* ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ
* 4 ಜಿಲ್ಲೆಗಳಲ್ಲಿ ಶೂನ್ಯ ಕೇಸ್
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
ಬೆಂಗಳೂರು, (ಸೆ.01): ರಾಜ್ಯದಲ್ಲಿ ಇಂದು (ಸೆ.01) 1159 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು. 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇನ್ನು ಕಳೆದ 24 ಗಂಟೆಗಳಲ್ಲಿ 1112 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2894827.
ಕೊರೋನಾ ಏರಿಕೆ; ಕೇಂದ್ರದಿಂದ ಕೇರಳಕ್ಕೆ ಖಡಕ್ ಎಚ್ಚರಿಕೆ!
ಇನ್ನುಳಿದಂತೆ ರಾಜ್ಯದಲ್ಲಿ 18412 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.66 % ಹಾಗೂ ಡೆತ್ ರೇಟ್ 1.81 % ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿಂದು 359 ಜನರಿಗೆ ಸೋಂಕು ತಗುಲಿದ್ದು, 232 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಜನರು ಮೃತಪಟ್ಟಿದ್ದಾರೆ. 7558 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-2, ಬಳ್ಳಾರಿ-6, ಬೆಳಗಾವಿ-1, ಬೆಂಗಳೂರು ಗ್ರಾಮಾಂತರ-359, ಬೀದರ್-0, ಚಾಮರಾಜನಗರ-9, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-48, ಚಿತ್ರದುರ್ಗ-7, ದಕ್ಷಿಣ ಕನ್ನಡ-191, ದಾವಣಗೆರೆ-8, ಧಾರವಾಡ-8, ಗದಗ-4, ಹಾಸನ-81, ಹಾವೇರಿ-0, ಕಲಬುರಗಿ-5, ಕೊಡಗು-95, ಕೋಲಾರ-32, ಕೊಪ್ಪಳ-3, ಮಂಡ್ಯ-20, ಮೈಸೂರು-91, ರಾಯಚೂರು-0, ರಾಮನಗರ-1, ಶಿವಮೊಗ್ಗ-11, ತುಮಕೂರು-34, ಉಡುಪಿ-91, ಉತ್ತರ ಕನ್ನಡ-37, ವಿಜಯಪುರ-4, ಯಾದಗಿರಿ-0.