ಬೆಂಗಳೂರು (ಸೆ.01): ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರದ ವಿಳಂಬ ಧೋರಣೆಗೆ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುವರ್ಣ ನ್ಯೂಸ್. ಕಾಂ ಜೊತೆಗೆ ಇಂದು ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಯೊಂದು ಧರ್ಮದ ಹಬ್ಬವೂ ಯುವಪೀಳಿಗೆಗೆ ಸಂಸ್ಕೃತಿಯನ್ನ ಹೇಳಿ ಕೊಡುತ್ತದೆ. ಗಣೇಶೋತ್ಸವಕ್ಕೆ ಇತಿಹಾಸವಿರೋ ಕಾರಣ ಅದು ಸಾರ್ವಜನಿಕ ಗಣೇಶೋತ್ಸವ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಎಲ್ಲಾ ಜಾತಿ, ವರ್ಗದವರು ಸೇರಿಕೊಂಡು ಆಚರಿಸಿದ್ದರು ಎಂದರು.
undefined
ಗಣೇಶೋತ್ಸವಕ್ಕೆ ಅನುಮತಿ ನೀಡಿ: ವಿಎಚ್‌ಪಿ ಮನವಿ
ಕಳೆದ ಬಾರಿ ಸಂಪೂರ್ಣ ಲಾಕ್ ಡೌನ್ ಇದ್ದ ಕಾರಣ ಜನರು ಬೇಡಿಕೆ ಇಟ್ಟಿರಲಿಲ್ಲ. ಆದರೆ ಈಗ ಮದುವೆಗೆ 400 ಜನರಿಗೆ ಪರ್ಮಿಷನ್, ಜನಾಶೀರ್ವಾದಕ್ಕೆ ಸಾವಿರಾರು ಜನರಿಗೆ ಅನುಮತಿ ಇದೆ. ಹೀಗಿರುವಾಗ ಗಣೇಶೋತ್ಸವಕ್ಕೆ ಅನುಮತಿ ಯಾಕಿಲ್ಲ? ಇಂಥ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ ಎಂದು ಯು ಟಿ ಖಾದರ್ ಪ್ರಶ್ನೆ ಮಾಡಿದರು.
ಗಣೇಶೋತ್ಸವ ಆಚರಣೆ ಒಂದು ದಿನದಲ್ಲಿ ತೀರ್ಮಾನಿಸುವ ಹಬ್ಬ ಅಲ್ಲ. ಅದರ ಮೂರ್ತಿ ರಚನೆ, ಪೆಂಡಾಲ್ ನಿರ್ಮಾಣ ಸೇರಿ ಹಲವು ವ್ಯವಸ್ಥೆ ಇದೆ. ತಡವಾಗಿ ಅನುಮತಿ ಕೊಟ್ಟರೆ ಶ್ರದ್ದೆ ಮತ್ತು ಪಾವಿತ್ರ್ಯತೆಯಿಂದ ಆಚರಣೆ ಹಿಂದೂ ಸಹೋದರರಿಗೆ ಹೇಗೆ ಸಾಧ್ಯ? ಆದಷ್ಟು ಬೇಗ ಇದನ್ನ ಅರ್ಥ ಮಾಡಿಕೊಂಡು ಸರ್ಕಾರ ಒಂದು ಸ್ಪಷ್ಟತೆ ಕೊಡಲಿ ಎಂದರು.
ಹೆಸರಿಗೆ ಬಂದ್ ಮಾಡಿದರೆ ಕೊರೋನಾ ಹೋಗಲು ಸಾಧ್ಯವಿಲ್ಲ. ಜನಾಶೀರ್ವಾದ, ಜನಪ್ರತಿನಿಧಿಗಳ ಕಾರ್ಯಕ್ರಮಗಳಿಗೆ ಮೊದಲು ಸಿಸ್ಟಂ ತನ್ನಿ ಅದು ಬಿಟ್ಟು ಗಣೇಶೋತ್ಸವ, ಮೊಹರಾಂ, ಗುಡ್ ಫ್ರೈಡೆ ನಿಲ್ಲಿಸೋ ಮೂಲಕ ಯಾವ ಸಂದೇಶ ಕೊಡುತ್ತೀರಿ. ಈ ನಿಯಮಗಳಲ್ಲಿ ರಾಜಕೀಯ ಬಿಟ್ಟು ವಿಜ್ಞಾನ ಮತ್ತು ಲಾಜಿಕ್ ಮುಖ್ಯವಾಗಿ ಗಮನಿಸಿ ಎಂದು ಖಡಕ್ ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಗಣೇಶೋತ್ಸವ : ಇನ್ನೂ ಗೊಂದಲದಲ್ಲಿಯೇ ಇರುವ ಸರ್ಕಾರ
ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟು ನಿಟ್ಟಿಗೆ ಮಾಜಿ ಸಚಿವ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ. ಆದರೆ ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..?
ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ. ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ? ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ. ಅಲ್ಲಿಂದ ಬರೋರು ಬರುತ್ತಾರೆ. ಹೋಗುವವರು ಹೋಗುತ್ತಾರೆ. ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.
ಆದೇಶವನ್ನ ಸಮರ್ಪಕವಾಗಿ ಜಾರಿ ಮಾಡುವ ಕೆಲಸ ಆಗುತ್ತಿಲ್ಲ. ಗಡಿನಾಡ ಜನರು ಕಂದಾಯವಾಗಿ ಡಿವೈಡ್ ಆಗಿದ್ದರೂ ಸಾಂಸ್ಕೃತಿಕ, ವ್ಯವಹಾರಿಕವಾಗಿ ಒಟ್ಟಾಗಿದ್ದೇವೆ. ನೀವು ಇದನ್ನ ಸರಿಯಾಗಿ ಅನುಷ್ಠಾನ ಮಾಡಲು ಯಾಕೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಒಟ್ಟಾಗಿ ಕುಳಿತು ಪ್ಲಾನ್ ಮಾಡಬಾರದು. ಎರಡು ಜಿಲ್ಲಾಧಿಕಾರಿ, ಎಂ.ಪಿ, ಎಂಎಲ್ ಎ ಕುಳಿತು ಮಾತನಾಡುವ ಅವಶ್ಯಕತೆ ಇದೆ ಎಂದರು.
ಕೋವಿಡ್ ನಿಯಂತ್ರಣ ಜೊತೆ ಜನರ ಸಮಸ್ಯೆ ಬಗ್ಗೆಯೂ ಮಾತನಾಡಲಿ. ನನ್ನ ಕ್ಷೇತ್ರ ಮುಡಿಪು ಕಾಲೇಜಿಗೆ ಗಡಿಯ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅವರಿಗೂ ಟೆಸ್ಟ್ ಮಾಡಬೇಕು, ಇದನ್ನ ಸರಿ ಪಡಿಸಿ. ವಿದೇಶಕ್ಕೆ ಹೋಗಲು ಎರಡು ಡೋಸ್ ನಲ್ಲಿ ಬಿಡುತ್ತಾರೆ. ಆದರೆ ಕರ್ನಾಟಕಕ್ಕೆ ಬಿಡಲ್ಲ. ಸುಪ್ರೀಂ ಕೋರ್ಟ್ ಆದೇಶ, ಕೇಂದ್ರ ಸರ್ಕಾರದ ಆದೇಶ ಇದ್ದರೂ ಬಿಡುವುದಿಲ್ಲ ಎಂದು ಹೇಳಿದರು.