ಕರ್ನಾಟಕದಲ್ಲಿ ಹೊಸದಾಗಿ 1,186 ಕೊರೋನಾ ಕೇಸ್, 24 ಮಂದಿ ಸಾವು

By Suvarna News  |  First Published Aug 9, 2021, 7:25 PM IST

* ಕರ್ನಾಟಕದಲ್ಲಿ ಹೊಸದಾಗಿ 1,186 ಕೊರೋನಾ ಕೇಸ್, 24 ಮಂದಿ ಸಾವು
* ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.89 
* 23,316 ಸಕ್ರಿಯ ಪ್ರಕರಣಗಳು


ಬೆಂಗಳೂರು, (ಆ.09): ರಾಜ್ಯದಲ್ಲಿ ಏರಿಕೆಯಾಗಿದ್ದ ಕೊರೋನಾ ಇದೀಗ ಮತ್ತೆ ಇಳಿಕೆಯತ್ತ ಸಾಗಿದೆ. ಇಂದು (ಆ.09) 1,32,192 ಪರೀಕ್ಷೆ ಮಾಡಲಗಿದ್ದುಮ, ಈ ಪೈಕಿ 1186 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನು 24 ಮಂದಿ ಮೃತಪಟ್ಟಿದ್ರೆ, 1776 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಪಾಸಿಟಿವಿಟಿ ದರ ಶೇಕಡ 0.89 ರಷ್ಟಿದೆ. 23,316 ಸಕ್ರಿಯ ಪ್ರಕರಣಗಳು ಇವೆ. ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Tap to resize

Latest Videos

ಕೊರೋನಾ 3ನೇ ಅಲೆ ಎದುರಿಸಲು ಮುಂಜಾಗ್ರತೆ ವಹಿಸಿ: ಕೇಂದ್ರ ಸಚಿವ ಆರ್‌ಸಿ

ರಾಜಧಾನಿ ಬೆಂಗಳೂರಿನಲ್ಲಿ 296 ಜನರಿಗೆ ಸೋಂಕು ತಗುಲಿದ್ದು, 410 ಮಂದಿ ಬಿಡುಗಡೆಯಾಗಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದಾರೆ. 8,378 ಸಕ್ರಿಯ ಪ್ರಕರಣಗಳು ಇವೆ. 

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ- 6, ಬೆಳಗಾವಿ-29, ಬೆಂಗಳೂರು ಗ್ರಾಮಾಂತರ-19, ಬೆಂಗಳೂರು ಗ್ರಾಮಾಂತರ-296, ಬೀದರ್-1, ಚಾಮರಾಜನಗರ-31, ಚಿಕ್ಕಬಳ್ಳಾಪುರ-7, ಚಿಕ್ಕಮಗಳೂರು-24, ಚಿತ್ರದುರ್ಗ-15, ದಕ್ಷಿಣ ಕನ್ನಡ-273, ದಾವಣಗೆರೆ-4, ಧಾರವಾಡ-1, ಗದಗ-3, ಕಲಬುರಗಿ-6, ಕೊಡಗು-83, ಕೋಲಾರ-28, ಕೊಪ್ಪಳ-5, ಮಂಡ್ಯ-29, ಮೈಸೂರು-82, ರಾಯಚೂರು-0, ರಾಮನಗರ-2, ಶಿವಮೊಗ್ಗ-34, ತುಮಕೂರು-40, ಉಡುಪಿ-81, ಉತ್ತರ ಕನ್ನಡ-30, ವಿಜಯಪುರ-1, ಯಾದಗಿರಿ-1.

click me!