷ್ಮೆ ಬಟ್ಟೆಗಳ ಉದ್ದಿಮೆಗಳಲ್ಲಿ ಉದ್ಯೋಗ ಮಾಡುವ ಅತಿ ಕುಶಲ ಕಾರ್ಮಿಕರಿಗೆ (ಪ್ರೆಸ್ಸರ್ಸ್‌, ಗ್ಯಾಸರ್ಸ್‌, ಗ್ಯಾಸ್‌ಪ್ಲಾಂಟ್‌ ಅಟೆಂಡರ್‌ ಹಾಗೂ ಇತರೆ) ಮಾಸಿಕ 11,236 ರು., ಅತಿ ಕುಶಲ ಕಾರ್ಮಿಕ ವಿಭಾಗದಲ್ಲಿ ಹೆಡ್‌ ಡಿಸೈನರ್‌, ವೀವ​ರ್‍ಸ್ ಡಾಬಿ ವಿತ್‌ ಡ್ರಾಪ್‌ ಬಾಕ್ಸ್‌ನಂತರ ಕೆಲಸ ಮಾಡುವವರಿಗೆ 13,239 ರು., ಕುಶಲ ಕಾರ್ಮಿಕರಿಗೆ (ರೀಲರ್ಸ್‌, ಚಾಜ್‌ರ್‍ಮೆನ್‌, ಫೈರ್‌ಮ್ಯಾನ್‌, ಟ್ವಿಸ್ಟರ್‌, ಬ್ಯಾಂಡರ್ಸ್‌, ಗ್ಯಾಸ್‌ ಸ್ಪಿನ್ನ​ರ್‍ಸ್ ಹಾಗೂ ಇತರೆ) 11,056 ರು., ಟರ್ನ​ರ್‍ಸ್, ಸ್ಪಿನ್ನ​ರ್‍ಸ್, ಸಿಲ್ಕ್‌ವೇಸ್ಟ್‌ ಕ್ಲೀನ​ರ್‍ಸ್ರಂತಹ ಅರೆ ಕುಶಲ ಕಾರ್ಮಿಕರಿಗೆ 10,465 ರು. ನಿಗದಿ ಪಡಿಸಲಾಗಿದೆ.

ಬಟ್ಟೆಗಳಿಗೆ ಬಣ್ಣ ಹಾಕುವ (ಡೈ) ಮತ್ತು ಅಚ್ಚು ಹಾಕುವ (ಪ್ರಿಂಟ್‌) ಉದ್ದಿಮೆಗಳಲ್ಲಿನ ಉದ್ಯೋಗದಲ್ಲಿರುವ ಅತಿ ಕುಶಲ ಕಾರ್ಮಿಕರಿಗೆ (ಡಿಸೈನರ್‌, ಪ್ರಿಂಟರ್‌, ಮಿಕ್ಸರ್‌, ನೂಲನ್ನು ಕೆಮಿಕಲ್‌ನಲ್ಲಿ ಬೇಯಿಸುವವರು) ಮಾಸಿಕ 10,997 ರು., ಕುಶಲ ಕಾರ್ಮಿಕರಿಗೆ (ಎಲೆಕ್ಟ್ರಿಶಿಯನ್‌, ವೈಂಡರ್‌, ಫಿಟ್ಟರ್‌, ಫೈರ್‌ಮೆನ್‌ ಮತ್ತಿತರರಿಗೆ) 10,504 ರು., ಅರೆ ಕುಶಲ ಕಾರ್ಮಿಕರು (ಪ್ರಿಂಟಿಂಗ್‌ ಸಹಾಯಕ, ಸಹಾಯಕ ಆಪರೇಟರ್‌, ನೂಲು ಬಿಡಿಸುವವರು, ಟೇಪ್‌ಮ್ಯಾನ್‌) 9,572 ರು., ಕೌಶಲ್ಯ ಅಗತ್ಯವಿಲ್ಲದ ಕೆಲಸಗಳಿಗೆ (ಸ್ಪಿನ್ನಿಂಗ್‌ ಹೆಲ್ಪರ್ಸ್‌, ಪ್ಯಾಕರ್ಸ್‌, ಮಿಕ್ಸರ್ಸ್‌, ಫ್ರೆಂಕೂಲಿಸ್‌) 9,216 ರು., ಚಾಲಕರು 10,340 ರು., ಕ್ಲೀನರ್ಸ್‌ಗೆ (ಕಾರು, ಲಾರಿ) 9,023 ರು. ಕನಿಷ್ಠ ವೇತನ ನೀಡುವಂತೆ ಉದ್ಯೋಗದಾತರಿಗೆ ಸೂಚಿಸಲಾಗಿದೆ.

ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್‌ ಪಕ್ಷದ 3ನೇ ಭರವಸೆ

ಷರತ್ತುಗಳು ಏನು?: ಇನ್ನು ಆದೇಶದಲ್ಲಿ ಮಹಿಳೆಯರು, ಪುರುಷರು ಮತ್ತು ತೃತೀಯ ಲಿಂಗಿಗಳು ಒಂದೇ ರೀತಿಯ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ವೇತನ ನೀಡಬೇಕು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ಪರಿಗಣಿಸಬೇಕು. ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಬೇಕು. ಹಿಂದಿನ ಕ್ಯಾಲೆಂಡರ್‌ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಂಕಗಳ ಸರಾಸರಿ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳ ಮಾಡಬೇಕು ಎಂದು ಷರತ್ತು ಹಾಕಲಾಗಿದೆ.

click me!