ಕೊರೋನಾ ಕಂಟಕ: ಬೆಂಗಳೂರಲ್ಲಿ ಒಂದೇ ದಿನ 115 ಮಂದಿ ಐಸಿಯುಗೆ ದಾಖಲು

By Kannadaprabha NewsFirst Published Jul 9, 2020, 7:41 AM IST
Highlights

ಬುಧವಾರ ಬೆಂಗಳೂರು ನಗರದಲ್ಲಿ 1148 ಮಂದಿಗೆ ಸೋಂಕು, 20 ಮಂದಿ ಸಾವು| ಒಂದೇ ದಿನ 418 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ|ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 2,228ಕ್ಕೆ ಏರಿಕೆ|ಇನ್ನು 10,103 ಸಕ್ರಿಯ ಪ್ರಕರಣ|

ಬೆಂಗಳೂರು(ಜು.09): ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸ್ಫೋಟ ಮುಂದುವರೆದಿದ್ದು, ಬುಧವಾರ 1,148 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,509ಕ್ಕೆ ಏರಿಕೆಯಾಗಿದೆ.

"

Latest Videos

ಇದೇ ವೇಳೆ 22 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಸಮಾಧಾನಕ ಸಂಗತಿ 418 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಕೇವಲ 24 ಗಂಟೆಯಲ್ಲಿ ಸಾಮಾನ್ಯ ವಾರ್ಡ್‌ನಿಂದ 115 ಮಂದಿಯನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಈ ಮೂಲಕ ನಗರದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ.

ಬೆಂಗಳೂರನ್ನು ಕಾಡುತ್ತಿದೆ ‘ಚಿಕ್ಕಪೇಟೆ ವೈರಸ್‌’!

90 ವರ್ಷದ ವೃದ್ಧೆ ಸಾವು:

ನಗರದಲ್ಲಿ ಬುಧವಾರ 22 ಜನ ಮೃತಪಟ್ಟಿದ್ದು, ಒಂದೇ ದಿನ ಮೃತಪಟ್ಟ ಅತಿ ಹೆಚ್ಚಿನ ಎರಡನೇ ಸಂಖ್ಯೆಯಾಗಿದೆ. ಕಳೆದ ಜು.4 ರಂದು 24 ಮಂದಿ ಮೃತಪಟ್ಟಿದ್ದರು. ಮೃತಪಟ್ಟ 22 ಮಂದಿ ಪೈಕಿ ಏಳು ಮಹಿಳೆಯರು ಹಾಗೂ 15 ಪುರುಷರಾಗಿದ್ದಾರೆ. ಇವರಲ್ಲಿ 17 ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದು, ಉಳಿದ ಐವರಲ್ಲಿ ಓರ್ವ 14 ವರ್ಷ ಬಾಲಕನಾಗಿದ್ದಾನೆ. ಉಳಿದವರು 44, 42, 36 ಹಾಗೂ 34 ವರ್ಷದ ವ್ಯಕ್ತಿಗಳಾಗಿದ್ದಾರೆ. ಇನ್ನು 90 ವರ್ಷ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.

ಒಂದೇ ದಿನ 418 ಬಿಡುಗಡೆ:

ನಗರದಲ್ಲಿ ಬುಧವಾರ ಒಂದೇ ದಿನ ಬರೋಬ್ಬರಿ 418 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದು ಬೆಂಗಳೂರಿನಲ್ಲಿ ಒಂದೇ ದಿನ ಗುಣಮುಖರಾಗಿ ಬಿಡುಗಡೆಯಾದ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 2,228ಕ್ಕೆ ಏರಿಕೆಯಾಗಿದೆ. ಇನ್ನು 10,103 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!